ಗೌರವ ಸಂಭಾವನೆಗೆ ಆಗ್ರಹಿಸಿ ಅರ್ಚಕರ ಪ್ರತಿಭಟನೆ
ಬೆಂಗಳೂರು, ಮಾ. 7: ರಾಜ್ಯದ ಮುಜರಾಯಿ ದೇವಾಲಯಗಳ ಅರ್ಚಕರಿಗೆ ಮಾಸಿಕ 5 ಸಾವಿರ ಗೌರವ ಸಂಭಾವನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ಧಾರ್ಮಿಕ ದತ್ತಿ ಅರ್ಚಕರ ಮತ್ತು ಆಗಮಿಕರ ಸಂಘದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು.
ಗುರುವಾರ ನಗರದ ಮೌರ್ಯ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಅರ್ಚಕರು, ರಾಜ್ಯದಲ್ಲಿ ಸುಮಾರು 34 ಸಾವಿರ ಮುಜರಾಯಿ ದೇವಾಲಯಗಳಿದ್ದು, ಬಹುತೇಕ ಎಲ್ಲಾ ದೇವಾಯಲಗಳು ಗ್ರಾಮೀಣ ಪ್ರದೇಶದಲ್ಲಿವೆ. ಈ ದೇವಾಲಯಗಳಿಗೆ ಬರುವ ತಸ್ತೀಕ್ ಮಾಸಿಕ ಹಣ 4 ಸಾವಿರ ರೂ.ಗಳನ್ನು ಪೂಜಾ ಕೈಂಕರ್ಯಗಳಿಗೆಂದು ನೀಡುತ್ತಿದ್ದು, ಆ ಹಣದಲ್ಲಿ ಅರ್ಚಕರಿಗೆ 1,400 ರೂ. ಮಾತ್ರ ನೀಡಲಾಗುತ್ತಿದೆ. ಈ ಹಣದಲ್ಲಿ ಜೀವನ ನಡೆಸುವುದು ಹೇಗೆ? ಹಾಗೇ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು ಕಷ್ಟವಾಗುತ್ತಿದೆ. ಆದ್ದರಿಂದ ತಸ್ತೀಕ್ ಹಣವನ್ನು ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.
ಬೇಡಿಕೆಗಳು
* ಕೇಂದ್ರ ಸರ್ಕಾರ ನಿಗದಿ ಪಡಿಸಿದಂತೆ ಕನಿಷ್ಠ ವೇತನ 249 ರೂ. ನೀಡಬೇಕು.
* ದೇವಾಲಯಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು.
* ಕೆಲ ದೇವಸ್ಥಾನಗಳಲ್ಲಿ ಮಳೆಯಿಂದ ನೀರು ಸೋರುತ್ತಿದ್ದು, ದುರಸ್ಥಿ ಮಾಡಬೇಕು.