ಕೇಂದ್ರದ ನಿಧಿ ಬಳಸಿಕೊಳ್ಳುವಲ್ಲಿ ಹಿಂದುಳಿದ ಕರ್ನಾಟಕ

Update: 2019-03-11 16:58 GMT

ಬೆಂಗಳೂರು, ಮಾ.11: ರಾಜ್ಯದ ಶೈಕ್ಷಣಿಕ ಅಭಿವೃದ್ದಿಗಾಗಿ ಕೇಂದ್ರ ಸರಕಾರ ನೀಡುವ ನಿಧಿಯನ್ನು ಬಳಸಿಕೊಳ್ಳುವಲ್ಲಿ ಕರ್ನಾಟಕ ದೇಶದ ಇತರೆ ರಾಜ್ಯಗಳಿಗಿಂತ ಹಿಂದುಳಿದಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿರುವ ವಿಶೇಷ ಕಾರ್ಯಕ್ಷಮತೆಯ ಶ್ರೇಣೀಕೃತ ಸೂಚ್ಯಂಕ (ಪಿಜಿಐ) ನಲ್ಲಿ ರಾಜ್ಯ ಮೂರನೇ ದರ್ಜೆಯಲ್ಲಿ ಗುರುತಿಸಿಕೊಂಡಿದೆ.

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯು ಈಕ್ವಿಟಿ, ಮೂಲಭೂತ ಸೌಕರ್ಯ, ಪ್ರವೇಶ, ಕಲಿಕೆ ಫಲಿತಾಂಶಗಳು ಮತ್ತು ಗುಣಮಟ್ಟದ ವಿಷಯದಲ್ಲಿ ಉತ್ತಮ ಮಟ್ಟದಲ್ಲಿದ್ದರೂ, ಶಿಕ್ಷಣ ವ್ಯವಸ್ಥೆಗಳ ಆಡಳಿತ ಪ್ರಕ್ರಿಯೆಗಳಲ್ಲಿ ರಾಜ್ಯ ಹಿಂದೆ ಬಿದ್ದಿದೆ. ಅಲ್ಲದೆ ಕೇಂದ್ರದ ನಿಧಿಯನ್ನು ಸರಿಯಾದ ಬಗೆಯಲ್ಲಿ ವಿನಿಯೋಜಿಸುವುದಲ್ಲಿ ನಿಧಾನಗತಿಯನ್ನು ತಳೆದಿದೆ.

ವರದಿಯಲ್ಲಿ ಉಲ್ಲೇಖಿಸಿರುವಂತೆ, ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ನೈಜ ಫಲಾನುಭವಿಗಳಿಗೆ ಕೇಂದ್ರದ ಪಾಲನ್ನು ನೀಡುತ್ತಿಲ್ಲ. ವಿವಿಧ ಯೋಜನೆಗಳಿಗೆ ಕೇಂದ್ರ ಸರಕಾರದ ನಿಧಿಯನ್ನು ಬಳಸಿಕೊಳ್ಳುವುದಕ್ಕೆ ವಿಳಂಬ ಮಾಡುತ್ತಿದೆ ಎಂದು ಹೇಳಲಾಗಿದೆ.

ಎಂಎಚ್‌ಆರ್‌ಡಿ ವರದಿ ಮುಖ್ಯಾಂಶಗಳು:

ಗ್ರೇಡ್ 1 ಅಡಿಯಲ್ಲಿ ಚಂಡೀಗಢ, ಗುಜರಾತ್ ಮತ್ತು ಕೇರಳ ರಾಜ್ಯಗಳು ಸ್ಥಾನ ಪಡೆದಿವೆ.

ಗ್ರೇಡ್ 2 ಅಡಿಯಲ್ಲಿ ದಾದರ್ ನಗರ್ ಹವೇಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ತಮಿಳುನಾಡುಗಳಿವೆ.

ಗ್ರೇಡ್ 3 ನಲ್ಲಿ ಆಂಧ್ರಪ್ರದೇಶ, ಛತ್ತೀಸ್‌ಗಡ, ಅಸ್ಸಾಂ, ದೆಹಲಿ, ಗೋವಾ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ ಮತ್ತು ಉತ್ತರಾಖಂಡ್ ರಾಜ್ಯಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News