ಮಸ್ಕತ್: ಕೆಸಿಎಫ್ ಡೇ ಆಚರಣೆ

Update: 2019-02-20 04:43 GMT

ಒಮನ್, ಫೆ.20: ಕೆಸಿಎಫ್ ಒಮನ್  ಮಸ್ಕತ್  ಝೋನ್ ವತಿಯಿಂದ ಕೆಸಿಎಫ್ ಡೇ ಹಾಗೂ ಮೆಂಬರ್ಶಿಪ್ 2019  ಕ್ಯಾಂಪೈನ್ ಕಾರ್ಯಾಗಾರವು ಗೊಬ್ರ ಮದ್ರಸತುಲ್ ಹುದಾ ದಲ್ಲಿ ಇತ್ತೀಚೆಗೆ ಝೋನ್ ಅಧ್ಯಕ್ಷ ಮುಖ್ತಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

 ಸೈಫುದ್ದೀನ್ ತಂಙಳ್ ಎರುಮಾಡ್ ದುಆ ದೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು  ಮುಸ್ತಫಾ ಸಖಾಫಿ ಉದ್ಘಾಟಿಸಿದರು.

ಕೆಸಿಎಫ್ ನ್ಯಾಷನಲ್ ಸೆಕ್ರೆಟರಿ ಹನೀಫ್ ಸಅದಿ ಕೆಸಿಎಫ್ ನಡೆದುಬಂದ ಹಾದಿಯನ್ನು ಹಾಗೂ ಧ್ಯೇಯ ವನ್ನು ಸವಿಸ್ತಾರವಾಗಿ ವಿವರಿಸಿದರು.

ಸಲೀಂ  ಮಿಸ್ಬಾಹಿ ಹಾಗೂ ಕಲಂದರ್ ಬಾವ ಹುಸ್ನಿ ಮತ್ತು ಉಬೈದುಲ್ಲಾ ಸಖಾಫಿ ಕೆಸಿಎಫ್ ಡೇ ಯ ಮಹತ್ವವನ್ನು ವಿವರಿಸಿದರು. ಮಸ್ಕತ್ ಝೋನ್ ಸದಸ್ಯತ್ವ ಅಭಿಯಾನ ನಿರ್ದೇಶಕರಾಗಿ ಇರ್ಫಾನ್ ಗೊಬ್ರ ಇವರನ್ನು ಆರಿಸಲಾಯಿತು.

ಸೈಯದ್ ಝೈನುಲ್ ಆಬಿದೀನ್ ತಂಙಳ್ ಎಣ್ಮೂರು ದುಆಗೈದರು.

 ದ್ವಿತೀಯ ಹಂತದ ಅಸ್ಸುಫ್ಫಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ರಫೀಖ್ ಸಾಸ್ತಾನ, ದ್ವೀತಿಯ ಸ್ಥಾನ ಪಡೆದ ನವಾಝ್ ಮಣಿಪುರ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.

ಕೆಸಿಎಫ್ ಪ್ರತಿಭೋತ್ಸವ-2018ರ ಸ್ವಾಗತ ಸಮಿತಿ ಕನ್ವೀನರ್ ಅಬ್ಬಾಸ್ ಮರಕಡ ಸುಳ್ಯ ಇವರನ್ನು ಕೆಸಿಎಫ್ ಒಮನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಕೆಸಿಎಫ್ ಒಮನ್ ರಾಷ್ಟ್ರೀಯ ಸಮಿತಿಯ ನಾಯಕರಾದ ಇಬ್ರಾಹೀಂ ಅತ್ರಾಡಿ ಹಾಜಿ, ಸಮೀರ್ ಉಸ್ತಾದ್, ಗಫ್ಫಾರ್ ನಾವುಂದ ಹಾಜಿ, ಆರಿಫ್ ಕೊಡಿ, ಸಂಶುದ್ದೀನ್ ಪಾಲ್ತಡ್ಕ ಸಂದರ್ಭೊಚಿತವಾಗಿ ಮಾತನಾಡಿದರು.

ಕಾರ್ಯಕರ್ತರಾದ ವಾಸಿಂ ಗಾಲ, ಇರ್ಫಾನ್ ಗೊಬ್ರ, ಹನೀಫ್ ಅಂರಾತ್, ಲತೀಫ್ ತೋಡಾರ್ ರುವಿ ಕೆಸಿಎಫ್  ಜೊತೆಗಿನ ಅನುಭವವನ್ನು ಹಂಚಿದರು. ಖಾಸಿಂ ಪೊಯ್ಯತಬೈಲು ಸ್ವಾಗತಿಸಿದರು. ನವಾಝ್  ಮಣಿಪುರ  ವಂದಿಸಿದರು.

ಸಭೆಯಲ್ಲಿ ಗಾಲ, ಅಸೈಬ, ರುವಿ, ಅಮೆರಾತ್ ಸೆಕ್ಟರ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News