ಬಂಡೀಪುರ ಅಭಯಾರಣ್ಯವನ್ನು ಸುಟ್ಟ ಕಾಡ್ಗಿಚ್ಚಿನ ಸುತ್ತಮುತ್ತ

Update: 2019-03-16 15:05 GMT

ಕಸ್ತೂರಿ ರಂಗನ್ ವರದಿ ಜಾರಿ ಬೆಂಕಿಯಿಂದ ಅರಣ್ಯ ನಾಶವಾಗುವುದಕ್ಕೆ ಪರಿಹಾರವಲ್ಲ. ಅರಣ್ಯ ಇಲಾಖೆಯವರು ಅರಣ್ಯ ರಕ್ಷಣೆ ಕಡೆಗೆ ಹೆಚ್ಚಿನ ಗಮನಕೊಟ್ಟು ಅರಣ್ಯವನ್ನು ರಕ್ಷಿಸುವುದಲ್ಲದೆ, ಈಗಾಗಲೇ ನಾಶವಾಗಿರುವ ಅರಣ್ಯವನ್ನು ಪುನಃಶ್ಚೇತನ ಗೊಳಿಸಬೇಕಾಗಿರುವುದು ಇಂದಿನ ಆದ್ಯತೆ ಆಗಬೇಕು.

ಎ.ಕೆ ಸುಬ್ಬಯ್ಯ

ಈವರ್ಷ ಬಂಡೀಪುರದ ಹುಲಿ ರಕ್ಷಿತ ಪ್ರದೇಶವೂ ಆಗಿರುವ ಅಭಯಾರಣ್ಯ ದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ದಿನಗಟ್ಟಲೆ ಉರಿಯುತ್ತ ಸುಮಾರು ಸಾವಿರಾರು ಹೆಕ್ಟೇರ್ ಭೂಪ್ರದೇಶವನ್ನು ದಹಿಸಿ ಕರಕಲು ಮಾಡಿಬಿಟ್ಟಿ ದೆಯೆಂಬ ಸುದ್ದಿ ತುಂಬಾ ಆಘಾತಕಾರಿಯಾ ಗಿದೆ. ಇದು ನೈಸರ್ಗಿಕ ವಿಕೋಪವಂತೂ ಅಲ್ಲ. ಇದೊಂದು ಮಾನವ ನಿರ್ಮಿತ ಆಘಾತವೆನ್ನುವುದರಲ್ಲಿ ಎರಡು ಮಾತಿಲ್ಲ. ಏನೇ ಇದ್ದರೂ ಈ ದುರಂತದ ಹೊಣೆ ಹೊರಬೇಕಾದದ್ದು ಅರಣ್ಯ ಇಲಾಖೆಯೆಂಬುದನ್ನು ಅಲ್ಲಗಳೆಯುವಂತಿಲ್ಲ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಅರಣ್ಯ ಪ್ರದೇಶಗಳು ನಾನಾ ರೀತಿಯಲ್ಲಿ ವಿನಾಶಕ್ಕೆ ತುತ್ತಾಗುತ್ತಿರುವುದು ಸರ್ವರೂ ಅನುಮಾನಿಸಬಹುದಾದ ವಿಚಾರವೇ ಆಗಿದೆ.

