ಭಾರತದ ಮೊಟ್ಟಮೊದಲ ಮಹಿಳಾ ವಿಮಾನ ಎಂಜಿನಿಯರ್ ಹಿನಾ ಜೈಸ್ವಾಲ್

Update: 2019-02-15 11:28 GMT

ಬೆಂಗಳೂರು, ಫೆ.15: ಭಾರತೀಯ ವಾಯುಪಡೆಗೆ ನಿಯೋಜಿತರಾದ ಚಂಡೀಗಢದ ಫ್ಲೈಟ್ ಲೆಫ್ಟಿನೆಂಟ್ ಹಿನಾ ಜೈಸ್ವಾಲ್ ದೇಶದ ಮೊಟ್ಟಮೊದಲ ಮಹಿಳಾ ವಿಮಾನ ಎಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶೇಷ ಕೌಶಲ ಬೇಡುವ ಸಂಕೀರ್ಣ ವಿಮಾನ ವ್ಯವಸ್ಥೆಯನ್ನು ನಿರ್ವಹಿಸುವ ಹಾಗೂ ಇದರ ಮೇಲೆ ನಿಗಾ ಇಡುವ ಕಾರ್ಯವನ್ನು ನಿಭಾಯಿಸಬೇಕಾಗುತ್ತದೆ.

ಭಾರತೀಯ ವಾಯುಪಡೆಯಲ್ಲಿ ವಿಮಾನ ಎಂಜಿನಿಯರ್ ಆಗಿ ಅವರನ್ನು ಕಾರ್ಯಾಚರಣೆ ಹೆಲಿಕಾಪ್ಟರ್ ಘಟಕಕ್ಕೆ ನಿಯೋಜಿಸಲಾಗಿದೆ. ಒತ್ತಡದ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಹೊಣೆ ಇವರದ್ದಾಗಿರುತ್ತದೆ. ಸಿಯಾಚಿನ್ ಹಿಮನದಿಯಿಂದ ಹಿಡಿದು ಅಂಡಮಾನ್ ಸಾಗರದವರೆಗೆ ಕ್ಲಿಷ್ಟ ಸ್ಥಿತಿಯಲ್ಲಿ ಇವರು ಕಾರ್ಯನಿರ್ವಹಿಸಬೇಕಾಗುತ್ತದೆ.

ಪಂಜಾಬ್ ವಿವಿಯಿಂದ ಎಂಜಿನಿಯರಿಂಗ್ ಪದವಿ ಪಡೆದ ಹಿನಾ, ತಮ್ಮ ಕನಸು ನನಸಾದ ಕ್ಷಣ ಇದು ಎಂದು ಬಣ್ಣಿಸಿದ್ದಾರೆ. ಬಾಲ್ಯದಿಂದಲೂ ಸೈನಿಕರ ಸಮವಸ್ತ್ರದಿಂದ ರೋಮಾಂಚನಗೊಳ್ಳುತ್ತಿದ್ದ ನನಗೆ ಇದೀಗ ಸೇನಾ ವಿಮಾನ ಎಂಜಿನಿಯರ್ ಆಗುವ ಅವಕಾಶ ದೊರಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News