ಗಾಂಧೀ ಮಾರ್ಗದಿಂದ ಅನಿಷ್ಟಗಳಿಗೆ ಮುಕ್ತಿ: ವೊಡೇ ಪಿ.ಕೃಷ್ಣ

Update: 2019-02-16 16:58 GMT

ಬೆಂಗಳೂರು, ಫೆ.16: ಗಾಂಧೀ ಚಳವಳಿಯಿಂದಲಷ್ಟೇ ಭ್ರಷ್ಟಾಚಾರ, ಜಾತೀಯತೆ, ಬಡತನ ನಿರ್ಮೂಲನೆ ಸಾಧ್ಯ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೊಡೇ ಪಿ. ಕೃಷ್ಣ ಅಭಿಪ್ರಾಯಪಟ್ಟರು.

ಗಾಂಧಿ ಭವನದಲ್ಲಿ ವಿವಿಧ ಸಂಸ್ಥೆಗಳು ಆಯೋಜಿಸಿದ್ದ ಭೂದಾನ ಚಳುವಳಿಯ ಹರಿಕಾರ ಸಂತ ವಿನೋಬಾ ಭಾವೆ 125 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿನೋಬಾ ಭಾವೆಯು ಗಾಂಧಿಯ ತತ್ವಗಳನ್ನು ಅನುಸರಿಸುವ ಮೂಲಕ ಸಾವಿರಾರು ಮೈಲಿಗಳ ಪಾದಯಾತ್ರೆ ಮಾಡಿದರು. ಅಲ್ಲದೆ, ಉಳ್ಳವರು ಬಡವರಿಗೆ ಭೂದಾನ ಮಾಡುವಂತೆ ಪ್ರೋತ್ಸಾಹಿಸಿದರು ಎಂದು ನುಡಿದರು.

ಗಾಂಧೀಜಿಯವರಿಗೆ ಗೀತಪಾಠವನ್ನು ಹೇಳುತ್ತಿದ್ದ ವಿನೋಬಾ ಭಾವೆ ಅವರು, ಅಧ್ಯಾತ್ಮ ಇಲ್ಲದೆ ವಿಜ್ಞಾನ ಇಲ್ಲ ಎಂದು ನಂಬಿದ್ದರು. ಗಾಂಧೀಜಿಯವರ ವಿಚಾರಧಾರೆಯ ಪ್ರವರ್ತಕರಾಗಿದ್ದ ಅವರು ಸಮಾಜ ಕಲ್ಯಾಣಕ್ಕಾಗಿ ಸರಳ ಜೀವನ ಅನುಸರಿಸಿ ದೇಶದಲ್ಲಿ 6 ಆಶ್ರಮಗಳನ್ನು ಸ್ಥಾಪಿಸಿದ್ದರು. ಕನ್ನಡ ಭಾಷೆ ಓದಲು ಸುಲಭ ಸರಳ ಎಂದಿದ್ದ ಅವರು, ಕನ್ನಡ ಭಾಷೆಯ ಬಗ್ಗೆ ಅಪಾರ ಒಲವು ಹೊಂದಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬ್ರಹ್ಮ ವಿದ್ಯಾಮಂದಿರದ ಸಂಸ್ಥಾಪಕಿ ಉಷಾ ಜೆ. ವೋರಾ, ಕೃಷ್ಣ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ರುಕ್ಮಾಂಗದ, ಗಾಂಧಿ ಸ್ಮಾರಕ ನಿಧಿ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪಸೇರಿದಂತೆ ಇನ್ನಿತರಿದ್ದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News