ಜೆಡಿಎಸ್ ಮುಖಂಡ ಅಲ್ತಾಫ್ ಖಾನ್ ಬಂಧನ, ಬಿಡುಗಡೆ

Update: 2019-03-10 16:55 GMT

ಬೆಂಗಳೂರು, ಮಾ.10: ವ್ಯಕ್ತಿಯೊಬ್ಬನನ್ನು ಅಕ್ರಮ ಬಂಧನದಲ್ಲಿಟ್ಟು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಜೆಡಿಎಸ್ ಮುಖಂಡ ಅಲ್ತಾಫ್ ಖಾನ್‌ನನ್ನು ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿದ್ದಾರೆ.

ಇಂಡಿಯನ್ ಯುವ ಕಾಂಗ್ರೆಸ್ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಇಬ್ರಾಹಿಂ ಕಲೀಲ್‌ವುಲ್ಲಾ ಎಂಬುವರನ್ನು ಅಕ್ರಮ ಬಂಧನದಲ್ಲಿಟ್ಟು, ಜೀವ ಬೆದರಿಕೆ ಆರೋಪದ ಮೇಲೆ ಮಾಚ್.5ರಂದು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಅಲ್ತಾಫ್ ಖಾನ್ ಸೇರಿ ಐವರ ಮೇಲೆ ದೂರು ದಾಖಲಾಗಿತ್ತು. ಬಳಿಕ, ಪುರಾವೆಗಳನ್ನು ಸಂಗ್ರಹಿಸಿದ ಪೊಲೀಸರು, ಶನಿವಾರ ತಡರಾತ್ರಿ ಅಲ್ತಾಫ್ ಖಾನ್ ಬಂಧಿಸಿ, ಬಳಿಕ ನ್ಯಾಯಾಧಿಶರ ನಿವಾಸಕ್ಕೆ ಹಾಜರು ಪಡಿಸಿದರು. ಈ ವೇಳೆ ನ್ಯಾಯಾಧೀಶರ ಸಮ್ಮುಖದಲ್ಲೇ ಜಾಮೀನು ಪಡೆದು ಅಲ್ತಾಫ್ ಖಾನ್ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

‘ಝಮೀರ್ ಓರ್ವ ಕಳ್ಳ’

ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಝಮೀರ್ ಅಹ್ಮದ್ ಖಾನ್ ಒಬ್ಬ ಕಳ್ಳನಾಗಿದ್ದು, ನನ್ನ ಬೆಳವಣಿಗೆ ಸಹಿಸದೇ ಪರೋಕ್ಷವಾಗಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಅಲ್ತಾಫ್ ಖಾನ್ ವಾಗ್ದಾಳಿ ನಡೆಸಿದರು.

ರವಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಬಂಧನದ ಹಿಂದೆ ಸಚಿವ ಝಮೀರ್ ಅಹ್ಮದ್ ಕೈವಾಡವಿದೆ. ನನ್ನನ್ನು ಜೈಲಿಗೆ ಕಳಿಸಲು ಝಮೀರ್ ಪ್ರಯತ್ನ ಮಾಡುತ್ತಿದ್ದಾರೆ. ಸಚಿವರ ಬಣ್ಣವನ್ನು ಕೆಲವೇ ದಿನಗಳಲ್ಲಿ ಬಹಿರಂಗ ಮಾಡುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News