×
Ad

ಮೂಡಾ ಮಾಜಿ ಅಧ್ಯಕ್ಷ ಮುನಾವರ್ ಖಾನ್ ವಿರುದ್ಧ ಪ್ರಕರಣ ದಾಖಲು

Update: 2019-02-25 21:58 IST

ಬೆಂಗಳೂರು, ಫೆ.25: ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ ಮೂಡಾ ಮಾಜಿ ಅಧ್ಯಕ್ಷ ಮುನಾವರ್ ಖಾನ್ ವಿರುದ್ಧ ಮಹಿಳೆಯೊಬ್ಬರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ಥೆ, ಬೆಂಗಳೂರಿನಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ತೆರಳಬೇಕು ಹಾಗೂ ಸುಮಲತಾ ಅವರನ್ನು ಭೇಟಿಯಾಗಬೇಕು. ಹೀಗಾಗಿ ಮಂಡ್ಯದಿಂದ ತಕ್ಷಣ ಬೆಂಗಳೂರಿಗೆ ಬರುವಂತೆ ಜ.31ರಂದು ಮುನಾವರ್ ಖಾನ್ ಕರೆ ಮಾಡಿದ್ದರು. ನಾನು ಬೆಂಗಳೂರಿಗೆ ಬಂದನಂತರ ಅವರು ಮೆಜೆಸ್ಟಿಕ್‌ನಲ್ಲಿರುವ ಹೊಟೇಲ್ ಕೊಠಡಿಯಲ್ಲಿ ಇರಿಸಿದ್ದರು ಎಂದರು ತಿಳಿಸಿದರು.

ಮಧ್ಯರಾತ್ರಿ 1ಕ್ಕೆ ನನ್ನೊಂದಿಗೆ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಬೇಕೆಂದು ಕೊಠಡಿಯೊಳಗೆ ಬಂದ ಮುನಾವರ್ ಖಾನ್ ಅನುಚಿತವಾಗಿ ವರ್ತಿಸಲು ಮುಂದಾದರು. ತಕ್ಷಣ ನಾನು ನನ್ನ ಸ್ನೇಹಿತೆಗೆ ಕರೆ ಮಾಡಿ ವಿಷಯ ತಿಳಿಸಿದೆ. ಆನಂತರ ಆಕೆಯ ಸ್ನೇಹಿತರು ನಾನು ತಂಗಿದ್ದ ಹೊಟೇಲ್‌ಗೆ ಬಂದು ನನ್ನನ್ನು ರಕ್ಷಿಸಿದರು. ಈ ಸಂಬಂಧ ಉಪ್ಪಾರಪೇಟೆಯಲ್ಲಿ ದೂರು ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News