ಲಿಂಗ ಬದಲಿಸಿದ ಶಿಕ್ಷಣ ಇಲಾಖೆ: ಶಿಕ್ಷಕರು ತಬ್ಬಿಬ್ಬು
ಬೆಂಗಳೂರು, ಫೆ.26: ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಪುರುಷರಿಗೆ ಮಹಿಳೆ, ಮಹಿಳೆಗೆ ಪುರುಷ ಎಂದು ನಮೂದಿಸಿ ಎಡವಟ್ಟು ಮಾಡಿದ್ದಾರೆ ಎನ್ನಲಾಗಿದ್ದು, ಇದರಿಂದಾಗಿ ಪದೋನ್ನತಿ ಹೊಂದಿದ ಶಿಕ್ಷಕರು ತಬ್ಬಿಬ್ಬಾಗಿದ್ದಾರೆ.
APCO, ADPI, SI, BRC) ನ ನಿರ್ದಿಷ್ಟ ಹುದ್ದೆಗಳಿಗೆ ಫೆಬ್ರವರಿ 6 ಮತ್ತು 8 ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಲಿಖಿತ ಪರೀಕ್ಷೆಗಳ ಅಂಕಗಳನ್ನು, ಸೇವಾ ಅನುಭವ ಮತ್ತು ಹೆಚ್ಚಿನ ವಿದ್ಯಾರ್ಹತೆಗೆ ಲಭ್ಯವಾಗುವ ಅಂಕಗಳನ್ನು ಕ್ರೋಡೀಕರಿಸಿ ಅಂತಿಮ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಲ್ಲಿ ಇಂತಹ ಯಡವಟ್ಟು ಮಾಡಿದ್ದು, ಶಿಕ್ಷಕರಿಗೆ ಇರಿಸು ಮುರಿಸು ಉಂಟು ಮಾಡಿದೆ.
ಸರಕಾರಿ ಇಲಾಖೆಗಳು ಪ್ರತಿಸಲವೂ ಒಂದೊಂದು ರೀತಿಯಲ್ಲಿ ಯಡವಟ್ಟು ಮಾಡಿಕೊಂಡು ಬರುತ್ತಿದೆ. ಇದೀಗ ಅದರ ಸರದಿ ಶಿಕ್ಷಣ ಇಲಾಖೆಗೂ ಬಂದಿದ್ದು, ಶಿಕ್ಷಣ ಇಲಾಖೆಯೇ ಯಡವಟ್ಟು ಮಾಡಿ ಪೇಚಿಗೆ ಸಿಲುಕಿದೆ. ಇದರಿಂದಾಗಿ ಶಿಕ್ಷಕರು ಮುಜುಗರಕ್ಕೀಡಾಗಿದ್ದಾರೆ.