×
Ad

ಜಯಲಕ್ಷ್ಮೀ ಉಪಾಧ್ಯಯ

Update: 2019-02-23 19:33 IST

ಉಡುಪಿ, ಫೆ.23: ಅಂಬಲಪಾಡಿಯ ವಿ. ರಾಘವೇಂದ್ರ ಉಪಾಧ್ಯಾಯರ ಪತ್ನಿ ಜಯಲಕ್ಷ್ಮಿ ಉಪಾಧ್ಯಾಯ ಶುಕ್ರವಾರ ನಿಧನ ಹೊಂದಿದರು. 76 ವರ್ಷ ಪ್ರಾಯದ ಅವರು ಪತಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಅಂಬಲಪಾಡಿಯ ಶ್ರೀಭಗಿನೀ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದ ಇವರು ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿಯ ಬೆಳವಣಿಗೆಯಲ್ಲಿ ಪೂರ್ಣ ಸಹಕಾರ ನೀಡಿದ್ದರು.

ಇವರ ನಿಧನಕ್ಕೆ ಅಂಬಲಪಾಡಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಹಾಗೂ ಕಾರ್ಯದರ್ಶಿ ಕೆ.ಜೆ ಕೃಷ್ಣ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News