ಗೂಗಲ್ ಕಚೇರಿಯಲ್ಲಿ ಡೈನೊಸಾರ್ ಇದೆ ಎನ್ನುವುದು ನಿಮಗೆ ಗೊತ್ತೇ?

Update: 2019-02-21 12:07 GMT

ಪ್ರತಿದಿನ ಬೆಳಿಗ್ಗೆ ಹೆಚ್ಚಿನವರು ಮೊದಲು ತೆರೆಯುವುದು ಗೂಗಲ್ ಹೋಮ್ ಪೇಜ್‌ನ್ನೇ. ಗೂಗಲ್‌ನಿಂದಾಗಿಯೇ ಅಂತರ್ಜಾಲ ಎಂಬ ಮಹಾಸಾಗರದಲ್ಲಿ ಯಾವುದೇ ವಿಷಯದ ಬಗ್ಗೆ ಮಾಹಿತಿಯು ಕ್ಷಣಾರ್ಧದಲ್ಲಿ ನಮಗೆ ಲಭ್ಯವಾಗುತ್ತಿದೆ. ಈ ಸರ್ಚ್ ಇಂಜಿನ್ ಬಗ್ಗೆ ನಿಮಗೆ ಗೊತ್ತಿಲ್ಲದಿರಬಹುದಾದ ಆಸಕ್ತಿಕರ ಮಾಹಿತಿಗಳು ಇಲ್ಲಿವೆ.

ಪ್ರತಿದಿನ 620 ಮಿಲಿಯನ್ ಜನರು ಗೂಗಲ್ ಹೋಮ್‌ಪೇಜ್ ಅನ್ನು ಬಳಸುತ್ತಾರೆ ಮತ್ತು ಯಾವುದೇ ಒಂದು ಸೆಕೆಂಡ್‌ನಲ್ಲಿ ಗೂಗಲ್‌ನಲ್ಲಿ ಎರಡು ಮಿಲಿಯನ್ ಹುಡುಕಾಟಗಳು ನಡೆಯುತ್ತಿರುತ್ತವೆ.

 ಗೂಗಲ್‌ನ ಹೋಮ್‌ಪೇಜ್ ಇತರ ಯಾವುದೇ ಜಾಲತಾಣಕ್ಕಿಂತ ಬೇಗನೇ ಲೋಡ್ ಆಗುತ್ತದೆ. ಇದೇ ಕಾರಣದಿಂದ ಜನರು ಅಂತರ್ಜಾಲವು ಕೆಲಸ ಮಾಡುತ್ತಿದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲು ಗೂಗಲ್‌ನ್ನು ಮೊದಲು ತೆರೆಯುತ್ತಾರೆ.

gooogle.com,gogle.com,googlr.com ತನ್ನ ಬ್ರಾಂಡ್ ಹೆಸರಿನ ಪಾವಿತ್ರ್ಯವನ್ನು ರಕ್ಷಿಸಲು ಗೂಗಲ್ ತನ್ನ ಕಂಪನಿಯ ಹೆಸರಿನ ಪ್ರತಿಯೊಂದು ಅಕ್ಷರಕ್ಕೂ ಟ್ರೇಡ್‌ಮಾರ್ಕ್ ಪಡೆದುಕೊಂಡಿದೆ. ಅದು ಇತ್ಯಾದಿ ಗೂಗಲ್‌ನ ಅತ್ಯಂತ ಸಾಮಾನ್ಯ ತಪ್ಪು ಸ್ಪೆಲ್ಲಿಂಗ್‌ಗಳನ್ನೂ ಖರೀದಿಸಿದೆ.

