ಮೋದಿ ಅಧಿಕಾರದಲ್ಲಿರುವ ತನಕ ಕಳ್ಳರ ಅಂಗಡಿ ಬಂದ್ : ಪ್ರಧಾನ ಮಂತ್ರಿ ಮೋದಿ

Update: 2019-03-06 10:50 GMT

ಕಲಬುರಗಿ, ಮಾ.6:  ಪ್ರಧಾನಿ ನರೇಂದ್ರ ಮೋದಿ  ಅಧಿಕಾರದಲ್ಲಿರುವ ತನಕ ಕಳ್ಳರ ಅಂಗಡಿ  ಬಂದ್ ಆಗಲಿದೆ. ರಾಜ್ಯದ ಜನತಗೆ ಮೋಸವಾಗಲು ತಾನು  ಬಿಡಲಾರೆ ಎಂದು  ಪ್ರಧಾನ  ಮಂತ್ರಿ  ನರೇಂದ್ರ ಮೋದಿ ಹೇಳಿದ್ದಾರೆ.

ಕಲಬುರಗಿಯ ಎನ್‌.ವಿ ಮೈದಾನದಲ್ಲಿ ನಡೆದ ಬಿಜೆಪಿಯ ಬೃಹತ್  ರ್ಯಾಲಿ ಯನ್ನುದ್ದೇಶಿಸಿ ಮಾತನಾಡಿದ  ಅವರು ರೈತರಿಗೆ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ –ಜೆಡಿಎಸ್ ಸಮ್ಮಿಶ್ರ ಸರಕಾರ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ರೈತರಿಗೆ ಸಾಲಮನ್ನಾ ಯೋಜನೆಯಡಿ ರಾಜ್ಯದ ಸಮ್ಮಿಶ್ರ ಸರಕಾರ ಮೋಸ ಮಾಡುತ್ತಿದೆ. ಆದರೆ ಕೇಂದ್ರ ಸರಕಾರ ರೈತರ ಖಾತೆಗಳಿಗೆ ನೇರವಾಗಿ ಸೌಲಭ್ಯಗಳನ್ನು ವರ್ಗಾಯಿಸುತ್ತಿದೆ ಎಂದರು.

ಕರ್ನಾಟದಲ್ಲಿ ರಿಮೋಟ್ ಮುಖ್ಯ ಮಂತ್ರಿ ಇದ್ದಾರೆ. ಅಧಿಕಾರದಾಹಿ ಕಾಂಗ್ರೆಸ್ ರಿಮೋಟ್ ಮೂಲಕ ಸರಕಾರವನ್ನು ನಿಯಂತ್ರಿಸುತ್ತಿದೆ.  ರೈತರ ಬದ್ಧವೈರಿಯಂತಹ ಸರಕಾರ ನಿಮ್ಮ ರಾಜ್ಯದಲ್ಲಿ ಅಧಿಕಾರದಲ್ಲಿ ಕೂತಿದೆ. ಕರ್ನಾಟಕದ ಯೋಜನೆಗಳಿಗೆ ಸಮ್ಮಿಶ್ರ ಸರಕಾರ ಅಡ್ಡಗೋಡೆಯಂತೆ ಕೂತಿದೆ. ಈ ಅಡ್ಡಗೋಡೆಯನ್ನು ತೆರವು ಮಾಡಿದರೆ ರೈತರ ಅಭಿವೃದ್ಧಿಯಾಗುತ್ತದೆ ಎಂದರು. 

ಆಯುಷ್ಮಾನ್ ಯೋಜನೆಯ  ಮೂಲಕ ಸಾಕಷ್ಟು ಬಡವರಿಗೆ ಅನುಕೂಲವಾಗಿದೆ. ಪ್ರತಿನಿತ್ಯ 10 ಸಾವಿರಕ್ಕೂ ಅಧಿಕ ಬಡವರು ಪ್ರತಿದಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸಂಬಂಧ  ಎರಡು ಯೋಜನೆಗಳಿಗೆ ಕರ್ನಾಟಕದಲ್ಲಿ ಚಾಲನೆ ನೀಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ದೇಶದ 3 ಕೋಟಿಗೂ ಅಧಿಕ ತೆರಿಗೆದಾರರಿಗೆ ತೆರಿಗೆ ವಿನಾಯತಿ ನೀಡಲಾಗಿದೆ. ಐಟಿ ಇಲಾಖೆಯ ಮೇಲ್ಮನವಿ ಪ್ರಾಧಿಕಾರದ ಕಟ್ಟಡ ರಚಿಸಲಾಗಿದೆ

ದಶಕಗಳ ಹಿಂದಿನ ಬೇಡಿಕೆಯಾಗಿದ್ದ ಬೀದರ್ –ಕಲಬುರಗಿ ರೈಲು ಮಾರ್ಗವನ್ನು ದೇಶಕ್ಕೆ ಸಮರ್ಪಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News