ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಲೋಪ

Update: 2019-03-02 16:58 GMT

ಬೆಂಗಳೂರು, ಮಾ.2: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕರೆದಿರುವ ಪ್ರಥಮ ಮತ್ತು ದ್ವಿತೀಯ ದರ್ಜೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳು ಹೈರಾಣಾಗಿದ್ದಾರೆ.

ಆಯೋಗದ ವೆಬ್‌ಸೈಟ್ ಕಳೆದೆರಡು ದಿನಗಳಿಂದ ನಿರ್ವಹಣೆಯಲ್ಲಿದ್ದು, ವಿಲ್ ಬಿ ಬ್ಯಾಕ್ ಸೂನ್ ಎಂದು ತೋರಿಸುತ್ತಲೇ ಇದೆ. ಅಲ್ಲದೆ, ಜೆಒಸಿ ಪೂರೈಸಿದ ಅಭ್ಯರ್ಥಿಗಳಿಗೆ ಸೂಕ್ತ ಆಯ್ಕೆ ಇಲ್ಲದ್ದರಿಂದ ಅರ್ಜಿ ಸಲ್ಲಿಸಲು ಆಗುತ್ತಿಲ್ಲವೆಂದು ಅಭ್ಯರ್ಥಿಗಳು ದೂರಿದ್ದಾರೆ. ಅರ್ಜಿ ಸಲ್ಲಿಸುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳದ್ದರಿಂದ ಇತರ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಲಾಗದೆ ಆಯೋಗದ ಕಾರ್ಯವೈಖರಿಗೆ ಶಾಪ ಹಾಕುತ್ತಿದ್ದಾರೆ. ಹಲವಾರು ಬಾರಿ ಆಯೋಗದ ಸಹಾಯವಾಣಿಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಆರೋಪಿಸಿದ್ದಾರೆ.

ಅರ್ಜಿ ಸಲ್ಲಿಸಲು ಮಾ.12 ಕಡೇ ದಿನ. ಕೊನೆಯಲ್ಲಿ ಅರ್ಜಿ ಸಲ್ಲಿಕೆ ಹೆಚ್ಚಾಗುವುದರಿಂದ ಸರ್ವರ್ ಮತ್ತಷ್ಟು ಬಿಜಿಯಾಗಿ ಕೈ ಕೊಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆಯೋಗ ಸಾಧ್ಯವಾದಷ್ಟು ಬೇಗ ವೆಬ್‌ಸೈಟ್ ಸರಿಪಡಿಸಬೇಕು. ಇಲ್ಲವೇ ಕಡೇ ದಿನಾಂಕವನ್ನು ವಿಸ್ತರಿಸಬೇಕೆಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News