ಸಹಕಾರ ಶಿಕ್ಷಣ ನಿಧಿಗೆ ಚೆಕ್ ಹಸ್ತಾಂತರ
Update: 2019-03-12 22:37 IST
ಬೆಂಗಳೂರು, ಮಾ.12: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 70ನೇ ವಾರ್ಷಿಕ ಸಂಭ್ರಮದ ನಿಮಿತ್ತ ಮಂಗಳವಾರ ಆಯೋಜಿಸಲಾಗಿದ್ದ ವಿಚಾರಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಅರುಣ್ ಕುಮಾರ್‌ಗೆ ಸಹಕಾರ ಶಿಕ್ಷಣ ನಿಧಿ 1,00,179 ರೂ.ಗಳ ಚೆಕ್ ಅನ್ನು ಸಂಘದ ಅಧ್ಯಕ್ಷ ಎಂ.ಎಸ್.ರಾಜೇಂದ್ರಕುಮಾರ್ ಹಾಗೂ ಕಾರ್ಯದರ್ಶಿ ಎ.ಎಸ್.ನಾಗರಾಜಸ್ವಾಮಿ ಹಸ್ತಾಂತರಿಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಎಸ್.ಲಕ್ಷ್ಮೀನಾರಾಯಣ, ಖಜಾಂಚಿ ಯತಿರಾಜು, ನಿರ್ದೇಶಕರಾದ ಎಂ.ಡಿ.ಶಿವಕುಮಾರ್(ಬೆಳ್ಳಿತಟ್ಟೆ), ಬಿ.ಎನ್. ಮೋಹನ್ ಕುಮಾರ್, ಎನ್. ವನಿತಾ, ಸಚ್ಚಿದಾನಂದ ಕುರಗುಂದ್, ಶಿವಣ್ಣ ಮತ್ತು ಕಾರ್ಯಕ್ರಮ ಸಮನ್ವಯಾಧಿಕಾರಿ ಎಂ.ಮಲ್ಲರಾಜ್ ಉಪಸ್ಥಿತರಿದ್ದರು.