ಮೊದಲನೆಯದಾಗಿ ನಾಗರಹೊಳೆ ಹಾಗೂ ಬಂಡೀಪುರ ಭಾಗದಲ್ಲಿ ಅಭಯಾರಣ್ಯಗಳೂ ಸೇರಿದಂತೆ ಎಲ್ಲೆಡೆ ವ್ಯಾಪಕವಾಗಿ ತೇಗದ ಮರಗಳನ್ನು ಅರಣ್ಯ ಇಲಾಖೆಯವರೇ ಬೆಳೆಸಿರುವುದರ ಮೂಲಕ ಅರಣ್ಯಗಳಿಗೆ ಹಾನಿಯುಂಟು ಮಾಡಲಾಗಿದೆ. ತೇಗದ ಮರಗಳು ಅರಣ್ಯ ಮರಗಳಲ್ಲ. ಅವುಗಳು ಮನುಷ್ಯನ ಉಪಯೋಗಕ್ಕಾಗಿ ಬೆಳೆಸುವ ವಾಣಿಜ್ಯ ಬೆಳೆ ಯಾಗಿದ್ದು, ಅವುಗಳನ್ನು ಖಾಸಗಿ ಜಮೀನಿನ ಹಿಡುವಳಿದಾರರು ಆರ್ಥಿಕ ಲಾಭಕ್ಕಾಗಿ ಬೆಳೆಸಬೇಕಾದ ಮರಗಳಾಗಿವೆ. ತೇಗದ ಮರಗಳಿಂದ ಕೂಡಿದ ಕಾಡಿನೊಳಗೆ ಪ್ರಾಣಿಗಳಿಗೆ ಅದರಲ್ಲೂ ಬೇಸಿಗೆ ಕಾಲದಲ್ಲಿ ವಾಸಿಸಲು ಸಾಧ್ಯವೇ ಇಲ್ಲ. ಅದರ ಎಲೆಗಳು ಒರಟಾಗಿದ್ದು, ಆ ಮರದ ಮೇಲೆ ಪಕ್ಷಿಗಳು ಗೂಡು ಕಟ್ಟುವುದಾಗಲೀ ವಾಸಿಸುವುದಾಗಲೀ ಸಾಧ್ಯವಿಲ್ಲ. ಮೃಗ ಪಕ್ಷಿ ಗಳಿಗೆ ಆಹಾರ ರೂಪದ ಹಣ್ಣುಗಳನ್ನು ಈ ಮರ ಬಿಡುವುದಿಲ್ಲ. ಈ ಮರದ ಎಲೆಗಳು ಒಣಗಿ ಉದುರಿ ನೆಲವನ್ನು ಆವರಿಸಿಬಿಟ್ಟರೆ, ಕಾಡ್ಗಿಚ್ಚಿನ ಅಪಾಯ ತಪ್ಪಿದ್ದಲ್ಲ. ಒಮ್ಮೆ ಬೆಂಕಿ ಬಿದ್ದರೆ ಸಾಕು. ಅದು ಇಡೀ ಅರಣ್ಯವನ್ನು ಆವರಿಸಿ ಸುಟ್ಟು ಕರಕಲಾಗಿಸಿ ಬಿಡುತ್ತದೆ. ತೇಗ ಮರದ ತರಗೆಲೆಗೆ ಬಿದ್ದ್ದ ಬೆಂಕಿಯನ್ನು ನಂದಿಸುವುದು ಸುಲಭದ ಮಾತಲ್ಲವೆಂದು ಒತ್ತಿ ಹೇಳಬೇಕಾಗಿಲ್ಲ.

