ಭಾರತದ ಓರ್ವ ಪೈಲಟ್ ನಾಪತ್ತೆ: ವಿದೇಶಾಂಗ ಇಲಾಖೆ

Update: 2019-02-27 14:05 GMT

 ಹೊಸದಿಲ್ಲಿ, ಫೆ.27: ‘‘ಭಾರತೀಯ ವಾಯು ಸೇನೆ ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ. ಈ ಕಾರ್ಯಾಚರಣೆಯ ವೇಳೆ ನಮ್ಮ ಮಿಗ್-21 ಯುದ್ಧ ವಿಮಾನ ಪತನವಾಗಿದೆ. ಆ ವಿಮಾನದ ಓರ್ವ ಪೈಲಟ್ ನಾಪತ್ತೆಯಾಗಿದ್ದಾನೆ. ಆತ ನಮ್ಮ ವಶದಲ್ಲಿದ್ದಾನೆಂದು ಪಾಕಿಸ್ತಾನ ಹೇಳಿಕೊಂಡಿದೆ. ಪಾಕ್ ಹೇಳಿಕೆಯನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ’’ ಎಂದು ಭಾರತದ ವಿದೇಶಾಂಗ ಇಲಾಖೆಯ ಅಧಿಕಾರಿ ರವೀಶ್ ಕುಮಾರ್ ಬುಧವಾರ ಮಧ್ಯಾಹ್ನ ನಡೆಸಿದ ತುರ್ತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾರತದ ವಿಂಗ್ ಕಮಾಂಡರ್ ಅಭಿನಂದನ್ ನಮ್ಮ ವಶದಲ್ಲಿದ್ದಾರೆ ಎಂದು ಪಾಕಿಸ್ತಾನ ವೀಡಿಯೋ ಸಮೇತ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News