ಜುಬೈಲ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಹೊನಲುಬೆಳಕಿನ ವಾಲಿಬಾಲ್ ಪಂದ್ಯಾಟ

Update: 2019-03-16 14:09 GMT

ದಮ್ಮಾಮ್ : ಜುಬೈಲ್ ಫ್ರೆಂಡ್ಸ್ ಸರ್ಕಲ್ ನೇತೃತ್ವದಲ್ಲಿ ಪ್ರತಿಷ್ಠಿತ ಆಯ್ದ 4 ತಂಡಗಳ ನಡುವೆ ಹೊನಳುಬೆಳಕಿನ ವಾಲಿಬಾಲ್ ಪಂದ್ಯಾಟವು ನಡೆಯಿತು.

ಪ್ರತಿಷ್ಠಿತ ಚಾಂಪಿಯನ್ ಶಿಪ್ ಹೋರಾಟದ ಸಾಲಿನಲ್ಲಿ ಅಂಪ್ಲಿಟ್ಯೂಡ್, ಅಲ್- ಹಾದ್, ಟೀಮ್ ಮಿಗ್ ಅರೇಬಿಯಾ ಮತ್ತು ಅರೇಬಿಯನ್ ಕ್ಲೌಡ್ಸ್ ತಂಡಗಳು ಭಾಗವಹಿಸಿದ್ದವು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಶಾನ್ ಮಿಗ್ ಅರೇಬಿಯಾ ವಹಿಸಿ, ಕ್ರಿಡೆಯ ಮಹತ್ವದ ಬೆಳವಣಿಗೆ ಬಗ್ಗೆ ವಿವರಿಸಿದರು. ಬ್ಲಡ್ ಡೋನರ್ಸ್ ಮಂಗಳೂರು ಇದರ ಆಡ್ಮಿನ್ ನೌಫಲ್ ಬಜ್ಪೆ ಮುಖ್ಯ ಅಥಿತಿಯಾಗಿ ಭಾಗವಹಿಸಿದರು. 

ವೆದಿಕೆಯಲ್ಲಿ ಅಶ್ರಫ್ ಅಲ್ ಹಾದ್, ಅಕ್ಬರ್ ಮಂಗಳೂರು ರೆಸ್ಟಾರೆಂಟ್ ಮತ್ತು ಸಿರಾಜ್ ಫಹದ್ ಇಂಜಿನಿಯರಿಂಗ್ ಉಪಸ್ಥಿತರಿದ್ದರು.

ಕ್ರೀಡೆಯಲ್ಲಿ ಕೇವಲ ಮನರಂಜನೆ, ದೇಹ ದಂಡಿಸುವಿಕೆ ಮತ್ತು ಗೆಲುವೇ ಪ್ರಮುಖವಲ್ಲ ಅದರೊಂದಿಗೆ ಜವಾಬ್ದಾರಿಯುತ ನಾಗರೀಕರಾಗಿ ಸಮಾಜ ಮುಖಿಯಾಗಿ ಕ್ರೀಡಾಮನೋಬಾವವನ್ನು ಬೆಳೆಸುವುದು ಕಾಲದ ಬೇಡಿಕೆಯಾಗಿದೆ. ಇದಕ್ಕೆ ಪೂರಕವೆಂಬಂತೆ ಈ ನಾಲ್ಕು ತಂಡಗಳು ಮಂಗಳೂರಿನ ಹೆಮ್ಮೆಯ ಪ್ರತಿಷ್ಠಿತ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಲೋಗೋ ಒಳಗೊಂಡ ಸಮವಸ್ತ್ರ ಧರಿಸಿ ರಕ್ತದಾನದ ಮಹತ್ವವನ್ನು ಸಾರಿದರು.

ತಾಯ್ನಾಡಿನ ಹೊರತಾಗಿ ಗಲ್ಫ್ ರಾಷ್ಟಗಳಲ್ಲಿ ಕೂಡ ಅನಿವಾಸಿಗಳಿಗೆ ರಕ್ತದ ಆವಶ್ಯಕತೆಗೆ ತಕ್ಷಣ ಸ್ಪಂದಿಸುವ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಲೋಗೋ ಧರಿಸಿ ರಕ್ತದಾನ ಮಾಡಿ ಜೀವ ಉಳಿಸಿ ಅದರೊಂದಿಗೆ ರಕ್ತಸಂಬಂಧಿಗಳಾಗಿ ಎಂಬ ಧ್ಯೇಯದೊಂದಿಗೆ ಕಣಕ್ಕಿಳಿದು ಕ್ರೀಡಾಸ್ಫೂರ್ತಿಯೊಂದಿಗೆ   ಆಟವಾಡಿದರು.

ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ತೋರಿದ ಅಲ್ ಹಾದ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವುದರೊಂದಿಗೆ ಅದಕ್ಕೆ ಪೈಪೋಟಿ ನೀಡಿದ ಮಿಗ್ ಅರೇಬಿಯಾ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಸಫ್ವಾನ್ ಬಜ್ಪೆ ಕಾರ್ಯಕ್ರಮ ನಿರೂಪಿಸಿ, ನವಾಝ್ ಪಡುಬಿದ್ರೆ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News