ಬೀದರ್ ಜಿಲ್ಲೆಯ ಅಭಿವೃದ್ಧಿ ಯಾವಾಗ?

Update: 2019-03-10 18:36 GMT

ಮಾನ್ಯರೇ,

ಕರ್ನಾಟಕದ ಕಿರೀಟ, ಸೂಫಿ ನಾಡು, ಗಡಿನಾಡು, ಹೀಗೆ ವಿಭಿನ್ನ ಹೆಸರುಗಳಿಂದ ಕೂಡಿರುವ ಜಿಲ್ಲೆ ಬೀದರ್. ಜಿಲ್ಲೆಗೆ ಸಾಕಷ್ಟು ಹೆಸರುಗಳೇನೋ ಇವೆ ಆದರೆ ಇಲ್ಲಿನ ಜನರ ಸ್ಥಿತಿಗತಿ ಆ ದೇವರೇ ಬಲ್ಲ.
ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿರುವ ಜಿಲ್ಲೆ ಬೀದರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತಿ ಬಾರಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕೊನೆಯ ಸ್ಥಾನ ಪಡೆಯುವ ಈ ಜಿಲ್ಲೆಯ ಶೈಕ್ಷಣಿಕ ಸ್ಥಾನಮಾನ ಹೇಳಬೇಕಿಲ್ಲ.
 ನಿರುದ್ಯೋಗ ಸಮಸ್ಯೆ ಜಿಲ್ಲೆ ಬಿಟ್ಟು ತೊಲಗಿಲ್ಲ. ಈತನ್ಮಧ್ಯೆ ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಸಿಗುವ ಸಂಬಳ ಕೇವಲ ರೂ. 5,000ದಿಂದ 8,000. ಜನರು ಈ ಕಡಿಮೆ ಸಂಬಳದಲ್ಲೇ ದಿನ ಕಳೆಯಬೇಕಾಗಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಸಾಕಷ್ಟು ಸರಕಾರಗಳು ಬಂದು ಹೋಗಿವೆ. ಆದರೆ ಈ ಜಿಲ್ಲೆಯ ಅಭಿವೃದ್ಧಿಯತ್ತ ಯಾರೂ ಗಮನಹರಿಸಿಲ್ಲ. ಹಾಗಂತ ರಾಜಕೀಯ ಸ್ಥಾನಮಾನಗಳಲ್ಲಿ ಈ ಜಿಲ್ಲೆಯನ್ನು ಕಡೆಗಣಿಸಿಲ್ಲ. ಈಗಿನ ಸರಕಾರ ಜಿಲ್ಲೆಯ ಮೂವರಿಗೆ ಸಚಿವ ಸ್ಥಾನ ನೀಡಿದೆ. ಆದರೂ ಜಿಲ್ಲೆ ಅಭಿವೃದ್ಧಿ ಕಂಡಿಲ್ಲ. ಇದಕ್ಕೆಲ್ಲಾ ಶಾಸಕ, ಸಚಿವರ ಹಾಗೂ ಅಧಿಕಾರಿಗಳ ನಿರ್ಲಕ್ಷವೇ ಕಾರಣ.
 
ಇನ್ನು ಮುಂದಾದರೂ ಜಿಲ್ಲೆಯ ಅಭಿವೃದ್ಧಿಯತ್ತ ಎಲ್ಲರೂ ಗಮನ ಹರಿಸಬೇಕು. ಅದರಲ್ಲೂ ನಿರುದ್ಯೋಗ ಸಮಸ್ಯೆ ಬಗೆಹರಿಸುವುದು ಬಹುಮುಖ್ಯವಾಗಿದೆ. ಹಾಗಾಗಿ ಬೀದರ್‌ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಉದ್ಯೋಗ ಸೃಷ್ಟಿಸುವಂತಹ ಕೆಲಸ ಮಾಡಲು ಮುಂದಾಗಲಿ.

Writer - ಶ್ರೀನಿವಾಸ ಬಿ., ಬೀದರ್

contributor

Editor - ಶ್ರೀನಿವಾಸ ಬಿ., ಬೀದರ್

contributor

Similar News