ಹೀಗೆ ತೇಗದ ಗಿಡಗಳನ್ನು ನಾಗರಹೊಳೆ, ಬಂಡೀಪುರ ಅಭಯಾರಣ್ಯ ವಿಭಾಗದಲ್ಲಿ ವ್ಯಾಪಕವಾಗಿ ಅರಣ್ಯ ಇಲಾಖೆಯವರೇ ಬೆಳೆಸಿ ಅರಣ್ಯ ನಾಶಕ್ಕೆ ಕಾರಣರಾಗಿದ್ದಾರೆ. ಇಂತಹ ಹಾನಿಕಾರಕ ತೇಗದ ಗಿಡಗಳನ್ನು ತೆಗೆದು ಮರಳಿ ಆ ಪ್ರದೇಶವನ್ನು ನೈಜ ಅರಣ್ಯವನ್ನಾಗಿ ಪರಿವರ್ತಿಸುವ ಮಾತೇ ಕೇಳಿ ಬರುತ್ತಿಲ್ಲ. ಅಭಯಾರಣ್ಯದಿಂದ ಆನೆ, ಹುಲಿ ಇತ್ಯಾದಿ ಪ್ರಾಣಿಗಳು ಕಾಡನ್ನು ಬಿಟ್ಟು ಕೃಷಿ ವಲಯಯವಾಗಿರುವ ನಾಡಿಗೆ ಧಾವಿಸುತ್ತಿರುವುದಕ್ಕೆ ಅರಣ್ಯವನ್ನು ತೇಗ ಮರದ ತೋಟವನ್ನಾಗಿ ಪರಿವರ್ತನೆ ಮಾಡಿರುವುದೇ ಮುಖ್ಯ ಕಾರಣವಾಗಿದೆ ಎಂಬುದನ್ನು ಅಲ್ಲಗಳೆಯಲಾಗದು. ಇದಲ್ಲದೆ ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯವರೇ ರಬ್ಬರ್ ಬೆಳೆಸಿರುವುದು ನೀಲಗಿರಿ, ಅಕೇಶಿಯಾ ಇತ್ಯಾದಿ ಸಾಮಾಜಿಕ ಅರಣ್ಯ ಮರಗಳನ್ನು ಬೆಳೆಸಿರುವುದು ಅರಣ್ಯ ನಾಶಕ್ಕೆ ಕಾರಣವಾಗಿದೆ. ಆನೆಗಳಿಗೆ ಅರಣ್ಯದಲ್ಲಿ ಆಹಾರ, ನೀರು ಕೊರತೆಯಾಗಿರುವುದಕ್ಕೆ ಇದೇ ಪ್ರಮುಖ ಕಾರಣ. ಆನೆಗಳು ಆಹಾರ, ನೀರು ಹುಡುಕಿಕೊಂಡು ಕೃಷಿ ಜಮೀನು ಗಳತ್ತ ಪಲಾಯನ ಮಾಡುತ್ತಿದ್ದರೂ, ಅರಣ್ಯದಲ್ಲಿ ಆನೆಗಳಿಗೆ ಆಹಾರ ನೀರು ದೊರಕುವಂತೆ ಮಾಡುವ ಯಾವುದೇ ಕಾರ್ಯ ಯೋಜನೆ ಯನ್ನು ಜಾರಿಗೆ ತರುವುದರಲ್ಲಿ ಅರಣ್ಯ ಇಲಾಖೆ ಹಾಗೂ ಇದರೊಡನೆ ಕೈಜೋಡಿಸಿರುವ ಜನವಿರೋಧಿ ಪರಿಸರವಾದಿಗಳು ಉತ್ಸುಕರಾಗಿಲ್ಲ. ಏಕೆಂದರೆ ಆನೆಗಳನ್ನು ಕಾಡಿನಿಂದ ನಾಡಿಗೆ ಅಟ್ಟಿಸಿ, ಕೃಷಿಕರ ಬದುಕಿಗೆ ಕೊಳ್ಳಿ ಇಡುವುದೇ ಅರಣ್ಯ ಇಲಾಖೆ ಹಾಗೂ ಢೋಂಗಿ ಪರಿಸರವಾದಿಗಳ ಒಕ್ಕೂಟದ ಹಿಡನ್ ಅಜೆಂಡಾ ಆಗಿದೆ. ಕೆಲವು ವರ್ಷಗಳ ಹಿಂದೆ ಕೊಡಗಿ ನಾದ್ಯಂತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಸಿದ ಪ್ರಕರಣ ಗಳು ಬೆಳಕಿಗೆ ಬಂದಿದ್ದವು. ಹೀಗೆ ಬೆಳೆಸಿ ಅರಣ್ಯ ನಾಶಮಾಡುವುದು ಅರಣ್ಯ ಇಲಾಖೆಯ ಸಹಭಾಗಿತ್ವದಿಂದಲೇ ಎಂದು ಬೇರೆ ಹೇಳಬೇಕಾಗಿಲ್ಲ. ಜೊತೆಗೆ ಮರಗಳ್ಳರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಎಗ್ಗಿಲ್ಲದೆ ಮರ ಗಳನ್ನು ಕಡಿದು ಸಾಗಿಸುತ್ತಿರುವುದು ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆ ಅರಣ್ಯ ಇಲಾಖೆಯವರ ಸಹಾನುಭೂತಿಯಿಲ್ಲದೆ ಸಾಧ್ಯವೇ ಇಲ್ಲ. ಈ ಹಲವು ಕಾರಣಗಳಿಂದ ಅರಣ್ಯ ನಾಶ ನಡೆಯುತ್ತಲೇ ಇದೆ. ಆದರೆ ಈ ಬಗ್ಗೆ ಯಾವ ಪರಿಸರವಾದಿಗಳೂ ಆಕ್ಷೇಪವೆತ್ತಿದ್ದು ಕಂಡು ಬರುತ್ತಿಲ್ಲ. ಏಕೆಂದರೆ ಅರಣ್ಯವನ್ನು ನಾಶಮಾಡುವ ಈ ಎಲ್ಲಾ ಚಟುವಟಿಕೆ ಗಳೂ ಅರಣ್ಯ ಇಲಾಖೆ ಹಾಗೂ ಪರಿಸರವಾದಿಗಳ ಜಂಟಿ ನಿರ್ದೇಶನ ದಲ್ಲಿಯೇ ನಡೆಯುತ್ತಿವೆ. ಹೀಗೆ ಅರಣ್ಯವನ್ನು ನಾಶ ಮಾಡಿ, ಕಾಡು ಪ್ರಾಣಿಗ ಳನ್ನು ಕಾಡಿನಿಂದ ನಾಡಿಗಟ್ಟಿ, ಕೃಷಿ ವಲಯದ ಜನರ ಬದುಕಿಗೆ ಕೊಳ್ಳಿಯಿ ಡುವ ಅರಣ್ಯ ಇಲಾಖೆ ಹಾಗೂ ಇವರೊಡನೆ ಶಾಮೀಲಾಗಿರುವ ಪರಿಸರವಾದಿಗಳದ್ದಾಗಿದೆ. ಇದಕ್ಕೊಂದು ಪಟ್ಟಭದ್ರ ಹಿತಾಸಕ್ತಿ ಇದ್ದೇ ಇದೆ. ವರ್ಷ ವರ್ಷ ಅರಣ್ಯ ನಾಶವಾಗುತ್ತಿರುವುದಕ್ಕೆ ಮತ್ತೊಂದು ಪ್ರಬಲ ಕಾರಣ ಕಾಡ್ಗಿಚ್ಚು. ಈ ವರ್ಷ ಬೇಸಿಗೆ ಪ್ರಾರಂಭದಲ್ಲಿಯೇ ಬಂಡೀಪುರ ಅಭಯಾರಣ್ಯ ಕಾಡ್ಗಿಚ್ಚಿಗೆ ಆಹುತಿಯಾಗಿ, ಹತ್ತು ಸಾವಿರ ಎಕರೆಗಿಂತಲೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟು