ದ.ಆಫ್ರಿಕ ವಿರುದ್ಧ ಲಂಕೆಗೆ ಐತಿಹಾಸಿಕ ಟೆಸ್ಟ್ ಸರಣಿ ಜಯ

Update: 2019-02-23 19:08 GMT

ಪೋರ್ಟ್ ಎಲಿಝಬೆತ್, ಫೆ.23: ಒಶಾದ ಫೆರ್ನಾಂಡೊ ಹಾಗೂ ಕುಸಾಲ್ ಮೆಂಡಿಸ್ ಅವರ ಸಾಹಸಮಯ ಪ್ರದರ್ಶನದ ನೆರವಿನಿಂದ ಶ್ರೀಲಂಕಾ ತಂಡ ದ.ಆಫ್ರಿಕ ವಿರುದ್ಧದ 2ನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಶನಿವಾರ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಸರಣಿಯನ್ನು 2-0ಯಿಂದ ಕ್ಲೀನ್‌ಸ್ವೀಪ್ ಮಾಡಿದೆ.

 ಈ ಜಯದ ಮೂಲಕ ಲಂಕಾ ಪಡೆ ದ.ಆಫ್ರಿಕದಲ್ಲಿ ಟೆಸ್ಟ್ ಸರಣಿ ಜಯಿಸಿದ ಏಶ್ಯದ ಪ್ರಥಮ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾಟಕೀಯ ಹಾಗೂ ಅನಿರೀಕ್ಷಿತ ತಿರುವು ಕಂಡ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ 1 ವಿಕೆಟ್‌ನ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೂರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಫೆರ್ನಾಂಡೊ(ಅಜೇಯ 75) ಹಾಗೂ ಮೆಂಡಿಸ್(ಅಜೇಯ 84) 163 ರನ್ ಸೇರಿಸುವ ಮೂಲಕ ಜಯವನ್ನು ಸುಲಭವಾಗಿಸಿದರು. ಶ್ರೀಲಂಕಾಗೆ ದ.ಆಫ್ರಿಕ 197 ರನ್‌ಗಳ ಗೆಲುವಿನ ಗುರಿಯನ್ನು ನೀಡಿತ್ತು.

 ಆಫ್ರಿಕದ ಯಾವುದೇ ಬೌಲರ್‌ಗಳೂ ಸ್ಥಿರವಾದ ಲಯ ಕಂಡುಕೊಳ್ಳಲು ವಿಫಲರಾದರು. ಟೆಸ್ಟ್ ನ ಮೊದಲ ಎರಡು ದಿನದಲ್ಲಿ 31 ವಿಕೆಟ್‌ಗಳು ಪತನವಾಗಿದ್ದವು. ಶ್ರೀಲಂಕಾದ ಈ ಸರಣಿ ವಿಜಯ ಇತ್ತೀಚಿನ ಕ್ರಿಕೆಟ್ ಇತಿಹಾಸದಲ್ಲಿ ಮಹಾ ಅಚ್ಚರಿಯಾಗಿ ಪರಿಣಮಿಸಿದೆ. ದ.ಆಫ್ರಿಕ ಈ ಹಿಂದೆ ತವರಿನಲ್ಲಿ ಆಡಿದ 7 ಟೆಸ್ಟ್ ಸರಣಿಗಳಲ್ಲಿ ಜಯ ಸಾಧಿಸಿತ್ತು. ದ.ಆಫ್ರಿಕಾಕ್ಕೆ ಬರುವ ಮುನ್ನ ಶ್ರೀಲಂಕಾ 7 ಟೆಸ್ಟ್‌ಗಳಲ್ಲಿ 6ರಲ್ಲಿ ಸೋತು 1ರಲ್ಲಿ ಡ್ರಾ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News