ವೇಗವಾಗಿ 8,000 ರನ್ ಪೂರೆಸಿದ ರೋಹಿತ್

Update: 2019-03-14 03:30 GMT

ಹೊಸದಿಲ್ಲಿ, ಮಾ.13: ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 8,000 ರನ್ ಪೂರೈಸಿದ ವಿಶ್ವದ ಮೂರನೇ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

ವಿರಾಟ್ ಕೊಹ್ಲಿ, ಸೌರವ್ ಗಂಗುಲಿ, ಸಚಿನ್ ತೆಂಡುಲ್ಕರ್, ಎಂ.ಎಸ್. ಧೋನಿ, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಹಾಗೂ ಮುಹಮ್ಮದ್ ಅಝರುದ್ದೀನ್ ಬಳಿಕ ಈ ಸಾಧನೆ ಮಾಡಿದ ಭಾರತದ 9ನೇ ದಾಂಡಿಗಎನಿಸಿಕೊಂಡರು.

 ಮುಂಬೈ ದಾಂಡಿಗ ರೋಹಿತ್ ಬುಧವಾರ 5ನೇ ಏಕದಿನ ಪಂದ್ಯದಲ್ಲಿ 41ನೇ ಅರ್ಧಶತಕ ಸಿಡಿಸುವುದರೊಂದಿಗೆ 8,000 ರನ್ ಪೂರೈಸಿದರು. ರೋಹಿತ್ 200 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದರು. ಗಂಗುಲಿ ಅವರೊಂದಿಗೆ ಜಂಟಿ 3ನೇ ಸ್ಥಾನ ಹಂಚಿಕೊಂಡ ರೋಹಿತ್, ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಬಳಿಕ ವೇಗವಾಗಿ 8 ಸಾವಿರ ರನ್ ಪೂರೈಸಿದ ಮೂರನೇ ಕ್ರಿಕೆಟಿಗ ಎನಿಸಿಕೊಂಡರು.

 ಭಾರತದ ನಾಯಕ ರೋಹಿತ್ ಶರ್ಮಾ ಹಾಗೂ ದ.ಆಫ್ರಿಕದ ಡಿವಿಲಿಯರ್ಸ್ ಕ್ರಮವಾಗಿ 175ನೇ ಹಾಗೂ 182ನೇ ಇನಿಂಗ್ಸ್‌ನಲ್ಲಿ 8,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ರೋಹಿತ್ ಮೊಹಾಲಿಯಲ್ಲಿ ನಡೆದ 4ನೇ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿ ಎಂ.ಎಸ್. ಧೋನಿ ದಾಖಲೆ ಮುರಿದಿದ್ದರು. ತವರು ನೆಲದಲ್ಲಿ 3,000 ರನ್ ಪೂರೈಸುವುದರೊಂದಿಗೆ ಸಚಿನ್ ತೆಂಡುಲ್ಕರ್ ಹಾಗೂ ಧೋನಿ ಅವರಿದ್ದ ಇಲೈಟ್ ಕ್ಲಬ್‌ಗೆ ಸೇರ್ಪಡೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News