ಕರಕಲಾಗಿ ಹೋಯಿತು. ಈ ಬೆಂಕಿಗೆ ಸಿಕ್ಕ ಅದೆಷ್ಟು ಪ್ರಾಣಿ, ಪಕ್ಷಿಗಳು ಸುಟ್ಟು ಹೋದುವೋ ಗೊತ್ತಿಲ್ಲ. ಅಪಾರ ಪ್ರಮಾಣದಲ್ಲಿ ಪ್ರಾಣಿ ಪಕ್ಷಿಗಳು ಬೆಂಕಿಗಾಹುತಿಯಾಗಿದ್ದಾ ವೆಂಬುದ ರಲ್ಲಂತೂ ಅನುಮಾನವಿಲ್ಲ. ಪ್ರಾಣಿಗಳಿಗೆ ಅಪಾಯವುಂಟಾಗುತ್ತದೆಂಬ ಕಾರಣ ಒಡ್ಡಿ ಬಂಡೀಪುರ ಕೇರಳ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು. ಇದ ರಿಂದ ಎಷ್ಟು ಪ್ರಾಣಿಗಳ ಪ್ರಾಣ ಉಳಿಯಿತೋಗೊತ್ತಿಲ್ಲ. ರಾತ್ರಿ ವಾಹನ ಸಂಚಾರದಿಂದ ಅಪ ಘಾತವುಂಟಾಗಿ ಪ್ರಾಣಿಗಳು ಸಾಯುತ್ತವೆಂಬ ಕಪೋಲ ಕಲ್ಪಿತ ಕಾರಣವೊಡ್ಡಿ ರಾತ್ರಿ ಸಂಚಾರ ನಿಷೇಧಿಸುವ ಮೂರ್ಖ ತೀರ್ಮಾನ ಕೈಗೊಳ್ಳಲಾಯಿತು. ಇನ್ನೊಂದೆಡೆ ಕಾಡ್ಗಿಚ್ಚು ಪ್ರಾಣಿ ಪಕ್ಷಿಗ ಳನ್ನು ಅಪಾರ ಪ್ರಮಾಣದಲ್ಲಿ ಬಲಿ ತೆಗೆದು ಕೊಂಡು ಬಿಟ್ಟತು. ಒಂದು ವೇಳೆ ರಾತ್ರಿ ವಾಹನ ಸಂಚಾರದಿಂದ ಪ್ರಾಣಿಗಳಿಗೆ ಅಪಾ ಯವಿದ್ದರೂ, ರಸ್ತೆಯಲ್ಲಿ ವಾಹನ ಸಾಗಟ ಸ್ಥಗಿತಗೊಳಿಸುವುದು ಅದಕ್ಕೆ ಪರಿಹಾರವಲ್ಲ. ಪ್ರಾಣಿಗಳು ಸುರಕ್ಷಿತವಾಗಿರುವ ಹಾಗೆ ಸುರಕ್ಷೆ ಕಾಪಾಡಲು ಪರ್ಯಾಯ ಕಾರ್ಯ ಯೋಜ ನೆಯನ್ನು ರೂಪಿಸಬೇಕಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಬೇಲಿ ನಿರ್ಮಾಣ ಮಾಡುವುದು ಸುರಂಗ ಮಾರ್ಗ ಯಾ ಮೇಲ್ಸೇತುವೆ ಇದಕ್ಕಿರುವ ಪರ್ಯಾ ಯ. ಇದೆಲ್ಲವನ್ನು ಬಿಟ್ಟು ವಾಹನ ಸಂಚಾರವನ್ನೇ ನಿಲ್ಲಿಸಿ ಬಿಟ್ಟರೆ ಪ್ರಾಣಿಗಳು ಉಳಿದಂತಾಗುದಿಲ್ಲ. ಬದಲಾಗಿ ಮನುಷ್ಯ ರು ಸಂಕಷ್ಟ ಕ್ಕೊಳ ಗಾಗುತ್ತಾರೆ. ಬಂಡೀಪುರ, ಕಾಡ್ಗಿ ಚ್ಚಿನಿಂದ ಮಾತ್ರ ಅಪಾರ ಪ್ರಮಾಣ ದಲ್ಲಿ ಪ್ರಾಣಿ, ಪಕ್ಷಿಗ ಳು ಅಸುನೀಗಿದ್ದಾವೆ. ಬಂಡೀಪುರ ಅಭ ಯಾರಣ್ಯದಲ್ಲಿ ಹೊತ್ತಿ ಉರಿದ ಬೆಂಕಿ ಕಿಡಿಗೇಡಿಗಳ ಕೃತ್ಯವೆಂದು ಅರಣ್ಯ ಅಧಿಕಾರಿಗಳು ಹೇಳುತ್ತಾ ಬಂದಿದ್ದಾರೆ. ಹಾಗಾದರೆ ಆ ಕಿಡಿಗೇಡಿಗಳು ಯಾರು ಎಂಬುದಾದರೂ ಪತ್ತೆಯಾಗಬೇಕಲ್ಲ. ಒಂದಂತೂ ಸತ್ಯ. ಅರಣ್ಯ ರಕ್ಷಣೆಯ ಹೊಣೆಗಾರಿಕೆ ಅರಣ್ಯ ಇಲಾಖೆಯದ್ದು. ಅದರಲ್ಲಿ ಅವರು ವಿಫಲರಾದರೆ, ಪ್ರಾಯಃ ಶ್ಚಿತ್ತ ಅನುಭವಿಸಬೇಕು. ಅರಣ್ಯ ರಕ್ಷಣೆಯಲ್ಲಿ ಅವರು ವಿಫಲರಾದುದರ ಕಾರಣವೇನೆಂದು ಜನತೆಗೆ ವಿವರಿಸಬೇಕಾಗುತ್ತದೆ. ನೆಪ ಹೇಳಿ ನುಣು ಚಿಕೊಳ್ಳುವಂತಿಲ್ಲ. ಅಭಯಾರಣ್ಯಕ್ಕೆ ಕೊಳ್ಳಿ ಇಟ್ಟವರು ಇಲಾಖೆಯ ಒಳಗೇ ಇದ್ದಾರೋ ಅಥವಾ ಹೊರಗಿನವರೋ ಗೊತ್ತಾಗಬೇಕು. ಈ ವರ್ಷದಂತೆ ಕಳೆದ ವರ್ಷ ಸಹ ರಾಜ್ಯದ ಹಲವೆಡೆ ಅರಣ್ಯಕ್ಕೆ ಬೆಂಕಿ ಬಿದ್ದು ಸಾವಿರಾರು ಎಕರೆ ಬೆಂದು ಕರಕಲಾಗಿತ್ತು. ಆಗ ಈ ಅನಾಹುತಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಇವರೊಡನೆ ಕೈಜೋಡಿಸಿರುವ ಪರಿಸರವಾದಿಗಳು ಕಾರಣವೆಂಬ ಗುಮಾನಿ ಸಾರ್ವತ್ರಿಕವಾಗಿ ಎದ್ದಿತು. ಎಲ್ಲಾ ಸನ್ನಿವೇಶಗಳು ಪರಿಸರವಾದಿಗಳು ಮತ್ತು ಅರಣ್ಯ ಇಲಾಖೆಯ ಕಡೆಗೇ ಬೆಟ್ಟು ಮಾಡುತ್ತಿದ್ದವು. ಈ ಬಗ್ಗೆ ಸತ್ಯ ಹೊರಗೆಡಹಲು ಕೈಗೊಳ್ಳಲಾದ ಇಲಾಖಾ ವಿಚಾರಣೆ ಸದ್ದಿಲ್ಲದೆಯೇ ಸ್ತಬ್ಧವಾಗಿ ಹೋಯಿತು. ಇದರಿಂದ ಜನರ ಗುಮಾನಿ ನಿಜವಿರಬಹುದೆಂಬುದಕ್ಕೆ ಮತ್ತಷ್ಟು ಅವಕಾಶ ವುಂಟಾಯಿತು. ಭ್ರಷ್ಟ ಇಲಾಖಾ ಸಿಬ್ಬಂದಿ ಮತ್ತು ಸಮಾಜ ದ್ರೋಹಿ ಪರಿಸರವಾದಿಗಳ ಒಕ್ಕೂಟಕ್ಕೆ ಅರಣ್ಯಕ್ಕೆ ಬೆಂಕಿ ಇಡುವ ಪಟ್ಟಭದ್ರ ದುಷ್ಟಕೂಟಗಳು ಸಹಕಾರಿಯಾಗಿವೆ.

