ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಜಾಗೃತೆ ವಹಿಸಲು ಕೆಎಸ್ಸಾರ್ಟಿಸಿ ಪ್ರಯಾಣಿಕರಿಗೆ ಸೂಚನೆ

Update: 2019-02-23 17:29 GMT

ಬೆಂಗಳೂರು, ಫೆ. 23: ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ ಸಾರ್ವಜನಿಕ ಪ್ರಯಾಣಿಕರು ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಜಾಗೃತೆ ವಹಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸಲಹೆ ಮಾಡಿದ್ದಾರೆ.

ಇಲ್ಲಿನ ಮೈಸೂರು ರಸ್ತೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಸಾರಿಗೆ ಬಸ್‌ನಲ್ಲಿ ಹತ್ತಿ ಟಿಕೆಟ್ ಪಡೆದು ಪಕ್ಕ ಕುಳಿತುಕೊಳ್ಳುವ ಅಮಾಯಕ ಮಹಿಳೆಯರ ಜತೆ ಮಾತು ಬೆಳೆಸಿ, ವಿಶ್ವಾಸಗಳಿಸಿ, ನಂತರ ಅವರಿಗೆ ಮತ್ತು ಬರುವ ಪಾನೀಯ ನೀಡಿ ಆಭರಣ, ನಗದು ದೋಚಿ ಹೋಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸಂಶಯ ವ್ಯಕ್ತಿಗಳ ಚಿತ್ರ ನೀಡಿ ಮಾಹಿತಿ ನೀಡುವಂತೆ, ನಿಗಮದ ಭದ್ರತಾ ಇಲಾಖೆಗೆ ಸೂಚಿಸಲಾಗಿದೆ. ಇಂದು ನಿಗಮದ ಮೈಸೂರು ರಸ್ತೆ ಬಸ್ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಜಾಗ್ರತೆ ವಹಿಸಿದ್ದು, ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಓರ್ವ ಮೈಸೂರು ನಿವಾಸಿ ಮಹಿಳೆ ವಿಚಾರಣೆ ಮಾಡಲಾಗಿದೆ. ಈ ಕುರಿತು ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಮಾಹಿತಿಗೆ ಮೈಸೂರು ರಸ್ತೆಯಲ್ಲಿನ ಕೆಎಸ್ಸಾರ್ಟಿಸಿ ಉಪಮುಖ್ಯ ಭದ್ರತಾ ಜಾಗೃತಾಧಿಕಾರಿ ಮೊಬೈಲ್ ಸಂಖ್ಯೆ- 77609 90563ಅನ್ನು ಸಂಪಕಿಸಲು ಸಂಸ್ಥೆ ಪ್ರಕಟಣೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News