ಆಧುನಿಕ ಭಾರತದ ಲಾಂಛನ ಟೈಪ್‌ರೈಟರ್

Update: 2019-03-03 07:25 GMT

 ಟಕ್ ಟಕ್ ಟಕ್ ಟಕಾ ಟಕ್....

ಇದು ಗಡಿಯಾರದ ಸದ್ದಲ್ಲ...ಟೈಪ್‌ರೈಟರ್ ಸದ್ದು. ಭಾರತದಲ್ಲಿ ಆಧುನಿಕತೆ ತೆರೆದುಕೊಂಡದ್ದೇ ಈ ಯಂತ್ರದ ಸದ್ದಿನ ಮೂಲಕ. ಇಂದು ಟೈಪ್‌ರೈಟರ್ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ನಮ್ಮನ್ನು ಇಂದು ಈ ಎತ್ತರಕ್ಕೆ ಏರಿಸಿದ ಏಣಿ ಟೈಪ್‌ರೈಟರ್. ಕಂಪ್ಯೂಟರ್‌ಗಳು ಭಾರತದ ಪಾಲಿಗೆ ಗಗನ ಕುಸುಮವಾಗಿದ್ದ ಕಾಲದಲ್ಲಿ ನಮ್ಮನ್ನು ಕೈ ಹಿಡಿದು ನಡೆಸಿದ್ದು ಟೈಪ್‌ರೈಟರ್. ಟೈಪ್‌ರೈಟಿಂಗ್ ಕೋರ್ಸ್ ಎನ್ನುವುದು ಅನ್ನ ಕೊಡುವ ಭರವಸೆಯ ಕೋರ್ಸ್ ಎಂದೇ ನಂಬಿದ್ದ ಕಾಲವಿತ್ತು. ಎಷ್ಟೇ ಕಲಿತರೂ ಆತನಿಗೆ ಟೈಪ್‌ರೈಟಿಂಗ್ ಗೊತ್ತಿರುವುದು ಕಡ್ಡಾಯವಾಗಿತ್ತು. ಟೈಪ್‌ರೈಟಿಂಗ್‌ನಲ್ಲಿ ಬರಹಗಳು ಪಟಪಟಿಸುವ ರೀತಿಯೇ ಕಿವಿಗೆ ಹಿತವಾಗಿರುತ್ತಿತ್ತು.

ಪ್ರತಿ ಶಬ್ದಕ್ಕೂ ಪ್ರತ್ಯೇಕ ಒತ್ತಡದಿಂದ ಕೀಪ್ಯಾಡ್ ಮೇಲೆ ಬೆರಳುಗಳನ್ನು ಒತ್ತಬೇಕು. ಕಾಗದ ಮುಗಿದಾಗ ಕಪ್ಪು ಪಟ್ಟಿಯನ್ನು ತಿರುಗಿಸಬೇಕು. ವಾಕ್ಯದ ಆರಂಭದಲ್ಲಿ ಬೆಳ್ಳಿ ಬಣ್ಣದ ವೃತ್ತಾಕಾರದ ಗುಂಡಿಯನ್ನು ಚಲಿಸಬೇಕು. ತಪ್ಪದೆ ಒಂದೇ ವೇಗದಲ್ಲಿ ಟೈಪ್ ಮಾಡಬೇಕು. ಅದನ್ನು ಮಾಡುವ ಮಧ್ಯೆ ಗೆರೆಯ ಕೊನೆಗೆ ತಲುಪುವ ವೇಳೆ ಯಂತ್ರದಿಂದ ಬರುವ ಟಿಂಗ್ ಎಂಬ ಶಬ್ದವನ್ನು ಅನುಸರಿಸಿ ಟೈಪ್‌ಬಾರನ್ನು ಮುಂದಿನ ಗೆರೆಗೆ ಎಳೆಯಬೇಕು!

ಈಗ ಟೈಪ್‌ರೈಟರ್ ಗತಕಾಲದ ವಸ್ತುವಾಗಿರಬಹುದು. ಆದರೆ ಪುರುಷ ಪ್ರಧಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ಉದ್ಯೋಗಕ್ಕೆ ಅವಕಾಶವನ್ನು ಮಾಡಿಕೊಟ್ಟ ಖ್ಯಾತ ತಾರೆ ಹೆಲೆನ್ ಮತ್ತು ಶಶಿ ಕಪೂರ್ ಅಭಿನಯದ ಬಾಂಬೆ ಟಾಕಿ ಸಿನೆಮಾದ ಪ್ರಸಿದ್ಧ ಹಾಡು ಟೈಪ್‌ರೈಟರ್ ಟಿಪ್ ಟಿಪ್‌ಗೆ ಸರಕು ಒದಗಿಸಿದ ಈ ಯಂತ್ರವು ನಿಜಾರ್ಥದಲ್ಲಿ ಭಾರತದ ಆಧುನೀಕರಣದಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ.