ಈಗ ಬೆಂಕಿ ಬಿದ್ದ ಬಂಡೀಪುರ ಅಭಯಾ ರಣ್ಯದ ಸುತ್ತಲಿದ್ದ ಕೆಲವು ರೈತರನ್ನು ಅರಣ್ಯ ಬೆಂಕಿ ಇಟ್ಟ ಅಪರಾಧಕ್ಕಾಗಿ ದಸ್ತಗಿರಿಮಾಡಲಾಗಿದೆಯೆಂದು ಮತ್ತು ಅವರು ಹುಲಿಗಳ ಕಾಟ ತಡೆಯಲಾಗದೆ ತಾವೇ ಅರಣ್ಯಕ್ಕೆ ಬೆಂಕಿ ಇಟ್ಟದ್ದೆಂದು ಒಪ್ಪಿಕೊಂಡಿ ದ್ದಾರೆಂದು ವರದಿಯಾಗಿದೆ. ಇದರ ಅರ್ಥ ಅರಣ್ಯ ಇಲಾಖೆ ಯವರು ಸುತ್ತಮುತ್ತಲಿನ ಕೃಷಿಕರಿಗೆ ಹುಲಿ ರಕ್ಷಣೆ ನೆಪ ದಲ್ಲಿ ನಾನಾ ರೀತಿಯಲ್ಲಿ ಕಿರುಕುಳಕ್ಕೆ ಒಳಪಡಿಸುತ್ತಿ ದ್ದಾರೆ ಎಂದೇ ಆಗಿದೆ. 1994ನೇ ಇಸವಿ ಯಲ್ಲಿ ನಾಗರಹೊಳೆ ಅಭಯಾರಣ್ಯಕ್ಕೆ ವ್ಯಾಪಕವಾಗಿ ಬೆಂಕಿ ಇಡಲಾಗಿತ್ತು. ಸಾವಿ ರಾರು ಎಕರೆ ಅಭಯಾ ರಣ್ಯ ಬೆಂಕಿಗೆ ಅಹುತಿ ಯಾಗಿ ಕರಕಲಾಗಿ ಹೋಗಿ ತ್ತು. ಆ ಸಂದರ್ಭದಲ್ಲಿ ಅರ ಣ್ಯಕ್ಕೆ ಬೆಂಕಿ ಇಟ್ಟವರು ತಾವೇ ಎಂದು ಕೊಡಗಿನ ಏಕೀಕರಣ ರಂಗ ಎಂಬ ಹೋರಾಟ ಸಮಿತಿಯ ಸದಸ್ಯರು ಬಹಿರಂಗವಾಗಿ ಘೋಷ ಣೆ ಮಾಡಿಕೊಂಡಿದ್ದರು. ಅದಕ್ಕೆ ಕಾರಣ ಅಂದು ಅಲ್ಲಿ ಅರಣ್ಯ ವಲಯಾಧಿಕಾರಿ ಯಾಗಿದ್ದ ಕೆ.ಎಂ. ಚಿಣ್ಣಪ್ಪ ಎಂಬವರ ವಿರುದ್ಧ ಸಾರ್ವಜನಿಕರಿಗಿದ್ದ ಆಕ್ರೋಶ ವಾಗಿತ್ತು.

