ಎಐಸಿಸಿ ಮಾಜಿ ಕಾರ್ಯದರ್ಶಿ ಟಾಮ್ ವಡಕ್ಕನ್ ಬಿಜೆಪಿಗೆ

Update: 2019-03-14 16:02 GMT

ಹೊಸದಿಲ್ಲಿ , ಮಾ.14: ಹಿರಿಯ ಕಾಂಗ್ರೆಸ್ ಮುಖಂಡ, ಕಾಂಗ್ರೆಸ್ ವಕ್ತಾರ ಟಾಮ್ ವಡಕ್ಕನ್ ಗುರುವಾರ ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಳಿಕ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾದರು. ಪುಲ್ವಾಮಾ ದಾಳಿಯ ಬಳಿಕ ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿಯ ಬಗ್ಗೆ ಸಂಶಯ ವ್ಯಕ್ತಪಡಿಸಿ ಪ್ರಶ್ನಿಸಿದ್ದ ಕಾಂಗ್ರೆಸ್‌ನ ಧೋರಣೆಯನ್ನು ಖಂಡಿಸಿ ತಾನು ಪಕ್ಷ ತ್ಯಜಿಸಿರುವುದಾಗಿ ವಡಕ್ಕನ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿರುವ ವಂಶಾಡಳಿತ ಪರಂಪರೆ ಹಾಗೂ ‘ಉಪಯೋಗಿಸಿದ ಬಳಿಕ ಬಿಸಾಡಿಬಿಡುವ ’ ಪ್ರವೃತ್ತಿಯ ಬಗ್ಗೆ ಅಸಮಾಧಾನದಿಂದ ತಾನು ಪಕ್ಷ ತೊರೆಯುತ್ತಿರುವುದಾಗಿ ವಡಕ್ಕನ್ ತಿಳಿಸಿದ್ದಾರೆ. ವಡಕ್ಕನ್ ಇದುವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಅವರು ಸೋನಿಯಾ ಗಾಂಧಿಯ ಆಪ್ತವರ್ಗದಲ್ಲಿ ಗುರುತಿಸಿಕೊಂಡಿದ್ದರು. 1990ರಲ್ಲಿ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ನೇಮಿಸಿದ್ದ ಪ್ರಥಮ ಮಾಧ್ಯಮ ಸಮಿತಿಯ ಸದಸ್ಯರಾಗಿದ್ದರು. ವಡಕ್ಕನ್ ಕೇರಳದ ತ್ರಿಶ್ಯೂರ್ , ಇಡುಕ್ಕಿ ಅಥವಾ ಎರ್ನಾಕುಳಂನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News