ಡಿಕೆಎಸ್​ಸಿ ಜಿದ್ದಾ ಯುನಿಟ್ ನೂತನ ಪದಾಧಿಕಾರಿಗಳ ಆಯ್ಕೆ

Update: 2019-02-16 12:37 GMT

ಜಿದ್ದಾ,ಫೆ.16: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ರಿ) ಜಿದ್ದಾ ಯೂನಿಟ್ ಇದರ ಸ್ವಲಾತ್ ಮಜ್ಲಿಸ್ ಹಾಗೂ ಮಹಾಸಭೆ ಅಮಾನ್ ಬಂಟ್ವಾಳ ರವರ ಕಿರಾಅತ್ ನೊಂದಿಗೆ ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲರವರ ನೇತೃತ್ವದಲ್ಲಿ ಜಿದ್ದಾ ರೋಲೆಕ್ಸ್ ಹೋಟೆಲ್ ನಲ್ಲಿ ಜರುಗಿತು.

ಕಾರ್ಯಕ್ರಮವನ್ನು ಸಯ್ಯಿದ್ ಝಕರಿಯ್ಯ ಕೋಯ ಸಖಾಫಿ ತಂಙಳ್ ನಾವುಂದ ಉದ್ಘಾಟಿಸಿದರು. ಕಳೆದ ವರ್ಷದ ವರದಿ ಮತ್ತು ಲೆಕ್ಕ ಪತ್ರ ಅಮಾನ್ ವಾಮಾಂಜೂರು ಮಂಡಿಸಿದರು. ನಂತರ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಇಬ್ರಾಹಿಂ ಹಾಜಿ ಕನ್ನಂಗಾರ್ 2019-20 ರ ಸಾಲಿನ ನೂತನ ಪದಾಧಿಕಾರಿಗಳನ್ನು ಘೋಷಿಸಿದರು.

ಗೌರವಾಧ್ಯಕ್ಷರಾಗಿ ಸಯ್ಯಿದ್ ಝಕರಿಯ್ಯಾ ಸಖಾಫಿ ತಂಙಳ್ ನಾವುಂದ ಅಧ್ಯಕ್ಷರಾಗಿ ಸಯ್ಯಿದ್ ಮುಹಮ್ಮದ್ ಅಲ್ ಬುಖಾರಿ ತಂಙಳ್ ಉಚ್ಚಿಲ ನೇಮಕಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಉಚ್ಚಿಲ, ಕೋಶಾಧಿಕಾರಿಗಳಾಗಿ ಅಮಾನ್ ಬಂಟ್ವಾಳ, ಇಸ್ಮಾಯಿಲ್ ಹೈದ್ರೋಸ್ ಉಪ್ಪಳ್ಳಿ, ಉಪಾಧ್ಯಕ್ಷರಾಗಿ ಹೈದರ್ ಜೋಗಿಬೆಟ್ಟು, ಸುಲೈಮಾನ್ ಬಂಡಾಡಿ, ಜೊತೆ ಕಾರ್ಯದರ್ಶಿಗಳಾಗಿ ಅಮಾನ್ ಬಂಟ್ವಾಳ, ರಫೀಕ್ ಎರ್ಮಾಳ್, ಶಂಸುದ್ದೀನ್ ಮಡಂತ್ಯಾರು ಆಯ್ಕೆಯಾದರು. ಆಡಿಟರ್ ಗಳಾಗಿ ಆದಂ ಕುಂಞಿ ಗೂಡಿನಬಳಿ, ಸಲಹೆಗಾರರಾಗಿ ಇಲ್ಯಾಸ್ ಉಪ್ಪಿನಂಗಡಿ, ಅಝೀಝ್ ಮರವೂರು, ಶುಕೂರು ಕನ್ನಂಗಾರ್, ಹೈದರ್ ಹಾಜಿ, ಇಕ್ಬಾಲ್ ಹಾಜಿ ಉಳ್ಳಾಲ, ಸಂಚಾಲಕರಾಗಿ ಹಾರಿಸ್ ಉಪ್ಪಿನಂಗಡಿ, ಶಬೀರ್ ಅರಸಿನಮಕ್ಕಿ, ಇಮ್ರಾನ್ ಶಿರ್ವ ಹಾಗೂ ಸದಸ್ಯರುಗಳಾಗಿ ಹಾರೂನ್ ಬಂಟ್ವಾಳ, ಮುಹಮ್ಮದ್ ಬಜಾಲ್, ಅಬ್ಬಾಸ್ ಹಾಜಿ ಕುಕ್ಕಾಜೆ, ಅಝೀಝ್ ಕಬಕ, ಸುಹೈಲ್, ಅಶ್ರಫ್ ಬೆದ್ರೋಡಿ, ಖಾದಿರ್ ವಾಮಾಂಜೂರು, ಇಬ್ರಾಹಿಂ ಕಿನ್ಯ, ಮುಹಮ್ಮದ್ ಪುಂಜಾಲ್ಕಟ್ಟೆ ನೇಮಕಗೊಂಡರು.

ಕಾರ್ಯಕ್ರಮವನ್ನು ಇಸ್ಮಾಯಿಲ್ ಹೈದ್ರೋಸ್ ಉಪ್ಪಳ್ಳಿ ಸ್ವಾಗತಿಸಿ, ಹಾರೂನ್ ಬಂಟ್ವಾಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News