×
Ad

ಬೆಂಗಳೂರು: ಮಾ.3ರಿಂದ ಆರೋಗ್ಯ ಮೇಳ

Update: 2019-02-25 20:04 IST

ಬೆಂಗಳೂರು, ಫೆ.25: ಜಿಲ್ಲಾ ವ್ಯಾಪ್ತಿಯ ಬೃಹತ್ ಆರೋಗ್ಯ ಮೇಳವನ್ನು ಮಾ.3, 5 ಹಾಗೂ 7ರಂದು ನಗರದ ಮೂರು ಕಡೆ ಹಮ್ಮಿಕೊಳ್ಳಲಾಗಿದೆ ಎಂದು ಮಲ್ಲೇಶ್ವರಂ ಶಾಸಕ ಡಾ.ಅಶ್ವಥ್‌ನಾರಾಯಣ ಅವರು ತಿಳಿಸಿದ್ದಾರೆ.

ಸೋಮವಾರ ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೃಹತ್ ಆರೋಗ್ಯ ಮೇಳ ಹಮ್ಮಿಕೊಳ್ಳುವ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಮಾ.3ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ (ದಕ್ಷಿಣ ಜಿಲ್ಲೆ ವ್ಯಾಪ್ತಿ) ಈ ಅಭಿಯಾನ ಉದ್ಘಾಟನೆ ನಡೆಯಲಿದ್ದು, ಮಾರ್ಚ್ 5 ರಂದು ಸರ್.ಸಿ.ವಿ.ರಾಮನ್ ಆಸ್ಪತ್ರೆ (ಕೇಂದ್ರ ವಲಯ) ಹಾಗೂ ಮಾರ್ಚ್ 7ರಂದು ದಾಸರಹಳ್ಳಿ ಮೈದಾನ (ಉತ್ತರ ವಲಯ)ದ ಆರೋಗ್ಯ ಮೇಳ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಎಲ್ಲ ಇಲಾಖೆಗಳು ಈ ಆರೋಗ್ಯ ಮೇಳದಲ್ಲಿ ಸಮನ್ವಯ ವಹಿಸಿ ಯಶಸ್ವಿಗೊಳಿಸಬೇಕೆಂದರು. ಈ ಮೇಳಕ್ಕೆ 12 ಲಕ್ಷ ಅನುದಾನ ಬಿಡುಗಡೆಯಾಗಿದೆ. ಇಲ್ಲಿ ಆರೋಗ್ಯ ಯೋಜನೆ ಸೌಲಭ್ಯಗಳು, ಜನೌಷಧಿ ಬಗ್ಗೆ ಜನರಿಗೆ ಮಾಹಿತಿ ನೀಡಲು ಮಳಿಗೆಗಳನ್ನು ತೆರೆಯಲು ಸೂಚಿಸಿದರು. ಅಲ್ಲದೆ ಜನರಿಗೆ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಶಾಲಾ ಮಕ್ಕಳು, ಅಂಗನವಾಡಿ ಹಾಗೂ ಸಾರ್ವಜನಿಕರಿಗೆ ಈ ಮೇಳದ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಿಸಿ, ಭಾಗವಹಿಸುವಂತೆ ಮಾಡಬೇಕಿದೆ ಎಂದರು.

ಮೇಳದಲ್ಲಿ ಸ್ವಚ್ಛತೆ, ಉಪಾಹಾರ, ವೈದ್ಯರ ನಿಯೋಜನೆ ಇತ್ಯಾದಿಗಳನ್ನು ಸಂಬಂಧಪಟ್ಟ ಇಲಾಖೆ ಮಾಡಬೇಕು. ಬಿಬಿಎಂಪಿ ಇದಕ್ಕೆ ಸಹಕಾರ ನೀಡಬೇಕೆಂದು ಶಾಸಕರು ತಿಳಿಸಿದರು. ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರ್ಚನ, ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News