ಬಹರೈನ್: 'ಬ್ಯಾರಿ ಪ್ರೀಮಿಯರ್ ಲೀಗ್ 2019'

Update: 2019-02-19 07:47 GMT

ಬಹರೈನ್, ಫೆ. 19: ಪ್ರತಿಷ್ಟಿತ ಕ್ರೀಡಾಂಗಣದಲ್ಲಿ 'ಬಹರೈನ್ ಬ್ಯಾರೀಸ್ ಲೀಗ್ 2019' ನಡೆಯಲಿದೆ. ಗಲ್ಫ್ ರಾಷ್ಟ್ರದಲ್ಲಿ ನಡೆಯುವ ಈ ಚೊಚ್ಚಲ ಬ್ಯಾರೀಸ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ನ ಆಟಗಾರರ ಬಿಡ್ಡಿಂಗ್ ಮುಕ್ತಾಯಗೊಂಡಿದ್ದು ಎಂಟು ತಂಡಗಳು ಸೆಣಸಾಡಲಿವೆ. 

ಚಾರಿಟಿಗಾಗಿ ನಡೆಯುವ ಈ ಒಂದು ಪಂದ್ಯಾಕೂಟಕ್ಕೆ ಪ್ರಮುಖ ಗಣ್ಯರೂ ಶುಭವನ್ನು ಕೋರಿದ್ದಾರೆ.

ಅಂತರ್ ರಾಷ್ಟ್ರೀಯ ಮಟ್ಟದಲ್ಲೂ ಆಡುವಂತಹ ಆಟಗಾರರು ಬ್ಯಾರಿ ಸಮುದಾಯದಲ್ಲಿದ್ದು ಅವರನ್ನು ಗುರುತಿಸಿ ಸೂಕ್ತ ಪ್ರೋತ್ಸಾಹವನ್ನು ನೀಡುವ ಉದ್ದೇಶ ಕೂಡ ಬ್ಯಾರಿ ಲೀಗ್ ಗೆ ಇದೆ. ಬಹರೈನ್ ಬ್ಯಾರೀಸ್ ಲೀಗ್ ನಲ್ಲೇ ಸೆಣಸಾಡುವ ಅತ್ಯಂತ ಬಲಿಷ್ಟ ತಂಡ ಎಂದೇ ಬಿಂಬಿತವಾದ ಡೆಸರ್ಟ್ ಸ್ಟ್ರೈಕರ್ಸ್ ತಂಡದ ಜೆರ್ಸಿ ಬಿಡುಗಡೆ ಸಮಾರಂಭ ಮೊಹರ್ರಕ್ ಅಲ್ಮಾಸ್ ಹಾಲ್ ನಲ್ಲಿ ನಡೆಯಿತು.

ತಂಡದ ಮಾಲಕರಾದ ಅಬ್ದುಲ್ ಸತ್ತಾರ್ , ಜಬ್ಬಾರ್ , ರಹ್ಮತ್ ಮತ್ತು ಶಮೀರ್ ಅವರು ಉಪಸ್ಥಿತರಿದ್ದರು. ಗಣ್ಯರಾಗಿ ಆಗಮಿಸಿದ ಮೊಯಿದೀನ್ , ಯಾಕೂಬ್ , ಬಷೀರ್ ಅವರು ಡೆಸರ್ಟ್ ಸ್ಟ್ರೈಕರ್ಸ್ ತಂಡದ ಕಪ್ತಾನ ರಿಝ್ವಾನ್ ಅವರಿಗೆ ತಂಡದ ಜೆರ್ಸಿ ಕೊಡುವುದರ ಮೂಲಕ ಜೆರ್ಸಿ ಬಿಡುಗಡೆಗೊಳಿಸಲಾಯಿತು.

ತಂಡದ ಕಪ್ತಾನ ರಿಝ್ವಾನ್ ಮಾತನಾಡಿ ತಂಡಕ್ಕೆ ಉಪಯುಕ್ತ ಸಲಹೆಗಳನ್ನು ನೀಡಿದರು ಮತ್ತು ಬಹರೈನ್ ಬ್ಯಾರೀಸ್ ಲೀಗ್ ನಲ್ಲಿ ಚಾಂಪಿಯನ್ ಆಗುವ ಸೂಚನೆಯನ್ನು ನೀಡಿದರು . ಈಗಾಗಲೇ ಡೆಸರ್ಟ್ ಸ್ಟ್ರೈಕರ್ಸ್ ಕಠಿಣ ಅಭ್ಯಾಸದಲ್ಲಿ ತೊಡಗಿದ್ದು ಬ್ಯಾರೀಸ್ ಲೀಗ್ ನಲ್ಲಿ ಅಬ್ಬರಿಸುವ ಸೂಚನೆಯನ್ನು ನೀಡಿದೆ. ತಂಡದ ಮಾಲಕರಾದ ಅಬ್ದುಲ್ ಸತ್ತಾರ್ , ಜಬ್ಬಾರ್ , ರಹ್ಮತ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಫ್ವಾನ್ ಶಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಹೆಚ್ಚಿನ ಮಾಹಿತಿಗಾಗಿ ಶಾಫಿ +973 66666488, ನಿಹಾಲ್ +973 34046303, ಆಸಿಫ್ +973 33339457 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News