ಭಾರತದಲ್ಲಿ ಪ್ರತಿದಿನ ಬಳಸುವ ವಸ್ತುಗಳ ಇತಿಹಾಸವನ್ನು ಕೂಲಂಕಷವಾಗಿ ಅಧ್ಯಯನ ಮಾಡಿರುವ ಇತಿಹಾಸಜ್ಞ ಡೇವಿಡ್ ಅರ್ನಾಲ್ಡ್ ಹೇಳುವಂತೆ ಟೈಪ್‌ರೈಟರ್ ಭಾರತದ ಕಚೇರಿ ಜೀವನದ ರೂಪವನ್ನೇ ಬದಲಿಸಿದೆ.

ಟೈಪ್‌ರೈಟರ್ ಉಗಮದ ನಂತರ ಒಂದೊಮ್ಮೆ ಅನನ್ಯ ಮತ್ತು ಮಿತಿಯ ಎಂದು ಪರಿಗಣಿಸಲಾಗಿದ್ದ ಸರಕಾರ ಕ್ಷೇತ್ರದಲ್ಲಿ ಏಕಾಏಕಿ ಖಾಸಗಿ ಕ್ಷೇತ್ರಕ್ಕಿಂತ ಹೆಚ್ಚಿನ ಉದ್ಯೋಗಾವಕಾಶಗಳು ತೆರೆದುಕೊಂಡವು. ಬರಹಗಾರರ ಜಾಗವನ್ನು ಟೈಪಿಸ್ಟ್‌ಗಳು ಪಡೆದುಕೊಂಡರು. ನಗರ ಪ್ರದೇಶಗಳಲ್ಲಿ ಟೈಪಿಂಗ್ ಶಾಲೆಗಳು ತಲೆಯೆತ್ತಿ ಉದ್ಯೋಗಾವಕಾಶಗಳನ್ನು ಹೆಚ್ಚುಗೊಳಿಸಿದರೆ ಟೈಪ್‌ರೈಟರ್ ಸರಿಪಡಿಸಲು ಬಲ್ಲವರು ತಮ್ಮ ಅಂಗಡಿಗಳನ್ನು ತೆರೆದರು. ಟೈಪ್‌ರೈಟರ್ ಟೈಪಿಸ್ಟ್‌ಗಳು ಎಂಬ ನಾಗರಿಕರ ಹೊಸ ಉದ್ಯೋಗವರ್ಗವನ್ನು ಬೆಳಕಿಗೆ ತಂದಿತು.

ಆ ಕಾಲದ ಒಂದು ವರ್ಗ ಪತ್ರಗಳು, ಮನವಿಗಳು ಮತ್ತು ಅಫಿದಾವಿತ್‌ಗಳನ್ನು ಬರೆಯಲು ಟೈಪಿಸ್ಟ್‌ಗಳನ್ನೇ ಅವಲಂಬಿಸಿದರೆ ಈ ಟೈಪಿಸ್ಟ್ ಗಳ ಪ್ರಭಾವ ಶ್ರೀಮಂತ ವರ್ಗಕ್ಕೆ ಕಸಿವಿಸಿ ಉಂಟು ಮಾಡುತ್ತಿತ್ತು.

ಬೀದಿಬದಿಯ ಟೈಪ್‌ರೈಟರ್‌ಗಳು ಬರೀ ಕೆಲಸ ಮಾಡುವುದು ಮಾತ್ರವಲ್ಲ ಅಲ್ಲೇ ಮಲಗುತ್ತಿದ್ದರು ಕೂಡಾ. ಇವರಲ್ಲಿ ಕೆಲವರು ಬಾಂಬೆ ಜನರಲ್ ಅಂಚೆ ಕಚೇರಿಯ ಎದುರು ಧೂಮಪಾನ ಮಾಡುತ್ತಾ ಚಹಾ ಕುಡಿಯುತ್ತಾ ಕುಶಲೋಪರಿ ಮಾತನಾಡುತ್ತಾ ಕುಳಿತಿರುತ್ತಿದ್ದರು. ಆ ರಸ್ತೆಯಾಗಿ ಸಾಗುವ ದಾರಿಹೋಕರು ಈ ಟೈಪಿಸ್ಟ್‌ಗಳು ರಸ್ತೆತಡೆ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದರು ಎಂದು ಅರ್ನಾಲ್ಡ್ ತಿಳಿಸುತ್ತಾರೆ. ಬೀದಿಬದಿ ಟೈಪಿಸ್ಟ್‌ನಿಂದ ಕಾದಂಬರಿಕಾರು, ಪತ್ರಕರ್ತರು ಮತ್ತು ರಾಜಕಾರಣಿಗಳವರೆಗೆ ಟೈಪ್‌ರೈಟರ್ ಶಿಕ್ಷಣ ಮತ್ತು ಕೌಶಲ್ಯದ ಚಿಹ್ನೆಯಾಗಿ ಬದಲಾಗಿತ್ತು.

