ಕನ್ನಡದ ಪ್ರಸಿದ್ಧ ನಟನ ಹತ್ಯೆಗೆ ಸಂಚು: ಆರೋಪಿಗಳ ವಿಚಾರಣೆಗೆ ಸಿಸಿಬಿಗೆ ಅನುಮತಿ ನೀಡಿದ ಕೋರ್ಟ್
Update: 2019-03-11 22:09 IST
ಬೆಂಗಳೂರು, ಮಾ.11: ಕನ್ನಡದ ಪ್ರಸಿದ್ದ ನಟರೊಬ್ಬರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು 6 ದಿನಗಳ ಕಾಲ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ.
ಪ್ರಮುಖ ಆರೋಪಿಗಳಾದ ಸ್ಲಂ ಭರತ, ಶಫಿಯನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ಸಿಸಿಬಿ ಪೊಲೀಸರು 1ನೆ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು ಈ ಇಬ್ಬರು ಆರೋಪಿಗಳನ್ನು 6 ದಿನಗಳ ಕಾಲ ವಿಚಾರಣೆ ನಡೆಸಲು ಸಿಸಿಬಿ ಪೊಲೀಸರಿಗೆ ಅನುಮತಿ ನೀಡಿ ಆದೇಶಿಸಿತು. ಸ್ಟಾರ್ ನಟರ ಹತ್ಯೆಗೆ ಸ್ಲಂ ಭರತ್ ಸುಫಾರಿ ಪಡೆದಿದ್ದ ಎಂದು ಹೇಳಲಾಗಿದೆ. ಆದರೆ, ಪೊಲೀಸರು ಈ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.