ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ

Update: 2019-02-15 16:00 GMT

ಬೆಂಗಳೂರು, ಫೆ.15: ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್ ಬೆಂಕಿಯಿಂದ ಭಾಗಶಃ ಸುಟ್ಟು ಹಾನಿಗೀಡಾಗಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮನವರ್ತ್‌ಪೇಟೆಯ ಎಸ್‌ಡಿಎಂ ಲೇನ್‌ನಲ್ಲಿ ಮನೆಯೊಂದರ ಮುಂದೆ ರಾತ್ರಿ ಬೈಕ್ ನಿಲ್ಲಿಸಲಾಗಿತ್ತು. ಬೆಳಗಿನ ಜಾವ 1:30ರ ಸುಮಾರಿಗೆ ಈ ಬೈಕ್‌ಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಇದನ್ನು ಗಮನಿಸಿದ ಮನೆಯವರು ಬೆಂಕಿಯನ್ನು ನಂದಿಸಿದ್ದಾರೆ.

ಬೆಂಕಿಯಿಂದಾಗಿ ಶೇ.70ರಷ್ಟು ಭಾಗ ಬೈಕ್ ಸುಟ್ಟು ಹಾನಿಗೀಡಾಗಿದೆ. ಬೈಕ್‌ನಲ್ಲಿ ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದು ತಿಳಿದು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News