1940ರಲ್ಲಿ ಭಾರತದಲ್ಲಿ ಉಪಯೋಗಿಸಲ್ಪಡುತ್ತಿದ್ದ ಬಹುತೇಕ ಟೈಪ್‌ರೈಟರ್‌ಗಳು ಆಮದು ಮಾಡಲ್ಪಟ್ಟವಾಗಿದ್ದವು. ಅಮೆರಿಕದ ರೆಮಿಂಗ್ಟನ್ ಆ್ಯಂಡ್ ಸನ್ಸ್ ಆ ಕಾಲದ ಪ್ರಸಿದ್ಧ ಟೈಪ್‌ರೈಟರ್ ತಯಾರಿಕಾ ಕಂಪೆನಿಯಾಗಿತ್ತು. ಜೊತೆಗೆ ಹ್ಯಾಮಂಡ್ ಟೈಪ್‌ರೈಟರ್ಸ್ ಕೂಡಾ ಹೆಸರುವಾಸಿ ಕಂಪೆನಿಯಾಗಿತ್ತು. ಕೆಲವೊಮ್ಮೆ ಮಾರಾಟಗಾರರು ಯಂತ್ರದ ಬಿಡಿಭಾಗಗಳನ್ನು ಆಮದು ಮಾಡಿ ಅದನ್ನು ಇಲ್ಲೇ ಸಿದ್ಧಪಡಿಸಿ ನೀಡುತ್ತಿದ್ದರು.

1910ರ ನಂತರ ರೆಮಿಂಗ್ಟನ್ ಮರಾಠಿ, ಗುಜರಾತಿ, ದೇವನಾಗರಿ, ಉರ್ದು, ಅರಬಿಕ್ ಮತ್ತು ಗುರುಮುಖಿ ಭಾಷೆ ಟೈಪ್ ಮಾಡಬಲ್ಲ ಟೈಪ್‌ರೈಟರ್‌ಗಳನ್ನು ತಯಾರಿಸಿತು. ಇದರಿಂದಾಗಿ ಆ ಕಂಪೆನಿ ಸರಕಾರಿ ಇಲಾಖೆಗಳಲ್ಲಿ ಪ್ರಸಿದ್ಧವಾಗಿತ್ತು.