ಆತ ಉಲ್ಲಾಸಕಾರಂತ ನೇತೃತ್ವದ ಪರಿಸರವಾದಿಗಳ ಪರವಾಗಿ ಅರಣ್ಯ ವಲಯಾಧಿಕಾರಿಯಾಗಿ ಇದ್ದುಕೊಂಡೇ ಕೆಲಸ ಮಾಡುತ್ತಾ, ಸಾರ್ವಜನಿಕರಿಗೆ ತನ್ನ ಅಧಿಕಾರದ ದುರುಪಯೋಗ ಮಾಡಿಕೊಂಡು ನಾನಾ ರೀತಿಯಲ್ಲಿ ಹಿಂಸೆ ನೀಡುತ್ತಿದ್ದ. ಇದರಿಂದ ಕೋಪ ಗೊಂಡ ಸಾರ್ವಜನಿಕರು ನಾಗರಹೊಳೆ ಅಭಯಾರಣ್ಯಕ್ಕೆ ಬೆಂಕಿ ಹಚ್ಚಿ ಸುಟ್ಟಿದ್ದರು. ಈ ಬಗ್ಗೆ ಹಲವಾರು ಜನರ ಮೇಲೆ ಮೊಕದ್ದಮೆ ಹೂಡಲಾದರೂ ಯಾರಿಗೂ ಶಿಕ್ಷೆಯಾಗಲಿಲ್ಲ. ನಂತರ ಅಂದಿನ ವಲಯಾಧಿಕಾರಿ ಕೆ.ಎಂ. ಚಿಣ್ಣಪ್ಪ ತನ್ನ ಹುದ್ದೆಗೆ ರಾಜೀನಾಮೆ ಕೊಟ್ಟು, ನೇರವಾಗಿಯೇ ಪರಿಸರವಾದಿ ಸರಕಾರೇತರ ಸಂಸ್ಥೆಗೆ ಸೇರಿ ಕೊಂಡ. ಜೊತೆಗೆ ಅರಣ್ಯಕ್ಕೆ ಬೆಂಕಿ ಇಟ್ಟಿದ್ದ ಕೊಡಗು ಏಕೀಕರಣ ರಂಗದ ಮುಖಂಡ ಕೂಡ ಈ ಪರಿಸರವಾದಿಗಳ ತಂಡಕ್ಕೆ ಸೇರಿಕೊಂಡು ಕೆ.ಎಂ. ಚಿಣ್ಣಪ್ಪರೊಡನೆ ಕೈಜೋಡಿಸಿಕೊಂಡು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಎಲ್ಲಾ ಘಟನೆಗಳ ಹಿನ್ನೆಲೆಗಳಲ್ಲಿ ವಿಮರ್ಶೆ ಮಾಡುವಾಗ ಅರಣ್ಯಕ್ಕೆ ಬೆಂಕಿ ಬಿದ್ದರೆ ಅದಕ್ಕೆ ಅರಣ್ಯ ಇಲಾಖೆಯವರೇ ಹೊಣೆಗಾರರಲ್ಲದೆ, ಬೇರೆ ಯಾರೂ ಅಲ್ಲ. ಅರಣ್ಯ ಇಲಾಖೆಯವರು ಅರಣ್ಯ ರಕ್ಷಿಸುವುದರಲ್ಲಿ ತೊಡಗಿಕೊಳ್ಳುವುದನ್ನು ಬಿಟ್ಟು, ಅರಣ್ಯ ವನ್ನು ನಾನಾ ಮಾರ್ಗಗಳಿಂದ ವಿನಾಶಕ್ಕೊಳಪಡಿಸಿ, ಸುತ್ತಮುತ್ತಲಿನ ಕೃಷಿಕರನ್ನು ಅರಣ್ಯ ರಕ್ಷಣೆಯ ಹೆಸರಿನಲ್ಲಿ ಕಿರುಕುಳಕ್ಕೆ ಒಳಪಡಿಸುತ್ತಾ ಬಂದಿದ್ದಾರೆ. ಕೃಷಿ ವಲಯ ವನ್ನು ಅಡ್ಡಮಾರ್ಗಗಳಿಂದ ಅರಣ್ಯವನ್ನಾಗಿ ಪರಿವರ್ತಿಸುವ ಕಾಯಕದಲ್ಲಿ ಭ್ರಷ್ಟ ಅರಣ್ಯಾಧಿಕಾರಿಗಳು, ಢೋಂಗಿ ಪರಿಸರವಾದಿಗಳ ಜೊತೆ ಕೈಜೋಡಿಸಿಕೊಂಡು ಕಾರ್ಯೋನ್ಮುಖರಾಗಿರುವುದೇ ಅರಣ್ಯ ವಿನಾಶ ಮತ್ತು ಕೃಷಿಕರ ಸಂಕಷ್ಟ ಎರಡಕ್ಕೂ ಕಾರಣವಾಗಿದೆ ಎಂದು ಹೇಳಲು ಹಿಂಜರಿಯಬೇಕಾಗಿಲ್ಲ.

