×
Ad

ಬಜನಿಗುತ್ತು ಲಕ್ಷ್ಮಣ ರೈ

Update: 2019-03-06 18:22 IST

ಪುಂಜಾಲಕಟ್ಟೆ, ಮಾ. 6: ಸರಪಾಡಿ ಕೊಟ್ಟುಂಜ ನಿವಾಸಿ ಬಜನಿಗುತ್ತು ಲಕ್ಷ್ಮಣ ರೈ (94) ಅವರು ಮಾ. 6ರಂದು ಅಲ್ಪಕಾಲದ ಅಸೌಖ್ಯದಿಂದ ಮಾವಿನಕಟ್ಟೆಯ ಪುತ್ರನ ಮನೆಯಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಯಕ್ಷಗಾನ ಹವ್ಯಾಸಿ ಭಾಗವತರಾಗಿದ್ದ ಅವರು ಶ್ರೀ ಶರಭೇಶ್ವರ ಯಕ್ಷಗಾನ ಸಂಘದಲ್ಲಿ ಸಕ್ರೀಯರಾಗಿದ್ದರು. ಕೆಲ ದಶಕಗಳ ಹಿಂದೆ ಸರಪಾಡಿ ಪರಿಸರದಲ್ಲಿ ನಡೆಯುತ್ತಿದ್ದ ಯಕ್ಷಗಾನಗಳಲ್ಲಿ ಭಾಗವತಿಕೆ ನಡೆಸುತ್ತಿದ್ದರು. ಸುಳ್ಯ ಬೆಳ್ಳಾರೆ ಭಜನಿಗುತ್ತು ಮನೆತನದ ಯಜಮಾನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News