ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

Update: 2019-02-14 17:09 GMT

ಬೆಂಗಳೂರು, ಫೆ. 14: ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಆಶೀರ್ವಾದವನ್ನು ಪಡೆದುಕೊಂಡರು.

ಗುರುವಾರ ಬೆಳಗ್ಗೆ ಇಲ್ಲಿನ ವಿಜಯನಗರದಲ್ಲಿನ ಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪರಮೇಶ್ವರ್, ಆದಿಚುಂಚನಗಿರಿ ಮಠಕ್ಕೆ ಆಗಾಗ್ಗೆ ಬರುವ ರೂಢಿ ಇರುವುದರಿಂದ ಈಗಲೂ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡೆ ಎಂದರು.

ನಮ್ಮ ಕುಟುಂಬ ಆದಿಚುಂಚನಗಿರಿ ಮಠಕ್ಕೆ ಆಗಾಗ್ಗೆ ಭೇಟಿ ಕೊಡುವ ಸಂಪ್ರದಾಯ ಹೊಂದಿದೆ. ಅಂತೆಯೇ ಇಂದು ಭೇಟಿ ನೀಡಿದೆ. ನಾನು ಶಿಕ್ಷಣ ಕ್ಷೇತ್ರದಿಂದ ಬಂದಿರುವುದರಿಂದ ಶಿಕ್ಷಣ ಸಂಸ್ಥೆ ನಡೆಸುವ ಮಠಗಳು ಹೆಚ್ಚು ಆಪ್ತವೆನಿಸುತ್ತವೆ ಎಂದು ಹೇಳಿದರು.

ಸಿಟ್‌ಗೆ ಸಿದ್ಧ: ಆಪರೇಷನ್ ಕಮಲ ಆಡಿಯೋ ವಿಚಾರ ಸಂಬಂಧ ಸಿಟ್ ತನಿಖೆಗೆ ಸರಕಾರ ನೀಡಲು ಸಿದ್ಧವಿದೆ. ಆದರೆ, ಎಸ್‌ಐಟಿ ಬೇಡ ಎಂಬುದು ಬಿಜೆಪಿ ವಾದ. ಶೀಘ್ರವಾಗಿ ಹಾಗೂ ಸಮರ್ಪಕವಾಗಿ ತನಿಖೆ ಮಾಡುವ ಉದ್ದೇಶದಿಂದ ಎಸ್‌ಐಟಿಗೆ ನೀಡಲು ನಾವು ಸಿದ್ಧವಿದ್ದೇವೆ ಎಂದು ಅವರು ತಿಳಿಸಿದರು.

ಶಾಸಕರ ಬೆಂಬಲಿಗರೊಬ್ಬರ ಮೇಲೆ ಕಲ್ಲಿನ ದಾಳಿ ಖಂಡನಾರ್ಹ. ಆ ಕೃತ್ಯ ಎಸಗಿದವರ ಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಲೇ ಪ್ರತಿಕ್ರಿಯಿಸಿದ್ದಾರೆ. ಕಲ್ಲಿನಿಂದ ಹಲ್ಲೆ ಮಾಡುವ ನಡವಳಿಕೆ ಒಳ್ಳೆಯದಲ್ಲ ಎಂದು ಪರಮೇಶ್ವರ್ ಇದೇ ವೇಳೆ ಹೇಳಿದರು.

‘ಸ್ಕಿಲ್ ಡೆವಲಪ್ ಮಾಡುತ್ತೇವೆಂದು ಹೇಳಿ ಬಿಜೆಪಿ ಡೆವಲಪ್ ಮಾಡಿರುವ ಸ್ಕಿಲ್ ಒಂದೇ-ಹಳೇಯ ವಿಡಿಯೋಗಳನ್ನು ತಮಗೆ ಬೇಕಾದ ಹಾಗೇ ತಿರುಚುವುದು. ಮುತ್ಸದ್ದಿ ರಾಜಕಾರಣಿಯ ಸಾವನ್ನು ಅಪೇಕ್ಷಿಸುವುದಕ್ಕೂ ಚುನಾವಣಾ ಸಮಯದಲ್ಲಿ ವಿರೋಧ ಪಕ್ಷದವರಾಡಿದ ಮಾತನ್ನು ಲೇವಡಿ ಮಾಡುವುದಕ್ಕೂ ಇರುವ ವ್ಯತ್ಯಾಸ ಜನರಿಗೆ ಗೊತ್ತಿಲ್ಲವೆಂದು ಕೊಂಡಿದ್ದಾರೆಯೇ?’

-ಡಾ.ಜಿ.ಪರಮೇಶ್ವರ್ ಡಿಸಿಎಂ ಟ್ವಿಟ್ಟರ್ ಮೂಲಕ ಬಿಜೆಪಿಗೆ ತಿರುಗೇಟು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News