ಅರಣ್ಯ ವಲಯಧಿಕಾರಿ ಚಿಣ್ಣಪ್ಪನವರ ವಿರುದ್ಧದ ಕೋಪದಿಂದಾಗಿ ನಾಗರ ಹೊಳೆ ಅರಣ್ಯಕ್ಕೆ ಬೆಂಕಿ ಇಟ್ಟಿದ್ದು ಸರಿಯಲ್ಲವೆಂದು, ಅರಣ್ಯ ಸಾರ್ವಜನಿಕರ ಸೊತ್ತಲ್ಲದೆ, ಅರಣ್ಯಾಧಿಕಾರಿಗೆ ಸೇರಿದ ಸೊತ್ತಲ್ಲ. ಆದ್ದರಿಂದ ಅಧಿಕಾರಿಗಳ ವಿರುದ್ಧದ ಕೋಪದಿಂದ ಅರಣ್ಯಕ್ಕೆ ಬೆಂಕಿ ಇಡುವುದು ಸರಿಯಲ್ಲವೆಂದು, ಆ ಕಾಲದಲ್ಲಿ ನಾನು ಪ್ರತಿಪಾದನೆ ಮಾಡಿದ್ದೆ. ಆದರೂ ಜನ ಅರಣ್ಯ ಅಧಿಕಾರಿಗಳ ಮೇಲಿನ ಕೋಪವನ್ನು ಅರಣ್ಯಕ್ಕೆ ಬೆಂಕಿ ಇಡುವುದರ ಮೂಲಕ ತೀರಿಸಿಕೊಳ್ಳುವುದು ನಡೆದೇ ಇದೆ. ಅರಣ್ಯ ರಕ್ಷಣೆಗೆ ಆದ್ಯತೆ ನೀಡಬೇಕಾದ ಅರಣ್ಯಾಧಿಕಾರಿಗಳು ಜನ ಸ್ನೇಹಿತರಾಗಿದ್ದುಕೊಂಡು ಜನರ ಒಲವನ್ನು ಗಳಿಸಿಕೊಂಡು, ಜನರ ಸಹಕಾರದೊಂದಿಗೆ ಅರಣ್ಯ ರಕ್ಷಣೆಗೆ ಮುಂದಾಗು ವುದರ ಕಡೆಗೆ ಆದ್ಯತೆ ನೀಡಬೇಕೇ ವಿನಹ, ಕಸ್ತೂರಿ ರಂಗನ್ ವರದಿಯಂತಹ ಜನ ವಿರೋಧಿಯನ್ನು ಹಿಡಿದುಕೊಂಡು ಅದನ್ನು ಜಾರಿ ಮಾಡುವುದರ ಮೂಲಕ ಜನರ ಬದುಕಿಗೆ ಬೆಂಕಿ ಇಡುವಂತಹ ಚಟುವಟಿಕೆ ಮುಂದುವರಿ ಸುವುದಲ್ಲ.

