ಸಾರ್ವಜನಿಕ ಸಾರಿಗೆ ಬಳಕೆಗೆ ಸ್ಮಾರ್ಟ್‌ವಾಚ್ ಉಡುಗೊರೆ!

Update: 2019-02-22 18:39 GMT

ದುಬೈ, ಫೆ. 21: ರವಿವಾರ ಕಾರುಗಳನ್ನು ಬಿಟ್ಟು ಹೆಚ್ಚು ಪರಿಸರ ಸ್ನೇಹಿಯಾಗಿರುವ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ದುಬೈ ಹಾಗೂ ಸಮೀಪದ ಎಮಿರೇಟ್‌ಗಳ ಜನರನ್ನು ದುಬೈ ಮುನಿಸಿಪಾಲಿಟಿ ಒತ್ತಾಯಿಸಿದೆ.

ಈ ಆಂದೋಲನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ದುಬೈ ಮುನಿಸಿಪಾಲಿಟಿಯು, ಕಾರಿಲ್ಲದೆ ಯುಎಇಯಲ್ಲಿ ತಿರುಗಾಡುವ ರಚನಾತ್ಮಕ ವಿಧಾನಗಳನ್ನು ತಿಳಿಸುವಂತೆ ಜನರನ್ನು ಆಹ್ವಾನಿಸಿದೆ. ಉತ್ತಮ ರಚನಾತ್ಮಕ ವಿಧಾನಕ್ಕೆ ಸ್ಮಾರ್ಟ್‌ವಾಚೊಂದನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News