ಪ್ರವಾಸೋದ್ಯಮ ಪರಿಚಯಿಸುವ ಕಿರುಚಿತ್ರ ಜಾಹೀರಾತಿಗೆ ಸಿಎಂ ಚಾಲನೆ

Update: 2019-02-17 15:42 GMT

ಬೆಂಗಳೂರು, ಫೆ.17: ರಾಜ್ಯ ಪ್ರವಾಸಿ ತಾಣಗಳನ್ನು ದೇಶ-ವಿದೇಶದಲ್ಲಿ ಪರಿಚಯಿಸುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಹೊಸ ಪರಿಕಲ್ಪನೆಯಲ್ಲಿ ರೂಪಿಸಿರುವ ಕಿರುಚಿತ್ರ, ಜಾಹೀರಾತುಗಳನ್ನು ಒಳಗೊಂಡ ‘ನಿಮ್ಮ ಸಾಹಸಗಾಥೆಗಳನ್ನು ನೀವೇ ರಚಿಸಿ ಬ್ರಾಂಡ್’ ಆಂದೋಲನಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಚಾರೊಂದಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಪ್ರವಾಸಿ ತಾಣಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ರೂಪಿಸಿರುವ ಕಿರುಚಿತ್ರ ಹಾಗೂ ಜಾಹಿರಾತುಗಳು ಅದ್ಭುತವಾಗಿ ಮೂಡಿಬಂದಿದೆ ಎಂದು ಇಲಾಖೆಗೆ ಅಭಿನಂದಿಸಿದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾತನಾಡಿ, ವಿಶ್ವ ಪಾರಂಪರಿಕ ತಾಣಗಳು, ರಾಷ್ಟ್ರೀಯ ಉದ್ಯಾನ ಹಾಗೂ ವನ್ಯಜೀವಿಗಳು ಅಭಯಾರಣ್ಯಗಳು, ಗಿರಿಧಾಮಗಳು, ಜಲಪಾತಗಳು, ಬೀಚ್‌ಗಳು ಹೀಗೆ ಹಲವಾರು ಸುಂದರ ತಾಣಗಳನ್ನು ಪರಿಚಯಿಸಲಾಗಿದೆ. ಇವೆಲ್ಲವೂ ಕರ್ನಾಟಕ ಪ್ರವಾಸವನ್ನು ಅವಿಸ್ಮರಣೀಯವಾಗಿಸುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು. ಕರ್ನಾಟಕವು ವೈವಿಧ್ಯಮಯ ಭೂದೃಶ್ಯದ ರಾಜ್ಯವಾಗಿದ್ದು ಪ್ರವಾಸಿಗರಿಗೆ ವಿಭಿನ್ನ ಅನುಭವದೊಂದಿಗೆ ಆಜೀವ ನೆನಪುಗಳನ್ನು ಒದಗಿಸುತ್ತದೆ. ಪುರಾತನ ದೇವಸ್ಥಾನ, ಸ್ಮಾರಕಗಳು, ಅದ್ಭುತ ದಟ್ಟವಾದ ಕಾಡುಗಳು, ಸಮುದ್ರ ತೀರಗಳು, ರೋಮಾಂಚಕ ಗಿರಿಧಾಮಗಳು ಮತ್ತು ಹಲವು ಪುಣ್ಯ ಕ್ಷೇತ್ರಗಳನ್ನು ಒಳಗೊಂಡಿರುವ ನಮ್ಮ ನಾಡು ವೈವಿಧ್ಯಮಯ ಆಸಕ್ತಿಗಳುಳ್ಳ ಪ್ರವಾಸಿಗರಿಗೆ ಸೂಕ್ತ ಸ್ಥಳವಾಗಿದೆ ಎಂದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೆಶಕ ಕುಮಾರ್ ಪುಷ್ಕರ್, ವಸತಿ ಹಾಗೂ ವಿಹಾರಧಾಮದ ವ್ಯವಸ್ಥಾಪಕ ನಿರ್ದೆಶಕ ವಿಜಯ್ ಶರ್ಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News