ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ವೋಡಾಫೋನ್‌ನೊಂದಿಗೆ ಬೆಂಗಳೂರು ವಿವಿ ಒಪ್ಪಂದ

Update: 2019-02-14 16:44 GMT

ಬೆಂಗಳೂರು, ಫೆ.14: ತಾಂತ್ರಿಕ ಕೌಶಲ್ಯಗಳನ್ನು ಹೊಂದಿರುವ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಿ, ಅವರ ಸಾಮರ್ಥ್ಯ ಹೆಚ್ಚಿಸಲು ವೋಡಾಫೋನ್ ಇಂಡಿಯನ್ ಫೌಂಡೇಶನ್‌ನೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯ ಒಪ್ಪಂದ ಮಾಡಿಕೊಂಡಿದೆ.

ಬುಧವಾರ ನಗರದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ.ವೇಣುಗೋಪಾಲ್ ಹಾಗೂ ವೋಡಾಫೋನ್ ಐಡಿಯಾ ಸಿಎಸ್‌ಆರ್ ಮುಖ್ಯಸ್ಥ ಡಾ.ನಿಲಯ ರಂಜನ್ ಸಹಿ ಹಾಕಿ ಜಂಟಿಯಾಗಿ ಒಪ್ಪಂದದ ವಿಷಯವನ್ನು ವಿವರಿಸಿ, ಕ್ಯಾಂಪಸ್‌ನಲ್ಲಿ ವೊಡಾಫೋನ್ ಕಲಿಕೆಯ ಪ್ರಯೋಗಾಲಯವನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

ವೋಡಾಫೋನ್ ಫೌಂಡೇಶನ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯವು ಬೋಧನೆ ಹಾಗೂ ಅನುಭವದ ಕಲಿಕೆಗಾಗಿ ಪಠ್ಯಕ್ರಮವನ್ನು ಅಪ್‌ಡೇಟ್ ಮಾಡಲಾಗುವುದು. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಇತರೆ ವಿದ್ಯಾರ್ಥಿಗಳು ಕೆಲಸದ ಸ್ಥಳಕ್ಕೆ ತಕ್ಷಣವೇ ತೆಗೆದುಕೊಂಡು ಹೋಗುವಂತೆ ಪರಿಕರಗಳನ್ನು ಕೊಂಡೊಯ್ಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಇದೇ ವೇಳೆ ರಿಜಿಸ್ಟ್ರಾರ್ ಪ್ರೊ.ಬಿ.ಕೆ.ರವಿ, ಮೌಲ್ಯಮಾಪನ ಕುಲಸಚಿವ ಪ್ರೊ.ಸಿ.ಶಿವರಾಜು, ವಿತ್ತಾಧಿಕಾರಿ ಸಂಘಮಿತ್ರ ಹಾಗೂ ಯುವಿಸಿಇ ಪ್ರಾಂಶುಪಾಲ ಪ್ರೊ.ಎಚ್.ಎನ್.ರಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News