×
Ad

ವೈದ್ಯಕೀಯ-ಎಂಜಿನಿಯರಿಂಗ್ ಶುಲ್ಕ ಹೆಚ್ಚಳದ ವಿರುದ್ಧ ಆಂದೋಲನ

Update: 2019-03-04 22:43 IST

ಬೆಂಗಳೂರು, ಮಾ. 4: ರಾಜ್ಯ ಸರಕಾರ ಪ್ರಸಕ್ತ ಸಾಲಿನ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ನ ಪ್ರಸ್ತಾವಿತ ಶುಲ್ಕ ಹೆಚ್ಚಳಕ್ಕೆ ಮುಂದಾಗಿದ್ದು, ವಿದ್ಯಾರ್ಥಿ ಸಮುದಾಯದಲ್ಲಿ ಆತಂಕ ಸೃಷ್ಟಿಯಾಗಿದೆ. ಹೀಗಾಗಿ, ಅದರ ವಿರುದ್ಧ ವಿದ್ಯಾರ್ಥಿ ಸಮುದಾಯದೊಂದಿಗೆ ಆಂದೋಲನ ಮಾಡಲಾಗುತ್ತದೆ ಎಂದು ಎಸ್‌ಐಒ ರಾಜ್ಯ ಅಧ್ಯಕ್ಷ ಕಿಡಿಯೂರು ನಿಹಾಲ್ ಸಾಹೇಬ್ ತಿಳಿಸಿದ್ದಾರೆ.

ಶೈಕ್ಷಣಿಕ ವರ್ಷ 2019-2020ಕ್ಕೆ ಶೇ.10 ರಷ್ಟು ಎಂಜಿನಿಯರಿಂಗ್ ಹಾಗೂ ಶೇ.15 ರಷ್ಟು ವೈದ್ಯಕೀಯ ಮತ್ತು ದಂತ ವೈದ್ಯಕೀಯದ ಶುಲ್ಕವನ್ನು ಹೆಚ್ಚಳ ಮಾಡಲಾಗಿದ್ದು, ವೈದ್ಯಕೀಯ (ಸರಕಾರಿ ಸೀಟ್) ಶುಲ್ಕವು 5,81,900 ರೂ. ರಿಂದ 5,06,000 ಕ್ಕೆ ಏರಿಕೆಯಾಗಿದೆ. ದಂತ ವೈದ್ಯಕೀಯ ಶುಲ್ಕವು 2,58,750 ರೂ.ಗಳಿಂದ 2,97,562 ರೂ.ಗೆ ಏರಿಕೆಯಾಗಿದೆ. ಅಲ್ಲದೆ, ಎಂಜಿನಿಯರಿಂಗ್ ಶುಲ್ಕದ ಹೆಚ್ಚಳವನ್ನು ನೋಡಿದಾಗ 2019-2020 ರವರೆಗೆ ವಿವಿಧ ಹಂತಗಳಲ್ಲಿ ಪ್ರಸ್ತಾವಿತ ಶುಲ್ಕ ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಗುಣಮಟ್ಟದ ಶಿಕ್ಷಣ ಒದಗಿಸುವ ಹೆಸರಿನಲ್ಲಿ ಪ್ರತಿವರ್ಷ ಸರಕಾರವು ನಿಯಮಿತ ಶುಲ್ಕದ ಹೆಚ್ಚಳದಿಂದ ವಿದ್ಯಾರ್ಥಿಗಳಿಗೆ ತೆರಿಗೆ ವಿಧಿಸುವುದರಿಂದ ಕೆಳ-ಮಧ್ಯಮ ವರ್ಗದಿಂದ ಬರುವ ಸಾವಿರಾರು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನ್ಯಾ.ಶೈಲೇಂದ್ರ ಕುಮಾರ್ ಶುಲ್ಕ ಆಯೋಗದ ಆದೇಶದನ್ವಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇ.8ರಷ್ಟು ಶುಲ್ಕ ಹೆಚ್ಚಳ ಮಾಡಬಹುದಷ್ಟೇ. ಆದರೆ, ಈಗ ಶೇ.10ರಷ್ಟು ಶುಲ್ಕ ಹೆಚ್ಚಳವಾಗುವುದರಿಂದ ಶೇ.18ರಷ್ಟು ಆಗುತ್ತದೆ. ಇದು ವಿದ್ಯಾರ್ಥಿಗಳಿಗೆ ಅಧಿಕ ಮಟ್ಟದ ಆರ್ಥಿಕ ಹೊರೆಯಾತ್ತದೆ. ಹೀಗಾಗಿ. ಅದರ ವಿರುದ್ಧ ವಿದ್ಯಾರ್ಥಿ ಸಮುದಾಯದೊಂದಿಗೆ ಸೇರಿಕೊಂಡು ಆಂದೋಲನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News