ಅಮೆರಿಕ ರಾಯಭಾರಿಯಾಗಿ ರಾಜಕುಮಾರಿಯನ್ನು ನೇಮಿಸಿದ ಸೌದಿ ಅರೇಬಿಯಾ

Update: 2019-02-24 08:17 GMT

ರಿಯಾದ್, ಫೆ.24: ಸೌದಿ ಅರೇಬಿಯಾ ದೇಶದ ರಾಜಕುಮಾರಿಯನ್ನು ಅಮೆರಿಕ ರಾಯಭಾರಿಯಾಗಿ ನೇಮಕ ಮಾಡಿದ್ದು, ದೇಶದ ಮೊಟ್ಟಮೊದಲ ಮಹಿಳಾ ರಾಯಭಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಉಭಯ ಮಿತ್ರದೇಶಗಳ ನಡುವಿನ ಸಂಬಂಧ, ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಹಿನ್ನೆಲೆಯಲ್ಲಿ ಹದಗೆಡುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಸೌದಿ ಅರೇಬಿಯಾ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.

ರಾಜಕುಮಾರಿ ರಿಮಾ ಬಿಂತ್ ಬಂದಾರ್ ಅವರು, ರಾಜಕುಮಾರ ಖಾಲಿದ್ ಬಿನ್ ಸಲ್ಮಾನ್ ಅವರ ಸ್ಥಾನಕ್ಕೆ ನಿಯೋಜಿತರಾಗಿದ್ದಾರೆ. ಖಾಲಿದ್ ಅವರನ್ನು ರಕ್ಷಣಾ ಖಾತೆಯ ಉಪಸಚಿವರಾಗಿ ನೇಮಕ ಮಾಡಲಾಗಿದೆ ಎಂದು ಅರಮನೆ ತಡರಾತ್ರಿ ಪ್ರಕಟಿಸಿದೆ.

ಇಸ್ತಾಂಬುಲ್ ‍ನಲ್ಲಿರುವ ಸೌದಿ ರಾಜಭಾರ ಕಚೇರಿಯಲ್ಲಿ ನಡೆದ ಪತ್ರಕರ್ತ ಖಶೋಗಿ ಹತ್ಯೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಅದನ್ನು ಶಮನಗೊಳಿಸುವ ಪ್ರಯತ್ನವಾಗಿ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.

ಖಶೋಗಿ ಹತ್ಯೆ ಹಿನ್ನೆಲೆಯಲ್ಲಿ ಅಮೆರಿಕ ಕಾಂಗ್ರೆಸ್ ಸದಸ್ಯರ ತೀವ್ರ ಆಕ್ರೋಶವನ್ನು ರಿಮಾ ಎದುರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News