×
Ad

ವಾಟಾಳ್ ನಾಗರಾಜ್ ಮನೆಗೆ ಬ್ಯಾಂಕ್ ಅಧಿಕಾರಿಗಳ ಭೇಟಿ

Update: 2019-03-06 23:46 IST

ಬೆಂಗಳೂರು, ಮಾ.6: ಬ್ಯಾಂಕ್ ಸಾಲ ಮರುಪಾವತಿ ಹಿನ್ನೆಲೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಮನೆಗೆ ಬ್ಯಾಂಕ್ ಅಧಿಕಾರಿಗಳು ಭೇಟಿ ನೀಡಿದರು.

ಬುಧವಾರ ವಿಜಯಬ್ಯಾಂಕ್‌ನ ಅಧಿಕಾರಿಗಳು ಭೇಟಿ ನೀಡಿದ್ದು, ಸಾಲ ಮರುಪಾವತಿ ಸಂಬಂಧ ನೋಟಿಸ್‌ಗೆ ಉತ್ತರಿಸದ ಹಿನ್ನೆಲೆ ದಿಢೀರ್ ಭೇಟಿ ನೀಡಿದ್ದಾರೆ.

ರೆಸಿಡೆನ್ಸಿ ರಸ್ತೆಯಲ್ಲಿರುವ ವಿಜಯ ಬ್ಯಾಂಕ್‌ನಿಂದ 12 ಲಕ್ಷ ಸಾಲ ಪಡೆದು, 6 ವರ್ಷದಿಂದ ಸರಿಯಾಗಿ ಸಾಲ ಮರುಪಾವತಿ ಮಾಡಿಲ್ಲ. ಸಾಲ ಪಡೆದ ಒಪ್ಪಂದದಂತೆ 2017ರ ಜುಲೈ ತಿಂಗಳಿಗೇ ಸಾಲದ ಅವಧಿ ಮುಗಿದಿದೆ ಎನ್ನಲಾಗಿದೆ.

ಸಾಲ ಮರುಪಾವತಿ ಮಾಡುವಂತೆ ಹಲವು ಬಾರಿ ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ, ವಾಟಾಳ್ ನಾಗರಾಜ್ 5ವರ್ಷಗಳಿಂದ ವಿಳಂಬ ಮಾಡುತ್ತಿದ್ದ ಕಾರಣ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News