ಶಾಹು ಮತ್ತು ತಿಲಕ್

Update: 2019-02-24 04:23 GMT

ಶೇ.90 ಮಂದಿ ಹಸಿವಿನಿಂದ ಬಳಲುತ್ತಿರುವಾಗ ಶೇ.10 ಮಂದಿ ಬ್ರೆಡ್ ಮೇಲೆ ಹಾಕಲು ಬೆಣ್ಣೆ ಕೇಳುತ್ತಿರುವುದು ಈ ಜನರಿಗೆ ಸಮಾಜದ ಬಗ್ಗೆ ಇರುವ ಧೋರಣೆಯನ್ನು ತೋರಿಸುತ್ತದೆ ಎಂದು ಶಾಹು, ತಿಲಕ್ ಅವರನ್ನು ಟೀಕಿಸಿದ್ದರು

ತಿಲಕ್ ಅವರು ಮಹಾತ್ಮಾ ಫುಲೆಗಿಂತ ಕಿರಿಯರಾಗಿದ್ದರೆ ಶಾಹುಗಿಂತ ಹಿರಿಯರಾಗಿದ್ದರು. ಫುಲೆ ಮತ್ತು ಅಂಬೇಡ್ಕರ್ ನಡುವಿನ ಕಾಲದ ಅಂತರವನ್ನು ಶಾಹು ತುಂಬಿದ್ದರು. ಫುಲೆ ಮತ್ತು ಅವರ ಶಿಷ್ಯ ಅಂಬೇಡ್ಕರ್ ನಡುವಿನ ಕೊಂಡಿಯಾಗಿದ್ದವರು ಶಾಹು. 1894ರ ಎಪ್ರಿಲ್ 2ರಂದು ಶಾಹು ಕೋಲಾಪುರದಲ್ಲಿ ಅಧಿಕಾರಕ್ಕೇರಿದಾಗ ತಿಲಕ್ ಶುಭಾಶಯ ತಿಳಿಸಿದ್ದರು ಮತ್ತು ಈ ಬಗ್ಗೆ ಕೇಸರಿ ಪತ್ರಿಕೆಯಲ್ಲಿ ಸಂಪಾದಕೀಯ ಬರೆದಿದ್ದರು. ತನ್ನ ಕರ್ತವ್ಯವಾಗಿರುವ ಹಿಂದುತ್ವವನ್ನು ಮುಂದಕ್ಕೆ ಕೊಂಡೊ ಯ್ಯುವ ಕೆಲಸವನ್ನು ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ನಡೆಸಿಕೊಂಡು ಹೋಗುವ ಜಾಣ್ಮೆ, ಧೈರ್ಯ ದೀರ್ಘಾ ಯುಷ್ಯವನ್ನು ದೇವರು ಅವರಿಗೆ ನೀಡಲಿ ಎಂದು ತಿಲಕ್ ಬರೆದಿದ್ದರು. ವಿಭಿನ್ನ ಜಾತಿಯ ವಿದ್ಯಾರ್ಥಿಗಳಿಗೆ ಅನೇಕ ವಸತಿ ನಿಲಯ ಗಳನ್ನು ಸ್ಥಾಪಿಸಿದ ಶಾಹು ಬ್ರಾಹ್ಮಣೇತರ ವಿದ್ಯಾರ್ಥಿಗಳಿಗೆ ದೇಗುಲದ ಆದಾಯದಿಂದ ಎಲ್ಲ ರೀತಿಯ ಸೌಲಭ್ಯಗಳನ್ನೂ ಒದಗಿಸಿದರು. ಅವರ ರಾಜ್ಯದಲ್ಲಿ ಶಾಲೆಗಳು, ಆಸ್ಪತ್ರೆಗಳು, ನೀರಿನ ಕೊಳಗಳು, ಅರಮನೆ ಮತ್ತು ರಾಜಮನೆತನದ ಭೋಜನ ಕೋಣೆ ಕೂಡಾ ಎಲ್ಲ ಜಾತಿಯವರಿಗೆ ತೆರೆದಿತ್ತು. ದಲಿತ ವ್ಯಕ್ತಿಗಾಗಿ ಚಹಾ ಅಂಗಡಿ ತೆರೆದ ಶಾಹು ಅಲ್ಲಿ ಚಹಾ ಕುಡಿಯುತ್ತಿದ್ದು ದಲಿತ ನೌಕರರನ್ನೂ ನೇಮಿಸಿದ್ದರು. ಮೂಕ ನಾಯಕ ಎಂಬ ಪಾಕ್ಷಿಕವನ್ನು ಹೊರತರಲು ಅಂಬೇಡ್ಕರ್‌ಗೆ ನೆರವಾಗುವ ಜೊತೆಗೆ ಅವರು ಇಂಗ್ಲೆಂಡ್ ಶಿಕ್ಷಣವನ್ನು ಪಡೆಯಲೂ ಸಹಾಯ ಹಸ್ತ ಚಾಚಿದ್ದರು ಶಾಹು. ದಲಿತರನ್ನು ಜೀತದಾಳುಗಳಾಗಿ ಬಳಸುವುದನ್ನು ನಿಲ್ಲಿಸಿದ ಶಾಹು ಮುಂದೆ ಅವರನ್ನು ಗ್ರಾಮಗಳ ಜಮೀನಿನ ದಾಖಲೆ ಇಡುವ ತಲತಿಗಳಾಗಿ ನೇಮಕ ಮಾಡಿದ್ದರು. ಕೈಗಾರಿಕೆಗಳನ್ನು ಆರಂಭಿಸಿದ ಶಾಹು ಟಾಂಕಿಗಳನ್ನು ನಿರ್ಮಿಸಿದರು, ಬ್ರಾಹ್ಮಣೇ ತರ ಗ್ರಾಮ ಆಡಳಿತಗಾರರಿಗಾಗಿ (ಪಾಟೇಲರ ತರಬೇತಿಗೆ) ಶಾಲೆಗಳನ್ನು ತೆರೆದರು ಮತ್ತು ಕುಲಕರ್ಣಿ ವತನ್ ಎಂಬ ಪದ್ಧತಿಯನ್ನು ರದ್ದುಗೊಳಿಸಿದರು. ಇದಕ್ಕಾಗಿ ಅವರು ಬ್ರಾಹ್ಮಣ ಸಮುದಾಯದ ವಿರೋಧವನ್ನೂ ಎದುರಿಸಬೇಕಾಯಿತು. 