'I'm Feeling Lucky'

ಗೂಗಲ್‌ನ   ಬಟನ್‌ನ ಉಪಯೋಗವು ನಿಜವಾಗಿ ಯಾರಿಗೂ ತಿಳಿದಿಲ್ಲವಾದರೂ ಅದಕ್ಕಾಗಿ ಕಂಪನಿಯು ಸುಮಾರು 110 ಮಿ.ಡಾ.ಗಳನ್ನು ಪಾವತಿಸುತ್ತಿದೆ. ಏಕೆ? ಈ ಬಟನ್ ಫಲಿತಾಂಶಗಳ ಪಟ್ಟಿಯನ್ನೇ ತೋರಿಸುವ ಬದಲು ನಿಮ್ಮನ್ನು ನೇರವಾಗಿ ಮೊದಲ ಫಲಿತಾಂಶಕ್ಕೇ ಕರೆದೊಯ್ಯುತ್ತದೆ ಮತ್ತು ಇದು ಸರ್ಚ್ ಇಂಜನ್‌ನ ಜಾಹೀರಾತು ಆದಾಯಕ್ಕೆ ಕತ್ತರಿ ಹಾಕುತ್ತದೆ. ಬಳಕೆದಾರರು ಸರ್ವಾನುಮತದಿಂದ ಅದರ ಪರವಾಗಿಮತ ಹಾಕಿದ್ದರಿಂದ ಈ ಬಟನ್ ಈಗಲೂ ಅಸ್ತಿತ್ವದಲ್ಲಿದೆ.

ಗೂಗಲ್ ತನ್ನ ಕಚೇರಿಯಲ್ಲಿ ಡೈನೊಸಾರ್ ಹೊಂದಿದ್ದು,ಇದಕ್ಕೆ ಸ್ಟಾನ್ ಎಂದು ನಾಮಕರಣ ಮಾಡಲಾಗಿದೆ. ಕಚೇರಿಯ ಕಟ್ಟಡದ ಬಳಿ ಉತ್ಖನನ ಸಂದರ್ಭ ಟ್ರೈರಾನೋಸಾರಸ್ ರೆಕ್ಸ್‌ನ ಅಸ್ಥಿಪಂಜರ ಪತ್ತೆಆಗಿದ್ದು,ಗೂಗಲ್ ಅದನ್ನು ಖರೀದಿಸಿ ಕಚೇರಿಯಲ್ಲಿ ಪ್ರದರ್ಶನಕ್ಕಿಟ್ಟಿದೆ.

ಗೂಗಲ್ ಪ್ರಾಣಿಗಳನ್ನು,ವಿಶೇಷವಾಗಿ ನಾಯಿಮತ್ತು ಮೇಕೆಗಳನ್ನು ಪ್ರೀತಿಸುತ್ತದೆ. ಈ ಅಂಶ ಕಂಪನಿಯ ನೀತಿ ಸಂಹಿತೆಯಲ್ಲಿಯೂ ಅಡಕವಾಗಿದೆ. ತಮ್ಮ ಸಾಕುನಾಯಿಗಳನ್ನು ಮಾತ್ರವಲ್ಲ,ಮೇಕೆಗಳನ್ನೂ ತಮ್ಮೊಂದಿಗೆ ಕರೆತರಲು ತನ್ನ ಉದ್ಯೋಗಿಗಳಿಗೆ ಗೂಗಲ್ ಅವಕಾಶ ನೀಡುತ್ತದೆ ಮತ್ತು ಅವು ಕಂಪನಿಯ ಕ್ಯಾಂಪಸ್‌ನಲ್ಲಿ ಆರಾಮವಾಗಿ ಓಡಾಡಿಕೊಂಡಿರುತ್ತವೆ.

