ಹುತಾತ್ಮ ಯೋಧರಿಗೆ ನಮನ: ಚಿಕ್ಕಪೇಟೆಯ ಅಂಗಡಿ, ಮುಂಗಟ್ಟು ಬಂದ್

Update: 2019-02-16 16:57 GMT

ಬೆಂಗಳೂರು, ಫೆ.16: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ನಗರದ ಚಿಕ್ಕಪೇಟೆ ವ್ಯಾಪ್ತಿಯ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.

ಚಿಕ್ಕಪೇಟೆ ವ್ಯಾಪಾರಿಗಳ ಸಂಘ ಸೇರಿದಂತೆ ಇತರರು, ಸ್ವಯಂ ಪ್ರೇರಿತ ಅಂಡಿಗಳನ್ನು ಬಂದ್ ಮಾಡಿ, ಮೆರವಣಿಗೆ ನಡೆಸಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

ಪುಲ್ವಾಮ ಬಳಿ ನಡೆದಿರುವ ಈ ದುರ್ಘಟನೆ ಯಾವುದೇ ನಾಗರಿಕ ಸಮಾಜವೂ ಸಹಿಸುವುದಿಲ್ಲ. ದೇಶಕ್ಕಾಗಿ ಹಗಲಿರುಳೂ ಶ್ರಮಿಸುವ ನಮ್ಮ ವೀರ ಯೋಧರನ್ನು ನಾವು ಸ್ಮರಿಸುತ್ತೇನೆ. ಆದರೆ, ಉಗ್ರರ ಆತ್ಮಾಹುತಿ ದಾಳಿಗೆ ಒಳಗಾಗಿ 40ಕ್ಕೂ ಹೆಚ್ಚು ಮಂದಿ ಭಾರತೀಯ ಯೋಧರು ಕ್ಷಣ ಮಾತ್ರದಲ್ಲಿ ಹುತಾತ್ಮರಾಗಿದ್ದಾರೆ. ಇದಕ್ಕೆ ನಮ್ಮ ಭಾರತೀಯ ಸೇನೆ ಹಾಗೂ ಕೇಂದ್ರದ ಮೋದಿ ಸರಕಾರ ಉತ್ತರ ನೀಡಬೇಕು ಎಂದು ಅಂಗಡಿ ವ್ಯಾಪಾರಿಗಳು ಶ್ರದ್ಧಾಂಜಲಿ ಸಭೆಯಲ್ಲಿ ಒತ್ತಾಯಿಸಿದರು.

ಪ್ರದರ್ಶನ ಬಂದ್?: ಚಿಕ್ಕಪೇಟೆಯಲ್ಲಿ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ, ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಅಭಿನಯ ಚಿತ್ರಮಂದಿರಲ್ಲಿ ಪ್ರದರ್ಶನವನ್ನು ಮುಂದೂಡಲಾಗಿತ್ತು ಎಂದು ತಿಳಿದುಬಂದಿದೆ. ಮೆರವಣಿಗೆ ವೇಳೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News