1917ರಲ್ಲಿ ವಿಧವೆ ಮರುವಿವಾಹಕ್ಕೆ ಅವಕಾಶ ನೀಡುವ ಕಾನೂನು ಜಾರಿ ಮಾಡಿದರೆ, 1918ರಲ್ಲಿ ಅಂತರ್ಜಾತಿ ವಿವಾಹಕ್ಕೆ ಅನುಮತಿ ನೀಡಿದರು. 1911ರಲ್ಲಿ ತನ್ನ ರಾಜ್ಯದಲ್ಲಿ ಅವರು ಫುಲೆ ಸತ್ಯಶೋಧಕ ಸಮಾಜದ ಕೆಲಸವನ್ನು ಆರಂಭಿಸಿದರು. ಬ್ರಾಹ್ಮಣೇತರರಿಗೆ ಅರ್ಚಕ ವಿದ್ಯೆ ಕಲಿಸುವ ಪುರೋಹಿತ ಶಾಲೆಗಳನ್ನು ಆರಂಭಿಸಿದ ಅವರು 1913ರ ಕೇವಲ ಒಂದು ವರ್ಷದಲ್ಲಿ ಈ ಅರ್ಚಕ ರಿಂದ 226 ವಿವಾಹಗಳು ಸೇರಿದಂತೆ 1,513 ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ಇದರಿಂದ ಅವರು ಬ್ರಾಹ್ಮಣರು ತೀವ್ರ ವಿರೋಧವನ್ನು ಎದುರಿಸಬೇಕಾಗಿ ಬಂತು. ಕಾರ್ಮಿಕ ಸಂಘಟನೆಗಳನ್ನು ತೆರೆಯಲು ಸಲಹೆ ನೀಡಿದ ಮೊದಲ ರಾಜ ಶಾಹು. ಈ ಸಂಘಗಳು ಹೆಚ್ಚಾಗಿ ಬ್ರಾಹ್ಮಣರು ಮತ್ತು ವೈಶ್ಯರೇ ಆಗಿರುವ ಬಂಡವಾಳಶಾಹಿಗಳನ್ನು ನಿಯಂತ್ರಿ ಸಲು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದರು. ಇದು ನಡೆದಿದ್ದು 1918ರಲ್ಲಿ, ಜವಾಹರ ಲಾಲ್ ನೆಹರೂ ಅಥವಾ ಕಮ್ಯುನಿಸ್ಟ್ ನಾಯಕ ಎಸ್.ಎ ದಂಗೆ ರಶ್ಯದ ಕ್ರಾಂತಿ ಯ ಬಗ್ಗೆ ಗಮನಹರಿಸುವುದಕ್ಕೂ ಮೊದಲು ಮತ್ತು ಆಮೂಲಕ ಮಹಾತ್ಮ ಫುಲೆ ಮತ್ತು ಲೋಖಂಡೆ ಮೊದಲ ಬಾರಿ ಭಾರತ ದಲ್ಲಿ ಆರಂಭಿಸಿದ ಕಾರ್ಮಿಕ ಚಳವಳಿ ಯನ್ನು ಮುಂದಕ್ಕೆ ಕೊಂಡೊಯ್ದರು. ನನಗೆ ಸ್ವರಾಜ್ಯ ಬೇಕೆಂದು ತಿಳಿಸಿದ್ದ ಶಾಹು, ಆದರೆ ಅದಕ್ಕೂ ಮೊದಲು ನಾನು ಜಾತಿ ವರ್ಗೀಕರಣ ಮತ್ತು ಅಸಮಾನತೆಯನ್ನು ತೊಲಗಿಸಲು ಬಯಸುತ್ತೇನೆ ಎಂದು ತಿಳಿಸಿದ್ದರು. ಅದರ ಹೊರತು ಸ್ವರಾಜ್ಯ ಎಂದರೆ ಬೆರಳೆಣಿಕೆಯ ಬ್ರಾಹ್ಮಣರು ಬಹುಸಂಖ್ಯಾತ ಬಹುಜನರನ್ನು ಆಳಿದಂತೆ ಎಂದು ಅವರು ಹೇಳುತ್ತಿದ್ದರು. ಅದಕ್ಕಾಗಿ ಅವರು, ಜಾತಿವಾರು ಪ್ರತಿನಿಧಿತ್ವಕ್ಕೆ ಆಗ್ರಹಿಸಿ ಗವರ್ನರ್ ಜನರಲ್‌ಗೆ ಮನವಿ ಕಳುಹಿಸಿದ್ದರು.

