ಐಪಿಎಸ್ ಅಧಿಕಾರಿ ರೂಪಾ ಹೆಸರಿನಲ್ಲಿ ‘ರೂಂ’: ಆರೋಪಿ ಮಹಿಳೆ ಸೆರೆ
ಬೆಂಗಳೂರು, ಮಾ.9: ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರ ಹೆಸರಿನಲ್ಲಿ ಉತ್ತರಪ್ರದೇಶದ ಲಕ್ನೋದ ಖಾಸಗಿ ಹೊಟೇಲ್‌ವೊಂದರಲ್ಲಿ ಕೊಠಡಿ ಬಾಡಿಗೆಗೆ ಪಡೆದಿದ್ದ ಆರೋಪದಡಿ ಮಹಿಳೆಯೊಬ್ಬಾಕೆಯನ್ನು ಇಲ್ಲಿನ ಬನಶಂಕರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆಶಾ ಎಂಬಾಕೆ ಬಂಧಿತ ಮಹಿಳೆ ಎಂದು ತಿಳಿದುಬಂದಿದೆ.
ಆರೋಪಿ ಆಶಾ, ಪೊಲೀಸ್ ಅಧಿಕಾರಿ ರೂಪಾ ಅವರು ಹೆಸರಲ್ಲಿ ಉತ್ತರ ಪ್ರದೇಶದ ಲಕ್ನೋಗೆ ಬರುತ್ತಿರುವುದಾಗಿ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಹೊಟೇಲ್ವೊಂದರಲ್ಲಿ ಕೊಠಡಿ ಪಡೆದಿದ್ದಳು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಉತ್ತರಪ್ರದೇಶ ಪೊಲೀಸರು, ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ತಮ್ಮ ಹೆಸರನ್ನು ದುರುಪಯೋಗ ಮಾಡಿಕೊಂಡ ಮಹಿಳೆಯನ್ನು ಪತ್ತೆ ಮಾಡುವಂತೆ ಬನಶಂಕರಿ ಪೊಲೀಸ್ ಠಾಣೆಗೆ ರೂಪಾ ಅವರು ದೂರು ಕೊಟ್ಟಿದ್ದರು. ಈ ಕುರಿತು ಪೊಲೀಸರು ವಂಚನೆ ಹಾಗೂ ಅಪರಾಧ ಕೃತ್ಯಕ್ಕೆ ಯತ್ನಿಸಿದ ಆರೋಪದಡಿ ಐಪಿಸಿ 417, 420(ವಂಚನೆ) 511 (ಅಪರಾಧ ಕೃತ್ಯ) ಅಡಿಯಲ್ಲಿ ಮೊಕದ್ದಮೆ ದಾಖಲಾಗಿತ್ತು.