×
Ad

‘ಜಲಾಮೃತ’ ಜಲಸಂರಕ್ಷಣಾ ಆಂದೋಲನಕ್ಕೆ ಫೆ.28 ರಂದು ಚಾಲನೆ

Update: 2019-02-27 22:11 IST

ಬೆಂಗಳೂರು, ಫೆ. 27: ಜೀವದ ಉಗಮ ಜಲದಿಂದ. ಆ ಜಲದ ಸಂರಕ್ಷಣೆಗೆ, ಜನತೆಯಲ್ಲಿ ಜಾಗೃತ ಮತ್ತು ಸುಸ್ಥಿರ ಸಂಸ್ಕೃತಿಯನ್ನು ಬೆಳೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ‘ಜಲಾಮೃತ’ ಜಲಸಂರಕ್ಷಣಾ ಆಂದೋಲನಕ್ಕೆ ಫೆ.28 ರಂದು ಚಾಲನೆ ನೀಡಲಾಗುವುದು.

ಇದೇ ವೇಳೆ 2019ನ್ನು ಕರ್ನಾಟಕದ ಜಲವರ್ಷ ಎಂದು ಘೋಷಿಸಲಾಗುವುದು. ‘ಜಲಾಮೃತ’ ಆಂದೋಲನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಾಳೆ(ಫೆ.28) ಬೆಳಗ್ಗೆ 10ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ಚಾಲನೆ ನೀಡಲಿದ್ದಾರೆ.

ಜನರಲ್ಲಿ ಜಲ ಸಾಕ್ಷರತೆ ಹರಡಿ, ಪ್ರತಿ ಹನಿ ನೀರನ್ನೂ ಉಳಿಸಲು ಅವರು ಆಂದೋಲನವನ್ನು ಸೇರಲು ಪ್ರೇರೇಪಿಸುವುದು, ಜಲ ಮೂಲಗಳ ಪುನಶ್ಚೇತನ ಮತ್ತು ಸೃಜನೆ ಮುಖಾಂತರ ಜಲ ಸಂರಕ್ಷಣೆ, ಜಲದ ಜಾಗೃತ ಮತ್ತು ದಕ್ಷ ಉಪಯೋಗವನ್ನು ಪ್ರವರ್ತಿಸುವುದು. ಜಲ ಮೂಲಗಳ ಸುಸ್ಥಿರತೆಗೆ, ಅರಣ್ಯೀಕರಣವನ್ನು ಒಂದು ಸಾಮೂಹಿಕ ಆಂದೋಲನ ರೂಪಿಸಲಾಗುವುದು ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News