ವಾರಕ್ಕೆ ಒಂದು ದಿನ ದಿಲ್ಲಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಂಚಾರ
Update: 2019-03-10 22:49 IST
ಬೆಂಗಳೂರು, ಮಾ.10: ಯಶವಂತಪುರದಿಂದ ಚಿಕ್ಕಬಳ್ಳಾಪುರ-ಕೋಲಾರ ಮಾರ್ಗವಾಗಿ ದಿಲ್ಲಿಗೆ ವಾರಕ್ಕೆ ಒಂದು ದಿನ ಸೂಪರ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆಗೊಳಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ಪ್ರತಿ ಗುರುವಾರ ಬೆಳಗ್ಗೆ 6.30ಕ್ಕೆ ಯಶವಂತಪುರದಿಂದ ಹೊರಡಲಿರುವ ರೈಲು ಶನಿವಾರ ಮುಂಜಾನೆ 4ಕ್ಕೆ ದಿಲ್ಲಿಯ ನಿಜಾಮುದ್ದಿನ್ ನಿಲ್ದಾಣ ತಲುಪಲಿದೆ. ಮಾ.14ರಿಂದ ಜೂ.20ರವರೆಗೆ ಪ್ರತಿ ಗುರುವಾರ ಈ ರೈಲಿನ ಸಂಚಾರವಿರಲಿದೆ. ದಿಲ್ಲಿಯಿಂದ ಪ್ರತಿ ಸೊಮವಾರ (ಮಾ.18ರಿಂದ) ರಾತ್ರಿ 8ಕ್ಕೆ ಹೊರಟು ಬುಧವಾರ ಮಧ್ಯಾಹ್ನ 3ಕ್ಕೆ ಯಶವಂತಪುರ ತಲುಪಲಿದೆ. ಯಲಹಂಕ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಬಂಗಾರಪೇಟೆ, ಜೊಳಾರಪೇಟೆ ಮಾರ್ಗವಾಗಿ ಸಂಚರಿಸಲಿದೆ ಎಂದು ಇಲಾಖೆ ತಿಳಿಸಿದೆ.