ಸರೋಜಿನಿ ಮಹಿಷಿ ವರದಿ ಜಾರಿಯಲ್ಲಿ ಐಟಿ ವಲಯ ಸೇರಿಸಲು ಒತ್ತಾಯ

Update: 2019-02-15 17:05 GMT

ಬೆಂಗಳೂರು, ಫೆ.15: ಸರೋಜಿನಿ ಮಹಿಷಿ ವರದಿ ಜಾರಿಯಲ್ಲಿ ಐಟಿ ವಲಯವನ್ನು ಸೇರಿಸಿಕೊಳ್ಳಬೇಕೆಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಎಂ.ಡಿ.ಗೋವಿಂದ ತಿಳಿಸಿದರು.

ಸರೋಜಿನಿ ಮಹಿಷಿ ವರದಿ ಜಾರಿ ಮಾಡುವ ರಾಜ್ಯ ಸರಕಾರದ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಆದರೆ, ಸ್ಥಾಯಿ ನಿಯಮಾವಳಿ(ಇಂಡಸ್ಟ್ರಿಯಲ್ ಎಂಪ್ಲಾಯ್‌ಮೆಂಟ್ ಸ್ಟಾಂಡಿಂಗ್ ಆರ್ಡರ್ ಆಕ್ಟ್) ಕೇವಲ ಉದ್ಯೋಗಕ್ಕೆ ಸೇರಿದ ನಂತರ ಅನ್ವಯವಾಗುತ್ತದೆ. ಹೀಗಾಗಿ ಈ ಕಾಯ್ದೆಯನ್ನು ಮತ್ತಷ್ಟು ಜನಪರವಾಗಿರುವಂತೆ ತಿದ್ದುಪಡಿ ತರಬೇಕಿದೆ. ಐಟಿ ವಲಯವನ್ನು ಶರತ್ತುಗಳಿಂದ ಹೊರತುಪಡಿಸಿ ಸರೋಜಿನಿ ಮಹಿಷಿ ವರದಿ ಜಾರಿಗೆ ಸರಕಾರ ಆದೇಶಿಸಿರುವುದು ಸರಿಯಲ್ಲ. ಖಾಸಗಿ ವಲಯದ ಉದ್ಯೋಗ ಸೃಷ್ಟಿಯಲ್ಲಿ ಐಟಿ ವಲಯ ಮೊದಲ ಸ್ಥಾನದಲ್ಲಿದೆ. ಹಾಗೂ ಸರಕಾರದಿಂದ ದೊಡ್ಡ ಫಲಾನುಭಾವಿ ನಮ್ಮ ರಾಜ್ಯದ ಐಟಿ ವಲಯ. ಹೀಗಾಗಿ ಐಟಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವಂತೆ ಪತ್ರಿಕಾ ಪ್ರಕಟನೆ ಮೂಲಕ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News