ಮೂಲ ಸೌಕರ್ಯ ನೀಡಿ

Update: 2019-03-10 18:37 GMT

ಮಾನ್ಯರೇ,

ಕಳೆದ ವರ್ಷ ರಾಜ್ಯದಲ್ಲಿ 48 ಹೊಸ ತಾಲೂಕುಗಳ ಘೋಷಣೆ ಮಾಡಲಾಯಿತು. ಇವುಗಳಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಡ್ರಾಮಿ ಪಟ್ಟಣ ಕೂಡ ಒಂದು. ಈ ತಾಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ. ದೂರವಿದ್ದು, ಸುತ್ತಲ ಹತ್ತಾರು ಹಳ್ಳಿಗಳಿಗೆಲ್ಲ ವ್ಯಾಪಾರ ಕೇಂದ್ರವಾಗಿದೆ. ಈ ಪಟ್ಟಣವನ್ನು ತಾಲೂಕು ಕೇಂದ್ರ ಎಂದು ಸರಕಾರವೇ ಘೋಷಣೆ ಮಾಡಿತು. ಆದರೆ, ಈಗಲೂ ಇಲ್ಲಿ ಗ್ರಾಮ ಪಂಚಾಯತ್‌ನ ಆಡಳಿತವಿರುವುದು ಸೋಜಿಗದ ಸಂಗತಿಯಾಗಿದೆ. ಉಪತಹಶೀಲ್ದಾರ್ ಕಚೇರಿ ಹೊರತುಪಡಿಸಿ ಬೇರೆ ಯಾವುದೇ ಸರಕಾರಿ ಕಚೇರಿಗಳೂ ಇಲ್ಲಿಲ್ಲ!. ಜನರು ತಮ್ಮ ಬಹುತೇಕ ಕೆಲಸ ಕಾರ್ಯಗಳಿಗೆ ಜೇವರ್ಗಿಗೆ ಹೋಗಬೇಕಾಗಿದೆ. ಅಲ್ಲದೆ ಸರಿಯಾದ ರಸ್ತೆ, ಸಾರಿಗೆ ಸೌಲಭ್ಯ, ಮೂಲಭೂತ ಸೌಕರ್ಯಗಳೂ ಇಲ್ಲದೆ ಜನ ಪರದಾಡುವಂತಾಗಿದೆ. ಇಡೀ ಊರಿಗೆ ಒಂದೇ ಒಂದು ರಾಷ್ಟ್ರೀಯ ಬ್ಯಾಂಕ್ ಇದೆ. ಬಸ್ ಡಿಪೋ ಇಲ್ಲ. ಈ ಹೊಸ ತಾಲೂಕಿನಲ್ಲಿ ಎಲ್ಲಾ ರೀತಿಯ ಸರಕಾರಿ ಕಚೇರಿಗಳು ಆದಷ್ಟು ಬೇಗ ಸ್ಥಾಪನೆ ಮಾಡಬೇಕಿದೆ. ಹಿಂದುಳಿದ ಈ ತಾಲೂಕಿನ ಜನರಲ್ಲಿ ಅಭಿವೃದ್ಧ್ದಿಗಾಗಿ ಹೋರಾಡುವ ಸ್ವ ಇಚ್ಛೆ, ಕಿಚ್ಚು ಮೈಗೂಡುವುದು ಯಾವಾಗ?

Writer - ಪ್ರಹ್ಲಾದ್, ಯಡ್ರಾಮಿ

contributor

Editor - ಪ್ರಹ್ಲಾದ್, ಯಡ್ರಾಮಿ

contributor

Similar News