ಮುಂಬೈ: ಸಿಎಸ್ ಟಿ ರೈಲು ನಿಲ್ದಾಣದ ಸೇತುವ ಕುಸಿತ ಕನಿಷ್ಠ 5 ಮಂದಿ ಸಾವು, 36 ಗಾಯ

Update: 2019-03-14 19:05 GMT

ಮುಂಬೈ, ಮಾ. 14: ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ರೈಲು ನಿಲ್ದಾಣದಲ್ಲಿ ಗುರುವಾರ ಪಾದಚಾರಿ ಮೇಲ್ಸೇತುವ ಕುಸಿದ ಪರಿಣಾಮ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ ಹಾಗೂ 36 ಮಂದಿ ಗಾಯಗೊಂಡಿದ್ದಾರೆ. ಮೇಲ್ಸೇತುವೆ ದುರಸ್ಥಿ ನಡೆಯುತ್ತಿತ್ತು. ಆದರೂ ಈ ಸೇತುವೆಯನ್ನು ಬಳಸಲಾಗುತ್ತಿತ್ತು. ಸಂಜೆ 7.30ಕ್ಕೆ ಸೇತುವೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ. ಸೇತುವೆ ಮುಂಬೈ ಸ್ಥಳೀಯಾಡಳಿತದ ಅಡಿಯಲ್ಲಿ ಬರುತ್ತದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ. ಆದರೆ, ಶಿವಸೇನೆ ಶಾಸಕ ಅನಿಲ್ ದೇಸಾಯಿ ಈ ಆರೋಪವನ್ನು ತಿರಸ್ಕರಿಸಿದ್ದಾರೆ. ರೈಲ್ವೆ ಹಾಗೂ ಸ್ಥಳೀಯಾಡಳಿತ ಈ ಘಟನೆ ಬಗ್ಗೆ ತನಿಖೆ ನಡೆಸಬೇಕು ಎಂದು ರಾಜ್ಯ ಸಚಿವ ವಿನೋದ್ ತಾವ್ಡೆ ಹೇಳಿದ್ದಾರೆ.

ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಕುಸಿದ ಸೇತುವೆಯ ಅವಶೇಷಗಳ ಅಡಿಯಲ್ಲಿ 10-12 ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಎನ್‌ಡಿಆರ್‌ಎಫ್ ಆರಂಭದಲ್ಲಿ ಹೇಳಿತ್ತು. ಆದರೆ, ಅನಂತರ ಪೊಲೀಸರು ಅದನ್ನು ನಿರಾಕರಿಸಿದ್ದರು. ಗಾಯಗೊಂಡ 10 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಇತರ 10 ಮಂದಿಯನ್ನು ಸಂತ ಜಾರ್ಜ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News