ಬಿಬಿಎಂಪಿ ಬಜೆಟ್: ಪರಿಶಿಷ್ಟರ ಮನೆಗಳ ನಿರ್ಮಾಣಕ್ಕೆ 100 ಕೋಟಿ ಘೋಷಣೆ

Update: 2019-02-18 14:59 GMT

ಬೆಂಗಳೂರು, ಫೆ.18: ಎಸ್ಸಿ-ಎಸ್ಟಿ ಪಂಗಡದವರಿಗೆ ವೈಯಕ್ತಿಕ ಮನೆ ಹೊಂದಲು ಆರ್ಥಿಕ ಸಹಾಯಕ್ಕಾಗಿ 100 ಕೋಟಿ ಅನುದಾನ ನೀಡಲಾಗಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಹೇಳಿದರು.

ಪಾಲಿಕೆಯ ಎಲ್ಲ 198 ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಾಗೂ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು 15 ಲಕ್ಷ ವೆಚ್ಚದಲ್ಲಿ ಪ್ರತಿವಾರ್ಡ್‌ಗೆ ಒಂದರಂತೆ ಆರ್.ಓ.ಪ್ಲಾಂಟ್‌ಗಳನ್ನು ನಿರ್ಮಿಸಲು 30 ಕೋಟಿ ಮೀಸಲಿಡಲಾಗಿದೆ.

ಸ್ಮಶಾನ, ರುದ್ರಭೂಮಿಯಲ್ಲಿ ಕೆಲಸ ಮಾಡುತ್ತಿರುವ ಎಸ್ಸಿ-ಎಸ್ಟಿ ಸಮುದಾಯಕ್ಕೆ ಮನೆ ನಿರ್ಮಿಸಿಕೊಡಲು ಒಂದು ಕೋಟಿ ನೀಡಲಾಗಿದೆ. ಎಸ್ಸಿ ಸಮುದಾಯದ ಆರ್ಥಿಕ ಸ್ವಾವಲಂಬಿಗಳಾಗಲು ವೈಯುಕ್ತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 10 ಕೋಟಿ ಮೀಸಲಿಡಲಾಗಿದೆ.

ಎಸ್ಸಿ-ಎಸ್ಟಿ ವೈಯುಕ್ತಿಕ ಮನೆ ಸಂಬಂಧ ವಂತಿಕೆ ಮೊತ್ತ ನೀಡಲು ಸ್ಲಂಬೋರ್ಡ್‌ಗೆ 12 ಕೋಟಿ, ಪರಿಶಿಷ್ಟರು ವಾಸಿಸುತ್ತಿರುವ ಪ್ರದೇಶಗಳ ಮೂಲಭೂತ ಸೌಲಭ್ಯಕ್ಕಾಗಿ 60 ಕೋಟಿ ನೀಡಲಾಗಿದೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವೈಯುಕ್ತಿಕ ಮನೆ ನಿರ್ಮಾಣಕ್ಕೆ ಸಹಾಯ ಮಾಡಲು 50 ಕೋಟಿ ಮೀಸಲಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News