1920ರ ಎಪ್ರಿಲ್ 15ರಂದು ಕೋಲಾಪುರದ ಮಂಗಾವೊ ನಲ್ಲಿ ಭಾಷಣ ಮಾಡುವ ವೇಳೆ ಶಾಹು, ಅಂಬೇಡ್ಕರ್ ಅವರನ್ನುದಲಿತರಿಗೆ ಪರಿಚಯಿಸಿ ಇವರು ನಿಮ್ಮ ಸ್ವಂತ ನಾಯಕ ಎಂದು ತಿಳಿಸಿದ್ದರು. ಈ ವೇಳೆ ತಿಲಕ್‌ರಂಥವರನ್ನು ಟೀಕಿಸಿದ ಅವರು, ಎಲ್ಲ ಮನುಷ್ಯರನ್ನು ನೀವು ಸಮಾನರು ಎಂದು ತಿಳಿಯದ ಹೊರತು ದೇಶಭಕ್ತಿ ಮೂಡಲು ಸಾಧ್ಯವಿಲ್ಲ ಎಂದು ಗದರಿದ್ದರು ಮತ್ತು ಕೇವಲ ಬಾಯಲ್ಲಿ ಮಾತನಾಡುವ ಆದರೆ ಏನೂ ಮಾಡದ ನಾಯಕರನ್ನು ಕಟುಶಬ್ದಗಳಲ್ಲಿ ನಿಂದಿಸಿ ದ್ದರು. ಈ ಸಭೆಯಲ್ಲಿ ಅಂಬೇಡ್ಕರ್‌ನ್ನು ದಲಿತರ ನಾಯಕ ಎಂದು ಘೋಷಿಸಿದ ಶಾಹು, ಒಂದು ದಿನ ಅವರು ದಲಿತರನ್ನು ಮುಕ್ತಗೊ ಳಿಸುತ್ತಾರೆ ಮತ್ತು ಭಾರತದ ನಾಯಕನಾಗಿ ಹೊರಹೊಮ್ಮುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಎಲ್ಲರಿಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣಕ್ಕೆ ಹೊಸ ಶಾಲೆ ಗಳನ್ನು ನಿರ್ಮಿಸುವುದಕ್ಕೂ ಮೊದಲು ಸದ್ಯ ಇರುವ ಶಾಲೆಗಳಿಗೆ (ಬ್ರಾಹ್ಮಣರ) ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದರು. ಈ ಹೇಳಿಕೆಯನ್ನು ಮರುದಿನ ನಾಸಿಕ್‌ನಲ್ಲಿ ವಿರೋಧಿಸಿದ್ದ ಶಾಹು, ಕೇಸರಿಯ ಈ ಹೇಳಿಕೆ ಅಸಂಬದ್ಧ ಮತ್ತು ಖೇದಕರ ಎಂದು ವ್ಯಾಖ್ಯಾನಿಸಿದ್ದರು. ಎಲ್ಲರಿಗೂ ಬ್ರೆಡ್ ಸಿಗುವ ತನಕ ಯಾರಿಗೂ ಕೇಕ್ ನೀಡಲು ಸಾಧ್ಯವಿಲ್ಲ ಎಂಬ ಇಂಗ್ಲೆಂಡ್‌ನ ಲೇಬರ್ ಪಾರ್ಟಿಯ ನಿಯಮವನ್ನು ಅವರು ಈ ವೇಳೆ ಪ್ರಶಂಸಿಸಿದ್ದರು. ಶೇ.90 ಮಂದಿ ಹಸಿವಿನಿಂದ ಬಳಲುತ್ತಿರುವಾಗ ಶೇ. 10 ಮಂದಿ ಬ್ರೆಡ್ ಮೇಲೆ ಹಾಕಲು ಬೆಣ್ಣೆ ಕೇಳುತ್ತಿರುವುದು ಈ ಜನರಿಗೆ ಸಮಾಜದ ಬಗ್ಗೆ ಇರುವ ಧೋರಣೆಯನ್ನು ತೋರಿಸುತ್ತದೆ ಎಂದು ಶಾಹು, ತಿಲಕ್ ಅವರನ್ನು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News