ವಿದೇಶಿ ಕಂಪೆನಿಗಳು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆಯುತ್ತಿದ್ದ ಕಾಲದಲ್ಲಿ ಭಾರತದ ಒಂದು ಕಂಪೆನಿ ಟೈಪ್‌ರೈಟರ್ ಮಾರುಕಟ್ಟೆಗೆ ಧುಮುಕುವ ಸಾಹಸ ಮಾಡಿತು. ಅದೇ ಗೋದ್ರೆಜ್ ಆ್ಯಂಡ್ ಬೋಯ್ಸೆ. ಭಾರತದ ಸ್ವಂತ ಟೈಪ್‌ರೈಟರನ್ನು ತಯಾರಿಸುವ ಕಲ್ಪನೆ 1947ರಲ್ಲೇ ಚಿಗುರೊಡೆದಿದ್ದರೂ ಆ ಸಮಯದಲ್ಲಿ ಗೋದ್ರೆಜ್ ಆ್ಯಂಡ್ ಬೋಯ್ಸೆ ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಗೆ ಮತ ಪೆಟ್ಟಿಗೆಗಳನ್ನು ತಯಾರಿಸುವಲ್ಲಿ ವ್ಯಸ್ತವಾಗಿದ್ದ ಕಾರಣ ಆ ಬಗ್ಗೆ ತಲೆಹಾಕಿರಲಿಲ್ಲ. ಭಾರತ ಸ್ವಾತಂತ್ರಗೊಂಡ ದಶಕಗಳ ನಂತರ ಮತ್ತು ಸ್ವದೇಶಿ ಚಳವಳಿಯ ಮೇಲೆ ಸದೃಢ ನಂಬಿಕೆ ಬಂದ ನಂತರ ಗೋದ್ರೆಜ್ ತನ್ನ ಸ್ವಂತ ಟೈಪ್‌ರೈಟರ್ ತಯಾರಿಸಿತು. ಆಮೂಲಕ ಆಮದು ಟೈಪ್‌ರೈಟರ್‌ಗಳ ಮೇಲಿನ ಭಾರತದ ಅವಲಂಬನೆಗೆ ಮುಕ್ತಿ ಹಾಡಿತು. 1955ರಲ್ಲಿ ಗೋದ್ರೆಜ್ ಆ್ಯಂಡ್ ಬೊಯ್ಸೆ ಟೈಪ್‌ರೈಟರನ್ನು ತಯಾರಿಸಿದ ಏಶ್ಯಾದ ಮೊದಲ ಕಂಪೆನಿಯಾಗಿ ಇತಿಹಾಸ ನಿರ್ಮಿಸಿತು. ಗೋದ್ರೆಜ್ ಪ್ರೈಮ ಭಾರತದ ಮೊದಲ ಸ್ಥಳೀಯ ನಿರ್ಮಿತ ಟೈಪ್‌ರೈಟರ್ ಎಂಬ ಹೆಗ್ಗಳಿಕೆ ಪಡೆದುಕೊಂಡಿತು. ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಈ ಸಾಧನೆಯನ್ನು ಸ್ವಾತಂತ್ರದ ಮತ್ತು ಕೈಗಾರೀಕರಣಗೊಂಡ ಭಾರತದ ಚಿಹ್ನೆಯೆಂದು ವ್ಯಾಖ್ಯಾನಿಸಿದ್ದರು ಎಂದು ಅರ್ನಾಲ್ಡ್ ತಿಳಿಸುತ್ತಾರೆ.

ಗೋದ್ರೆಜ್ ಜಾಲತಾಣದ ಪ್ರಕಾರ, ಭಾರತದಂಥ ಯುವ ಗಣರಾಜ್ಯದ ಪಾಲಿಗೆ ಇದೊಂದು ಅದ್ಭುತ ಸಾಧನೆಯೆಂದೇ ಪರಿಗಣಿಸಲ್ಪಟ್ಟಿತು. ಅದರಲ್ಲೂ ಈ ಯಂತ್ರವನ್ನು ಭಾರತೀಯ ಇಂಜಿನಿಯರ್‌ಗಳೇ ತಯಾರಿಸಿದ್ದರು. ಮುಂದಿನ ದಿನಗಳಲ್ಲಿ ಗೋದ್ರೆಜ್ ನಿರ್ಮಿಸಿದ ಯಂತ್ರಗಳು ರಕ್ಷಣಾ ಸಂಸ್ಥೆಗಳಿಂದ ನ್ಯಾಯಾಲಯ ಮತ್ತು ಸರಕಾರಿ ಕಚೇರಿಗಳ ವರೆಗೆ ವಿದೇಶಿ ಕಂಪೆನಿಗಳಾದ ರೆಮಿಂಗ್ಟನ್, ಒಲಿವೆಟ್ಟಿ, ಸ್ಮಿತ್-ಕೊರೊನ, ಆ್ಯಡ್ಲರ್-ರೋಯಲ್, ಒಲಿಂಪಿಯಾ ಮತ್ತು ನಕಜಿಮಾ ಜೊತೆ ಸ್ಪರ್ಧೆಗೆ ಇಳಿದಿದೆ.

