ಇಎಸ್‌ಐ ಆಸ್ಪತ್ರೆಯ 81 ವೈದ್ಯರ ದಿಢೀರ್ ವರ್ಗಾವಣೆ

Update: 2019-03-13 14:44 GMT

ಬೆಂಗಳೂರು, ಮಾ.13: ರಾಜಾಜಿನಗರದ ಕಾರ್ಮಿಕ ವಿಮಾ ಆಸ್ಪತ್ರೆ (ಇಎಸ್‌ಐ)ಗಳ 81 ಮಂದಿ ವೈದ್ಯರನ್ನು ಉತ್ತರ ಭಾರತದ ರಾಜ್ಯಗಳ ಇಎಸ್‌ಐ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಗಿದೆ.

ವೈದ್ಯರ ವರ್ಗಾವಣೆಯಿಂದ ಆಸ್ಪತ್ರೆಯ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗುವ ಭೀತಿ ಎದುರಾಗಿದೆ. ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯು 1961 ರಿಂದ ಕಾರ್ಯನಿರ್ವಸುತ್ತಿದ್ದು, 11 ಲಕ್ಷ ಇಎಸ್‌ಐ ಕಾರ್ಡ್ ನೋಂದಾಯಿತ ಸದಸ್ಯರಿದ್ದಾರೆ. ಇವರಲ್ಲಿ ಅನಾರೋಗ್ಯಕ್ಕೊಳಗಾಗುವ ಹಲವು ಮಂದಿಗೆ ವೈದ್ಯರ ವರ್ಗಾವಣೆಯಿಂದ ಚಿಕಿತ್ಸೆ ನೀಡುವುದು ಕಷ್ಟಕರವಾಗಲಿದೆ.

ಚರ್ಮರೋಗ, ಹೃದ್ರೋಗ, ಅರವಳಿಕೆ ಸೇರಿದಂತೆ ವಿವಿಧ ವೈದ್ಯರು ವರ್ಗಾವಣೆಯಾಗಿದ್ದು, ಏಕಾಏಕಿ ವರ್ಗಾವಣೆಯಿಂದ ಆಸ್ಪತ್ರೆಯ ವೈದ್ಯಕೀಯ ಸೇವೆಯಲ್ಲಿ ಭಾರಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಆಸ್ಪತ್ರೆಯಲ್ಲಿ ಅಗತ್ಯಕ್ಕಿಂತ ಹೆಚ್ಚುವರಿ ವೈದ್ಯರಿದ್ದಾರೆನ್ನುವ ಕಾರಣ ನೀಡಿ, 81 ಮಂದಿ ವೈದ್ಯರನ್ನು ಉತ್ತರ ಪ್ರದೇಶ, ದೆಹಲಿ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಇಎಸ್‌ಐ ಆಸ್ಪತ್ರೆಗಳಿಗೆ ಕೇಂದ್ರ ಸರಕಾರ ವರ್ಗಾವಣೆ ಮಾಡಿ ಶಾಕ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News