ಕ್ಲಬ್ ಮೇಲೆ ಸಿಸಿಬಿ ಪೊಲೀಸರ ದಾಳಿ: 18 ಜನರ ಬಂಧನ, 4.94 ಲಕ್ಷ ನಗದು ಜಪ್ತಿ

Update: 2019-02-14 17:52 GMT

ಬೆಂಗಳೂರು, ಫೆ.14: ನಗರದ ಖಾಸಗಿ ಕ್ಲಬ್‌ವೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 18 ಜನರನ್ನು ಬಂಧಿಸಿ, 4.94 ಲಕ್ಷ ರೂ. ವೌಲ್ಯದ ನಗದು ಹಾಗೂ ಪರಿಕರಣಗಳನ್ನು ಜಪ್ತಿ ಮಾಡಿದ್ದಾರೆ.

ಚಂದ್ರು(65), ಶಾಂತಕುಮಾರ್(46) ಸೇರಿ ಒಟ್ಟು 18 ಜನರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಇಲ್ಲಿನ ಸಹಕಾರನಗರ ಮುಖ್ಯರಸ್ತೆಯಲ್ಲಿರುವ ಸಹಕಾರ ನಗರ ಹೆಸರಿನ ಕ್ಲಬ್‌ನ 2ನೆ ಮಹಡಿಯಲ್ಲಿ ಕೆಲವರು, ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತರಿಂದ ಜೂಜಾಟಕ್ಕೆ ತೊಡಗಿಸಿದ್ದ, 4.94 ಲಕ್ಷ ರೂ. ನಗದು, 7 ಕಟ್ಟು ಇಸ್ಪೀಟ್ ಎಲೆಗಳು ಜಪ್ತಿ ಮಾಡಿ, ಇಲ್ಲಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News