ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ ಜೋಶ್ನಾ

Update: 2019-03-14 18:22 GMT

ಕೈರೋ(ಈಜಿಪ್ಟ್), ಮಾ.14: ಈಜಿಪ್ಟ್ ಸ್ಕ್ವಾಷ್ ಓಪನ್ ಟೂರ್ನಿಯಲ್ಲಿ ಜೋಶ್ನಾ ಚಿನ್ನಪ್ಪರ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಜೋಶ್ನಾ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.5ನೇ ಆಟಗಾರ್ತಿ ಜೊಲ್ಲಿ ಕಿಂಗ್ ವಿರುದ್ಧ ಸೋತಿದ್ದಾರೆ.

ಮೂರನೇ ಶ್ರೇಯಾಂಕದ ಕಿಂಗ್ 64 ನಿಮಿಷಗಳ ಕಾಲ ನಡೆದ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ಜೋಶ್ನಾರನ್ನು 7-11, 12-10, 2-11, 11-5, 11-8 ಅಂತರದಿಂದ ಮಣಿಸಿದರು. ನ್ಯೂಝಿಲೆಂಡ್‌ನ ಕಿಂಗ್ ಸೆಮಿ ಫೈನಲ್‌ಗೆ ತಲುಪಿದ ಈಜಿಪ್ಟ್‌ಗೆ ಸೇರದ ಏಕೈಕ ಆಟಗಾರ್ತಿಯಾಗಿದ್ದಾರೆ. ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಜೋಶ್ನಾ ಒಂದು ಹಂತದಲ್ಲಿ 2-1 ಮುನ್ನಡೆಯಲ್ಲಿದ್ದರು. ಆದರೆ, ಪಂದ್ಯ ಮುಂದುವರಿದಂತೆ ಜೋಶ್ನಾ ತನ್ನ ಹಿಡಿತವನ್ನು ಕಳೆದುಕೊಂಡರು.

ಜೋಶ್ನಾ ಲೆಜೆಂಡರಿ ನಿಕೊಲ್ ಡೇವಿಡ್ ಹಾಗೂ ಆರನೇ ಶ್ರೇಯಾಂಕದ ಸಾರ್ಹಾ-ಜಾನ್ ಪೆರ್ರಿ ಅವರನ್ನು ಮಣಿಸಿ ಟೂರ್ನಿಯಲ್ಲಿ ಅಂತಿಮ-8ರ ಘಟ್ಟ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News