ಕಸ್ತೂರಿರಂಗನ್‌ವರದಿಜಾರಿಬೆಂಕಿಯಿಂದಅರಣ್ಯನಾಶವಾಗುವುದಕ್ಕೆ ಪರಿಹಾರವಲ್ಲ. ಅರಣ್ಯಇಲಾಖೆಯವರುಅರಣ್ಯರಕ್ಷಣೆಕಡೆಗೆಹೆಚ್ಚಿನಗಮನಕೊಟ್ಟು ಅರಣ್ಯವನ್ನುರಕ್ಷಿಸುವುದಲ್ಲದೆ, ಈಗಾಗಲೇನಾಶವಾಗಿರುವಅರಣ್ಯವನ್ನುಪುನಃಶ್ಚೇತನಗೊಳಿಸಬೇಕಾಗಿರುವುದುಇಂದಿನಆದ್ಯತೆಆಗಬೇಕು.

ಅರಣ್ಯಕ್ಕೆ ಬೆಂಕಿ ಬಿದ್ದರೆ ಅದಕ್ಕೆ ಅರಣ್ಯ ಇಲಾಖೆಯವರೇ ಹೊಣೆಗಾರರಲ್ಲದೆ, ಬೇರೆ ಯಾರೂ ಅಲ್ಲ. ಅರಣ್ಯ ಇಲಾಖೆಯವರು ಅರಣ್ಯ ರಕ್ಷಿಸುವುದರಲ್ಲಿ ತೊಡಗಿಕೊಳ್ಳು ವುದನ್ನು ಬಿಟ್ಟು, ಅರಣ್ಯವನ್ನು ನಾನಾ ಮಾರ್ಗಗಳಿಂದ ವಿನಾಶಕ್ಕೊಳಪಡಿಸಿ, ಸುತ್ತ ಮುತ್ತಲಿನ ಕೃಷಿಕರನ್ನು ಅರಣ್ಯ ರಕ್ಷಣೆಯ ಹೆಸರಿನಲ್ಲಿ ಕಿರುಕುಳಕ್ಕೆ ಒಳಪಡಿಸುತ್ತಾ ಬಂದಿದ್ದಾರೆ.

Writer - ಎ.ಕೆ ಸುಬ್ಬಯ್ಯ

contributor

Editor - ಎ.ಕೆ ಸುಬ್ಬಯ್ಯ

contributor

Similar News