ಇಂಗ್ಲೆಂಡ್‌ನಿಂದ ಹೊಸ ಮಾದರಿಯ ‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿ

Update: 2019-02-22 19:03 GMT

ಲಂಡನ್, ಫೆ.22: 2020ರಲ್ಲಿ ಆರಂಭವಾಗುವ ನೂತನ ಮಾದರಿಯ ‘100 ಎಸೆತಗಳ ಕ್ರಿಕೆಟ್’ ಟೂರ್ನಿ ನಡೆಸುವುದನ್ನು ಇಂಗ್ಲೆಂಡ್ ಹಾಗು ವೇಲ್ಸ್ ಕ್ರಿಕೆಟ್ ಮಂಡಳಿ ಗುರುವಾರ ಖಚಿತಪಡಿಸಿವೆ. ಇದನ್ನು ‘ದಿ ಹಂಡ್ರೆಡ್’ ಎಂದೂ ಕರೆಯಲಾಗುತ್ತದೆ.

5 ವಾರಗಳಿಗಿಂತ ಹೆಚ್ಚು ಅವಧಿಗೆ ನಡೆಯುವ ಟೂರ್ನಿಯಲ್ಲಿ ಎಂಟು ನಗರಪ್ರದೇಶದ ತಂಡಗಳು ಭಾಗವಹಿಸಲಿದ್ದು ಪ್ರತಿ ಇನಿಂಗ್ಸ್‌ಗೆ 100 ಎಸೆತಗಳು ಇರುತ್ತವೆ. ಪ್ರತಿ 10 ಎಸೆತಗಳಿಗೆ ‘ಎಂಡ್’ನ್ನು ಬದಲಿಸಲಾಗುತ್ತದೆ.

ಬೌಲರ್‌ಗಳು 5 ಅಥವಾ 10 ಸತತ ಎಸೆತಗಳನ್ನು ಎಸೆಯಬಹುದು. ಪಂದ್ಯದಲ್ಲಿ ಬೌಲರ್‌ವೊಬ್ಬ ಗರಿಷ್ಠ 20 ಎಸೆತಗಳನ್ನು ಎಸೆಯಲು ಅವಕಾಶವಿದೆ. ಪ್ರತಿ ತಂಡಕ್ಕೆ 25 ಎಸೆತಗಳ ಪವರ್‌ಪ್ಲೇ ಕೂಡ ಇದ್ದು ಎರಡೂವರೆ ನಿಮಿಷಗಳ ಟೈಮ್ ಔಟ್ ಕೂಡ ತೆಗೆದುಕೊಳ್ಳಬಹುದಾಗಿದೆ.

‘‘ಈ ಟೂರ್ನಿಯು ಕ್ರಿಕೆಟ್‌ಗೆ ಬಹಳಷ್ಟು ಜನರನ್ನು ಸೆಳೆಯಲು ಅನುಕೂಲವಾಗಲಿದೆ’’ ಎಂದು ಇಸಿಬಿಯ ಮುಖ್ಯ ಕಾರ್ಯನಿರ್ವಾಹಕ ಟಾಮ್ ಹ್ಯಾರಿಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News