1990ರ ಹೊತ್ತಿಗೆ ಭಾರತಕ್ಕೆ ಅಗತ್ಯವಿದ್ದ 1,50,000 ಟೈಪ್‌ರೈಟರ್‌ಗಳಲ್ಲಿ ಗೋದ್ರೆಜ್ 50,000 ಯಂತ್ರಗಳನ್ನು ನಿರ್ಮಿಸಿತ್ತು. ನಿಜವಾಗಿಯೂ ಅದು ಟೈಪ್‌ರೈಟರ್‌ಗಳ ಸ್ವರ್ಣಯುಗವಾಗಿತ್ತು. ಸ್ವದೇಶಿ ಮಾರುಕಟ್ಟೆಯ ಜೊತೆಗೆ ಗೋದ್ರೆಜ್ ಶ್ರೀಲಂಕ, ಇಂಡೋನೇಶಿಯಾ, ಫಿಲಿಪಿನ್ಸ್, ಮೊಝಾಂಬಿಕ್, ಅಂಗೋಲಾ ಮತ್ತು ಮೊರೊಕ್ಕೊಗೆ ಟೈಪ್‌ರೈಟರ್‌ಗಳನ್ನು ರಪ್ತು ಮಾಡಲು ಆರಂಭಿಸಿತು. ಆ ಕಾಲಕ್ಕೆ ಟೈಪ್‌ರೈಟರ್ ಶ್ರೀಮಂತಿಕೆಯ ದ್ಯೋತಕವಾಗಿ ಬದಲಾಗಿತ್ತು. ದುಡಿಯುವ ವರ್ಗ ಮೋಟಾರ್‌ಬೈಕ್ ನಂತರ ಪಡೆಯಲು ಬಯಸುತ್ತಿದ್ದ ವಸ್ತುವೆಂದರೆ ಟೈಪ್‌ರೈಟರ್. ಹೊಸ ಶತಮಾನದ ಆಗಮನದೊಂದಿಗೆ ಕಂಪ್ಯೂಟರ್ ಜನನದವರೆಗೆ ಕಂಪ್ಯೂಟರ್ ಭಾರತದ ಜನಜೀವನದಲ್ಲಿ ಅನಭಿಷಿಕ್ತ ರಾಜನಾಗಿ ಮೆರೆದಾಡಿತ್ತು.

ವಿದೇಶಿ ತಯಾರಕರು ಒಬ್ಬರ ಹಿಂದೆ ಒಬ್ಬರಂತೆ ಬಾಗಿಲು ಮುಚ್ಚಿದರೂ ಗೋದ್ರೆಜ್ 2011ರ ವರೆಗೂ ಟೈಪ್‌ರೈಟರ್ ತಯಾರಿಕೆ ಮುಂದುವರಿಸಿತ್ತು. ಮುಂಬೈಯ ನಿರ್ಮಾಣ ಘಟಕವನ್ನು ಮುಚ್ಚುವ ಮೊದಲು ಗೋದ್ರೆಜ್ ಮಾರಿದ ಕೊನೆಯ ಕಂಪ್ಯೂಟರ್ 12,000 ರೂ.ಗೆ ಮಾರಾಟವಾಗಿತ್ತು. ಆದರೆ ಸೂರ್ಯ ಮುಳುಗುವುದಕ್ಕೂ ಮುನ್ನ ಗೋದ್ರೆಜ್ ಕಂಪ್ಯೂಟರ್ ತಯಾರಿಕೆಯಲ್ಲಿ ತನ್ನ ಛಾಪು ಮೂಡಿಸಿತ್ತು. 

► ಹೊಸ ಶತಮಾನದ ಆಗಮನದೊಂದಿಗೆ ಕಂಪ್ಯೂಟರ್ ಜನನದವರೆಗೆ ಕಂಪ್ಯೂಟರ್ ಭಾರತದ ಜನಜೀವನದಲ್ಲಿ ಅನಭಿಷಿಕ್ತ ರಾಜನಾಗಿ ಮೆರೆದಾಡಿತ್ತು. ವಿದೇಶಿ ತಯಾರಕರು ಒಬ್ಬರ ಹಿಂದೆ ಒಬ್ಬರಂತೆ ಬಾಗಿಲು ಮುಚ್ಚಿದರೂ ಗೋದ್ರೆಜ್ 2011ರ ವರೆಗೂ ಟೈಪ್‌ರೈಟರ್ ತಯಾರಿಕೆ ಮುಂದುವರಿಸಿತ್ತು. ಮುಂಬೈಯ ನಿರ್ಮಾಣ ಘಟಕವನ್ನು ಮುಚ್ಚುವ ಮೊದಲು ಗೋದ್ರೆಜ್ ಮಾರಿದ ಕೊನೆಯ ಕಂಪ್ಯೂಟರ್ 12,000 ರೂ.ಗೆ ಮಾರಾಟವಾಗಿತ್ತು. ಆದರೆ ಸೂರ್ಯ ಮುಳುಗುವುದಕ್ಕೂ ಮುನ್ನ ಗೋದ್ರೆಜ್ ಕಂಪ್ಯೂಟರ್ ತಯಾರಿಕೆಯಲ್ಲಿ ತನ್ನ ಛಾಪು ಮೂಡಿಸಿತ್ತು.

ಬೆಟರ್‌ಇಂಡಿಯಾ.ಕಾಮ್

Writer - ಜೊವಿಟಾ ಅರನ್ಹಾ

contributor

Editor - ಜೊವಿಟಾ ಅರನ್ಹಾ

contributor

Similar News