ಗೂಗಲ್ ತನ್ನ ಮುಖ್ಯ ಪ್ರತಿಸ್ಪರ್ಧಿ ಮೊಝಿಲ್ಲಾಕ್ಕೆ ಪ್ರತಿ ವರ್ಷ ದೊಡ್ಡ ಮೊತ್ತದ ಹಣವನ್ನು ಪಾವತಿಸುತ್ತಿದೆ. ಫೈರ್‌ಫಾಕ್ಸ್‌ನಂತಹ ಓಪನ್-ಸೋರ್ಸ್ ಬ್ರೌಸರ್‌ಗಳನ್ನು ಉತ್ಪಾದಿಸುವ ಮೊಝಿಲ್ಲಾವನ್ನು ಗೂಗಲ್ ತನ್ನ ಪಾಲುದಾರನೆಂದು ಪರಿಗಣಿಸಿದೆ. ಈ ಹಣಕ್ಕೆ ಪ್ರತಿಯಾಗಿ ಫೈರ್‌ಫಾಕ್ಸ್ ಗೂಗಲ್ ಸರ್ಚ್ ಇಂಜಿನ್‌ನ್ನು ಡಿಫಾಲ್ಟ್ ಆಗಿ ಬಳಸುತ್ತದೆ.

ವಿಶ್ವದಲ್ಲಿಯೇ ಅತ್ಯಂತ ಬೃಹತ್ ಅನುವಾದಕರ ಜಾಲವನ್ನು ಹೊಂದಿರುವ ಗೂಗಲ್ ನಿಜವಾದ ಅಂತರರಾಷ್ಟ್ರೀಯ ಕಂಪನಿಯಾಗಿದೆ. ತನ್ನ ಭಾಷೆಗಳ ಪಟ್ಟಿಯಲ್ಲಿ ಅದು ಕಳೆದ 50 ವರ್ಷಗಳಿಂದಲೂ ಪ್ರಸಾರದಲ್ಲಿರುವ ಸ್ಟಾರ್ ಟ್ರೆಕ್ ಯೂನಿವರ್ಸ್ ಸರಣಿಯಲ್ಲಿನ ಪಾತ್ರಗಳು ಮಾತನಾಡುವ ಕಾಲ್ಪನಿಕ ಭಾಷೆ ಕ್ಲಿಂಗಾನ್‌ನ್ನೂ ಹೊಂದಿದೆ.

ಗೂಗಲ್ ತನ್ನ ಮೊದಲ ಡೂಡಲ್‌ನ್ನು 1998ರಲ್ಲಿ ಪ್ರಕಟಿಸಿತ್ತು. ಕಂಪನಿಯ ಸಹ ಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಅವರು ರಜೆಯಲ್ಲಿ ಬರ್ನಿಂಗ್ ಮ್ಯಾನ್ ಉತ್ಸವಕ್ಕೆ ತೆರಳಿದ್ದಾರೆ ಎನ್ನುವುದನ್ನು ತಿಳಿಸುವ ಸರಳ ಉದ್ದೇಶ ಈ ಡೂಡಲ್‌ನದಾಗಿತ್ತು.

ಇನ್ನೊಂದು ಪ್ರಮುಖ ಟೆಕ್ ಸಂಸ್ಥೆ ಯಾಹೂ 1997ರಲ್ಲಿ ಗೂಗಲ್‌ನ್ನು ಖರೀದಿಸುವ ಅವಕಾಶವನ್ನು ಕೈಬಿಟ್ಟಿದ್ದು ಬಹುಶಃ ಅದು ಮಾಡಿದ್ದ ಅತ್ಯಂತ ಕೆಟ್ಟ ತಪ್ಪು ಆಗಿತ್ತು. ಆಗ ಗೂಗಲ್‌ನ್ನು ಕೇವಲ ಒಂದು ಮಿಲಿಯನ್ ಡಾಲರ್‌ಗೆ ಖರೀದಿಸುವ ಕೊಡುಗೆ ಯಾಹೂ ಮುಂದಿತ್ತು,ಆದರೆ ಯಾಹೂ ಅದನ್ನು ನಿರಾಕರಿಸಿತ್ತು. 20 ವರ್ಷಗಳ ಬಳಿಕ ಈಗ ಗೂಗಲ್‌ನ ಮೌಲ್ಯ 110,000 ಮಿಲಿಯನ್‌ಗಳು!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News