ಕೆಎಸ್‌ಆರ್‌ಟಿಸಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

Update: 2019-02-20 16:27 GMT

ಬೆಂಗಳೂರು, ಫೆ. 20: ಸಮನ್ವಯ ಕನ್ನಡ ಸಂಘ ಮತ್ತು ಕೆಎಸ್‌ಆರ್‌ಟಿಸಿ ಸಹಯೋಗದೊಂದಿಗೆ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಹಾಗೂ ಪುಷ್ಪ ನಮನ ಅರ್ಪಿಸಲಾಯಿತು.

ಬುಧವಾರ ನಗರದ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಸಿ.ಕಳಸದ, ಪುಲ್ವಾಮಾದಲ್ಲಿ 44 ಯೋದರು ಹುತಾತ್ಮರಾಗಿದ್ದಕ್ಕೆ ಇಡೀ ವಿಶ್ವವೇ ಮರುಗುತ್ತಿದೆ. ದೇಶದ ಈ ವೀರ ಯೋಧರಿಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು ಮತ್ತು ಅವರ ಕುಟುಂಬಕ್ಕೆ ಧೈರ್ಯ ತುಂಬುವ ಮೂಲಕ ಸಾಂತ್ವನ ಹೇಳಬೇಕು ಎಂದು ಹೇಳಿದರು.

ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ, ಕೆಎಸ್‌ಆರ್‌ಟಿಸಿಯು ಮಾ.8 ರಂದು ಮಹಿಳಾ ದಿನಾಚರಣೆ ದಿನ ಸಂದರ್ಭದಲ್ಲಿ,  ಗುರು ಅವರ ಪತ್ನಿಯನ್ನು ಕೇಂದ್ರ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸಾಂತ್ವನ ಹಾಗೂ ಸಂಸ್ಥೆಯ ವತಿಯಿಂದ ಆಗುವ ನೆರವನ್ನು ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಸಿ.ಕಳಸದ, ಕನ್ನಡ ಸಂಘದ ಗೌರವಾಧ್ಯಕ್ಷರಾದ ಮಹೇಶ್ ಜೋಶಿ, ಬ್ರಿಗೇಡಿಯರ್ ಎಸ್.ಬಿ.ಸಜ್ಜನ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News