ಉದ್ಘಾಟನೆಯಾದ ಮರುದಿನವೇ ಕೈಕೊಟ್ಟ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು!

Update: 2019-02-16 06:37 GMT

ಹೊಸದಿಲ್ಲಿ, ಫೆ.16: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲ್ಲಿನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು,  ಬ್ರೇಕ್ ಜಾಮ್ ನಿಂದಾಗಿ ಸ್ವಲ್ಪ ಹೊತ್ತು ರೈಲಿನ  ಓಡಾಟ ಸ್ಥಗಿತಗೊಂಡಿತು.

ಶನಿವಾರ ಬೆಳಗ್ಗೆ ರೈಲು 200 ಕಿ.ಮೀ ಓಡಿದ ತಕ್ಷಣ ಟ್ರೈನ್ ನ ಕೊನೆಯ  ಬೋಗಿಯ ಬ್ರೇಕ್ ಜಾಮ್ ಆಗಿದ್ದರಿಂದ   ನಾಲ್ಕು ಬೋಗಿಗಳ ಕೆಳಗೆ  ದಟ್ಟವಾದ ಹೊಗೆ   ಕಾಣಿಸಿಕೊಂಡಿತು ಎನ್ನಲಾಗಿದೆ. ರೈಲು ವಾರಣಾಸಿಯಿಂದ ದಿಲ್ಲಿಗೆ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

ದಿಲ್ಲಿಯಿಂದ 200 ಕಿ.ಮೀ ದೂರದ ತುಂಡ್ಲಾದಲ್ಲಿ ರೈಲಿನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ಬಳಿಕ ಸಮಸ್ಯೆ ನಿವಾರಣೆಗೊಂಡ  ರೈಲು ಬೆಳಗ್ಗೆ 8:15ರ ಹೊತ್ತಿಗೆ ದಿಲ್ಲಿಗೆ ಪ್ರಯಾಣ ಬೆಳೆಸಿತು.    ರೈಲು ಹಳಿಯಲ್ಲಿ ಜಾನುವಾರಗಳ ಓಡಾಟ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು  ಫೆ.17ರಿಂದ ವಾಣಿಜ್ಯೋದ್ದೇಶದಿಂದ ಸಂಚಾರ ಆರಂಭಿಸಲಿದೆ..  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News